ತೀರ್ಥಹಳ್ಳಿ: ನಿವೇಶನ, ಬಡಾವಣೆ ನಿರ್ಮಿಸುವ ಉದ್ದೇಶದಿಂದ ಸಮತಟ್ಟು ಮಾಡುತ್ತಿದ್ದ ಕೊಪ್ಪರಿಗೆ ಗುಡ್ಡ ಪ್ರದೇಶ ಮುಂಗಾರು ಪೂರ್ವ ಮಳೆಗೆ ಜಾರಿದೆ.

ವಿಶೇಷ ಶೋಲಾ ಅರಣ್ಯ ಸ್ವರೂಪದ ಪರಿಸರ ನಾಶ ಮಾಡುತ್ತಿರುವ ಸಂಬಂಧ ಹಲವು ದೂರುಗಳು ಕೇಳಿ ಬಂದಿತ್ತು. ಅದನ್ನು ನಿರ್ಲಕ್ಷಿಸಿದ ಪರಿಣಾಮ ಗುಡ್ಡದ ಮಣ್ಣು ಮಳೆಯ ನೀರಿನೊಂದಿಗೆ ಸ್ಥಳೀಯರ ವಾಸದ ಮನೆಗಳತ್ತ ಹರಿದಿದೆ. ಹೆಗ್ಡೆಕೇರಿ ಸಮೀಪದ ಊರುಗಳ ಸಂಪರ್ಕ ರಸ್ತೆ, ಮನೆಯ ಅಂಗಳ, ಜಾನುವಾರು ಕೊಟ್ಟಿಗೆ ತುಂಬ ಮಣ್ಣಿನ ರಾಶಿ ಗೋಚರಿಸಿದೆ.

ಮುಂಗಾರು ಆರಂಭಕ್ಕೂ ಮುನ್ನ ಕೆಲವೇ ನಿಮಿಷಗಳು ಸುರಿದ ಮಳೆಗೆ ಗುಡ್ಡದ ತಪ್ಪಲು ಪ್ರದೇಶದಲ್ಲಿ ಅವಾಂತರ ಸೃಷ್ಟಿಯಾಗಿದೆ. ನಿಯಮ ಮೀರಿ ಗುಡ್ಡ ಅಗೆಯಲು ಅವಕಾಶ ನೀಡಿರುವುದರಿಂದ ಗುಡ್ಡ ಕುಸಿತದ ಆಪಾಯ ಹೆಚ್ಚಾಗಿದೆ. ಒಂದು ವೇಳೆ ವಿಪರೀತ ಮಳೆ ಸುರಿದರೆ ಸುತ್ತಮುತ್ತಲ ಸಾಗುವಳಿ ಜಮೀನು, ಮನೆ ಹೊಂದಿರುವ ಸ್ಥಳೀಯರು ಭೂಮಿಯ ಜೊತೆಗೆ ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅಂದಾಜು 34 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಲೇಔಟ್ ನಿರ್ಮಿಸಲು 50 ಅಡಿಗೂ ಎತ್ತರದ ಗುಡ್ಡವನ್ನು ಸಮತಟ್ಟು ಮಾಡಲಾಗಿತ್ತು. ಈ ಬಗ್ಗೆ ಸಾರ್ವಜನಿಕವಾಗಿ ಸಾಕಷ್ಟು ದೂರುಗಳು ಕೇಳಿ ಬಂದಿತ್ತು. ಆದರೆ, ಅರಣ್ಯ, ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

2023ರಲ್ಲಿಯೂ ಕೊಪ್ಪರಿಗೆ ಗುಡ್ಡ ಪ್ರದೇಶ ವಿಪರೀತ ಮಳೆಗೆ ಜರುಗಿತ್ತು. 2025ರಲ್ಲಿ ಗುಡ್ಡದ ಅರ್ಧ ಕಿಲೋ ಮೀಟರ್ ಪ್ರದೇಶದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಈ ಬಗ್ಗೆ‘ಪ್ರಜಾವಾಣಿ’ ವಿಶೇಷ ವರದಿಗಳನ್ನು ಪ್ರಕಟಿಸಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-44-887577964

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.