ತೀರ್ಥಹಳ್ಳಿ: ಅರಣ್ಯ, ಕಂದಾಯ ಪ್ರದೇಶಕ್ಕೆ ಸೇರಿದ ಜಾಗದಲ್ಲಿ ಎಲ್ಲೆಂದರಲ್ಲಿ ಗುಡ್ಡಗಳನ್ನು ಕಡಿದು ನೂರಾರು ಲಾರಿ ಲೋಡ್ ಮಣ್ಣನ್ನು ಅಕ್ರಮವಾಗಿ ಸಾಗಿಸುವ ದಂಧೆ ತಾಲ್ಲೂಕಿನಾದ್ಯಂತ ಎಗ್ಗಿಲ್ಲದೆ ನಡೆಯುತ್ತಿದೆ. ಕೃಷಿ ಚಟುವಟಿಕೆಗಳ ನೆಪದಲ್ಲಿ ಲೇಔಟ್ಗಳ ನಿರ್ಮಾಣಕ್ಕೆ ಮಣ್ಣು ಬಳಕೆಯಾಗುತ್ತಿದೆ ಎಂದು ಕಟ್ಟೆಹಕ್ಕಲು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ವಿವಿಧ ಭಾಗಗಳಲ್ಲಿ ನಿರ್ಮಾಣವಾಗುತ್ತಿರುವ ಲೇಔಟ್ಗಳಿಗೆ ನಿತ್ಯ ಹತ್ತಾರು ಲಾರಿಗಳಲ್ಲಿ ಮಣ್ಣನ್ನು ಅಕ್ರಮವಾಗಿ ಸರಬರಾಜು ಮಾಡಲಾಗುತ್ತಿದೆ. ಆದರೆ, ಅರಣ್ಯ, ಕಂದಾಯ, ಭೂ ವಿಜ್ಞಾನ ಮತ್ತು ಗಣಿ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಮಣ್ಣು ಸಾಗಾಟ ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಗಮನಿಸುತ್ತಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ದೂರು ನೀಡಿದರೂ ‘ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎನ್ನುತ್ತಾ ಇಲಾಖೆಯ ಅಧಿಕಾರಿಗಳು ಮೌನ ವಹಿಸಿದ್ದಾರೆ ಎಂದು ಸ್ಥಳೀಯರು ದೂರುತ್ತಾರೆ.

ಗುಡ್ಡದ ಮಣ್ಣನ್ನು ಕಡಿದು ಸಾಗಿಲಸು ಜೆಸಿಬಿ, ಹಿಟ್ಯಾಚಿಯಂತಹ ಹಲವು ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಹತ್ತಾರು ಅಡಿಯ ಗುಂಡಿಗಳು ನಿರ್ಮಾಣವಾಗುತ್ತಿದೆ. ಹಗಲಿನಲ್ಲಿಯೇ ಮಣ್ಣು ತೆಗೆಯುತ್ತಿರುವುದರಿಂದ ಗ್ರಾಮೀಣ ರಸ್ತೆಗಳಲ್ಲಿ ಓಡಾಲು ಆಗದಂತಹ ದುಃಸ್ಥಿತಿ ಇದೆ. ಜೊತೆಗೆ ಮಣ್ಣು ಹೊತ್ತು ವೇಗವಾಗಿ ಚಲಿಸುವ ಲಾರಿಗಳು ಸಣ್ಣ ವಾಹನ ಚಾಲಕರ ಜೀವಕ್ಕೆ ಕುತ್ತು ತರುತ್ತಿವೆ.

ಕಟ್ಟೇಹಕ್ಕಲು ಸಮೀಪದ ಕುಂಚೇರಿ, ಶೇಡ್ಗಾರು, ಹೊಳೆಕೊಪ್ಪ, ಕಲ್ಕೊಪ್ಪ, ಮಳಲಿ ಭಾಗದಲ್ಲಿ ವಿಪರೀತ ಪ್ರಮಾಣದಲ್ಲಿ ಮಣ್ಣು ಲೂಟಿ ಮಾಡಲಾಗುತ್ತಿದೆ. ನೆರಟೂರು, ಆರಗ, ಬೊಬ್ಬಿ, ಸರಳ, ಸುರಾನಿ, ಹಿರೇಸರ, ಜೈಪುರ, ಬೊಬ್ಬಿ, ಬಾಳೇಬೈಲು, ಮುಡುಬ ಮುಂತಾದ ಕಡೆಗಳಲ್ಲಿನ ಮಣ್ಣು ಲೇಔಟ್ ನಿರ್ಮಾಣಕ್ಕೆ ಅಕ್ರಮವಾಗಿ ಬಳಕೆಯಾಗುತ್ತಿದೆ.

ರಸ್ತೆಗೆ ಹೊಂದಿಕೊಂಡ ಅರಣ್ಯ ಪ್ರದೇಶದಲ್ಲಿ ಮಣ್ಣು ಲೂಟಿಯಾಗುತ್ತಿದ್ದು, ರಸ್ತೆಗೆ ಹೊಂದಿಕೊಂಡಿರುವ ಮರಗಳ ಬುಡ ಕಾಣುವ ರೀತಿ ಮಣ್ಣು ಕೊರೆಯಯಲಾಗುತ್ತಿದೆ. ಇದರಿಂದಾಗಿ ಮಳೆಗಾಲದ ಸಮಯದಲ್ಲಿ ರಸ್ತೆಗೆ ಮರಗಳು ಬೀಳುವ ಸಾಧ್ಯತೆ ಇದೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶ್ರೇಕಾಂತ್ ಬಿಳಚಿಕಟ್ಟೆ.

ರಸ್ತೆಯ ಇಕ್ಕೆಲಗಳ ಗುಡ್ಡದ ಮಣ್ಣನ್ನು ಅಕ್ರಮವಾಗಿ ಲೇಔಟ್ ನಿರ್ಮಾಣಕ್ಕೆ ಬಳಕೆ ಮಾಡಲಾಗುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಲಿ

-ಸಿಂಧುವಾಡಿ ಸತೀಶ್, ಗ್ರಾ.ಪಂ. ಮಾಜಿ ಸದಸ್ಯ

ಕಂದಾಯ ಪ್ರದೇಶಗಳಲ್ಲಿ ಈ ಹಿಂದೆ ಮಣ್ಣನ್ನು ತೆಗೆಯಲಾಗಿತ್ತು. ಈ ಬಗ್ಗೆ ದೂರುಗಳು ಬಂದಿದ್ದು, ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು

-ಮಧುಸೂದನ್, ಎಸಿಎಫ್, ತೀರ್ಥಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.