ತೀರ್ಥಹಳ್ಳಿ: ‘ಮುಂಡೊಳ್ಳಿ ಗುತ್ತಿಗೆ ಮರಳು ಕ್ವಾರಿಯಲ್ಲಿ ನಿತ್ಯ 200 ಲೋಡ್ ಮರಳು ಸಾಗಣೆಯಾಗುತ್ತಿದೆ. ಕಳೆದ ವರ್ಷ 28,000 ಟನ್ ಮರಳು ಹಂಚಿಕೆ ಮಾಡಿ, ಕೇವಲ 57 ಟನ್ ಮರಳಿಗೆ ಪರ್ಮಿಟ್ ಪಡೆಯಲಾಗಿದೆ. ಹಾಗಾದರೆ ಸಂಗ್ರಹಿಸಿದ ಮರಳು ಎಲ್ಲಿ’ ಎಂದು ಶಾಸಕ ಆರಗ ಜ್ಞಾನೇಂದ್ರ ಅಧಿಕಾರಿಗಳನ್ನು ಪ್ರಶ್ನಿಸಿದರು.

ಸೋಮವಾರ ಮುಂಡೊಳ್ಳಿ ಮರಳು ಕ್ವಾರಿಯನ್ನು ಪರಿಶೀಲಿಸಿ ಮಾತನಾಡಿದ ಅವರು, ‘ಸಾವಿರಾರು ಟನ್ ಮರಳು ಸಾಗಾಣೆಯಾಗುತ್ತಿದ್ದು, ನಯಾಪೈಸೆ ಜಿಎಸ್ಟಿ ಪಾವತಿಸುತ್ತಿಲ್ಲ. ಸರ್ಕಾರದ ಬೊಕ್ಕಸವನ್ನು ರಕ್ಷಣೆ ಮಾಡಬೇಕಾದ ಗಣಿ ಇಲಾಖೆ ತೆಪ್ಪಗೆ ಕುಳಿತಿದೆ’ ಎಂದು ದೂರಿದರು.

‘ಅಕ್ರಮ ನಡೆಯುತ್ತಿದ್ದರೂ ಇಲ್ಲಿಯವರೆಗೆ 100 ಟನ್ಗೆ ಮಾತ್ರ ದಂಡ ಹಾಕಲಾಗಿದೆ. ಕಳೆದ ವರ್ಷ ಶೇ 50ರಷ್ಟು ಮರಳನ್ನು ಖಾಲಿ ಮಾಡದಿದ್ದರೂ ಪ್ರಸಕ್ತ ಸಾಲಿನಲ್ಲಿ ಗುತ್ತಿಗೆದಾರನಿಗೆ ಮರಳು ತೆಗೆಯಲು ಅವಕಾಶ ನೀಡಲಾಗಿದೆ. ಟನ್ಗೆ ಹೆಚ್ಚುವರಿ ರಾಜಧನ ನೀಡುವ ಭರವಸೆಯೊಂದಿಗೆ ಗುತ್ತಿಗೆ ಪಡೆದಿದ್ದರೆ ಅದು ಆತನ ಹಣೆಬರಹ. ಆತನಿಗೆ ಆಗದಿದ್ದರೆ ಕಪ್ಪುಪಟ್ಟಿಗೆ ಸೇರಿಸಿ ಹೊಸ ಗುತ್ತಿಗೆ ಪ್ರಕ್ರಿಯೆ ಆರಂಭಿಸಿ. ಆದರೆ, ಜನರಿಗೆ ಮಾತ್ರ ಮರಳು ನೀಡಿ’ ಎಂದು ಒತ್ತಾಯಿಸಿದರು.

‘ಟಿಪ್ಪರ್ ಲಾರಿ ಸಾಮರ್ಥ್ಯ 20 ಟನ್ ಇದ್ದು, 8 ಟನ್ಗೆ ಅನುಮತಿ ನೀಡಲಾಗುತ್ತಿದೆ. ಲಾರಿ ಮಾಲೀಕರು, ಚಾಲಕರು ಕದ್ದು ಮುಚ್ಚಿ ಮರಳು ಸಾಗಣೆ ಮಾಡಬಾರದು. ರಾಜಾರೋಷವಾಗಿ ಮರಳು ಸಾಗಿಸುವ ವ್ಯವಸ್ಥೆ ನಿರ್ಮಾಣವಾಗಬೇಕು’ ಎಂದು ಆಗ್ರಹಿಸಿದರು.

‘ಪಿಕಪ್ ವಾಹನವನ್ನು ಅಡ್ಡಗಟ್ಟಿ ₹ 15,000 ದಂಡ ಹಾಕಿ 12 ದಿನ ಠಾಣೆಯಲ್ಲಿ ನಿಲ್ಲಿಸುತ್ತಾರೆ. ಆದರೆ, 200 ಲೋಡ್ ಮರಳು ಖಾಲಿಯಾದರೂ ಎಲ್ಲ ಅಧಿಕಾರಿಗಳು ತೆಪ್ಪಗೆ ನೋಡುತ್ತಿದ್ದಾರೆ. ಹಿರಿಯ ಭೂ ವಿಜ್ಞಾನಿ ಸ್ಥಳಕ್ಕೆ ಬರುವುದಿಲ್ಲ. ಹಾಗಾದರೆ ನಿಮ್ಮ ಪಾಲು ಏನು. ಲೋಪ ಎಸಗುತ್ತಿರುವ ಹಿರಿಯ ಭೂ ವಿಜ್ಞಾನಿ ಪಿ.ಕೆ.ನಾಯಕ್ ಅವರನ್ನು ವಜಾಗೊಳಿಸಿ’ ಎಂದು ದೂರವಾಣಿ ಮೂಲಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಆಯುಕ್ತ ರಂಗಪ್ಪ ಅವರಿಗೆ ಒತ್ತಾಯಿಸಿದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಹೆದ್ದೂರು ನವೀನ್, ಮುಖಂಡರಾದ ಬೇಗುವಳ್ಳಿ ಕವಿರಾಜ್, ಸತೀಶ್, ಮಧುರಾಜ್ ಹೆಗ್ಡೆ, ಮುಖಂಡರಾದ ಅರುಣ್ ಶೆಟ್ಟಿ, ಗಬಡಿ ಪ್ರದೀಪ್, ಉಪ ವಿಭಾಗಾಧಿಕಾರಿ ಸತ್ಯನಾರಾಯಣ, ಭೂ ವಿಜ್ಞಾನಿ ಪ್ರವೀಣ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-42-497524296

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.