ತೀರ್ಥಹಳ್ಳಿ: ಕೋಣಂದೂರು ಸಮೀಪದ ಹಲ್ಲುಸಾಲೆ ಗ್ರಾಮದಲ್ಲಿ ಎರಡು ವೀರಗಲ್ಲುಗಳು ಪತ್ತೆಯಾಗಿವೆ. ಹೊಯ್ಸಳರ ಕಾಲದ ಲಿಪಿಯಲ್ಲಿ ಬರೆಯಲಾಗಿರುವ ವೀರಗಲ್ಲುಗಳು ಕ್ರಿ.ಶ. 1250 ಮತ್ತು 1251ನೇ ಇಸವಿಗೆ ಸರಿ ಹೊಂದುತ್ತವೆ. 6 ಅಡಿ ಎತ್ತರದ 5 ಅಂತಸ್ತಿನ ಶಾಸನಗಳಲ್ಲಿ 23 ಮತ್ತು 24 ಸಾಲುಗಳಿಂದ ಬರೆಯಲ್ಪಟ್ಟಿದೆ.

ಸಗಡವಳ್ಳಿಯ ನಾಡಾಧಿಪತಿಯಾಗಿದ್ದ ಮಾಂಡಲಿಕ ಸಿರಿಯಮ್ಮ ಹೆಗ್ಗಡೆ ಹಾಗೂ ಹೆದ್ದೂರು ನಾಡಾಧಿಪತಿಯಾಗಿದ್ದ ಅಣ್ಣಮ್ಮ ಹೆಗ್ಗಡೆ ನಡುವೆ ನಡೆದ ಕುದುರೆ ಕಾಳಗವನ್ನು ಇದರಲ್ಲಿ ವರ್ಣಿಸಲಾಗಿದೆ. ಸಿರಿಯಮ್ಮ ಹೆಗ್ಗಡೆ ಮತ್ತು ಅವರ ಮಾವ ಹೊಯ್ಸಯ್ಯ ವೀರಾವೇಶದಿಂದ ಹೋರಾಡುತ್ತಿರುವಾಗ ಮರಣ ಹೊಂದಿದ ವಿವರಣೆ ಇದೆ. ಹೊಯ್ಸಯ್ಯನ ಕಿರಿಯ ಸಹೋದರ ಜಕ್ಕಯ್ಯನಿಗೆ ಒಂದು ಸಲಿಗೆ ಭೂಮಿಯನ್ನು ದಾನ ಮಾಡಿದುದರ ಬಗ್ಗೆ ಉಲ್ಲೇಖಿಸಲಾಗಿದೆ.

ಶಾಸನದ ಆರಂಭ ‘ನಮಃಸ್ತುಂಗ ಶಿರಶ್ಚುಂಬಿ...’ ಎಂಬ ಶೈವ ಶ್ಲೋಕದಿಂದ ಆರಂಭವಾಗುತ್ತದೆ. ನಂತರದ ಸಾಲಿನಲ್ಲಿ ಸಿರಿಯಮ್ಮ ಹೆಗ್ಗಡೆಯ ಬಿರುದಾವಳಿ ಹಾಗೂ ದಿನಾಂಕದ ಉಲ್ಲೇಖವಿದೆ. 5 ಹಂತಗಳಲ್ಲೂ ಯುದ್ಧದ ವರ್ಣನೆ ಹಾಗೂ ದೃಶ್ಯಗಳಿವೆ. ಶತ್ರು ಸೈನ್ಯದ ಬಾಣಗಳಿಂದ ತಿವಿದಿದ್ದ ಹಾಗೂ ಕುದುರೆಗಳ ಉದ್ಧಟತನದಿಂದ ಸಿರಿಯಮ್ಮ ಹೆಗ್ಗಡೆಯೂ ರಣರಂಗದಲ್ಲಿ ಹತ್ಯೆಯಾಗಿ ಮಾವ ಹೊಯ್ಸಯ್ಯನು ಅವರ ಹೆಣವನ್ನು ಹೊತ್ತೊಯ್ಯುವಾಗ ಶತ್ರುಗಳ ಸೈನಿಕರು ಹೊಯ್ಸಯ್ಯನನ್ನು ಹತ್ಯೆ ಮಾಡುವರು. ಇಡೀ ಯುದ್ಧರಂಗವೇ ಹೆಣಮಯದಿಂದ ಕೂಡಿರುವುದು. ಯುದ್ಧದಲ್ಲಿ ಪ್ರಾಣಬಿಟ್ಟ ಸಿರಿಯಮ್ಮ ಹೆಗ್ಗಡೆಯನ್ನು ದೇವಲೋಕದ ಅಪ್ಸರೆಯರು ಸ್ವರ್ಗಕ್ಕೆ ಕೊಂಡೊಯ್ಯುವರು. ಈ ವೀರಗಲ್ಲನ್ನು ನಾಶ ಮಾಡದಂತೆ ಕೊನೆಯಲ್ಲಿ ಶಾಪಾಶಯವನ್ನು ನೀಡಲಾಗಿದೆ.

‘ಮತ್ತೊಂದು ವೀರಗಲ್ಲಿನಲ್ಲಿ ಮಾಂಡಲಿಕರಾದ ಸಿರಿಯಮ್ಮ ಹೆಗ್ಗಡೆಯ ಬಿರುದಾವಳಿಗಳು ಶಾಸನವನ್ನು ಅಚ್ಚು ಹಾಕಿಸಿದ ದಿನಾಂಕ ನಂತರದ ಸಾಲುಗಳಲ್ಲಿ ಯುದ್ಧದ ವರ್ಣನೆ, ಅಂತ್ಯದಲ್ಲಿ ಶಾಪಾಶಯ ಉಲ್ಲೇಖಿಸಲಾಗಿದೆ. ಈ ಶಾಸನದ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ಆಗಬೇಕು’ ಎಂದು ಶೃಂಗೇರಿಯ ಸಂಸ್ಕೃತ ವಿಶ್ವವಿದ್ಯಾಲಯದ ಇತಿಹಾಸ ಸಹಾಯಕ ಪ್ರಾಧ್ಯಾಪಕ ಎಂ.ಎ. ಪ್ರಭಾಕರ್ ಅಭಿಪ್ರಾಯಪಟ್ಟಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-42-902492055

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.