ತೀರ್ಥಹಳ್ಳಿ: ‘ಲೋಕ ಅದಾಲತ್ನಲ್ಲಿ ಎಲ್ಲ ರೀತಿಯ ವ್ಯಾಜ್ಯ ಪ್ರಕರಣ ಇತ್ಯರ್ಥಕ್ಕೆ ಅವಕಾಶ ಇದೆ. ಕಕ್ಷಿದಾರರಿಗೆ ವ್ಯಾಜ್ಯ ಬಗೆಹರಿಸುವ ಕುರಿತು ಪೂರ್ಣ ಮಾಹಿತಿ ನೀಡಿ ಪ್ರಕರಣ ಮುಕ್ತಾಯಕ್ಕೆ ಅವಕಾಶ ನೀಡಲಾಗುವುದು’ ಎಂದು ಇಲ್ಲಿನ ಜೆಎಂಎಫ್ಸಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ಎಂ.ಗೀತಾಮಣಿ ಹೇಳಿದರು.

ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳಾದ ಅನು ಶಿವರಾಮ್, ಆರ್.ದೇವದಾಸ್ ಅವರು ನಡೆಸಿದ ವಿಡಿಯೊ ಕಾನ್ಫರೆನ್ಸ್ ವೀಕ್ಷಿಸಿ ಮಾತನಾಡಿದರು.

‘ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಹಣ ಪಾವತಿ, ಜಮೀನು ಹಾಗೂ ಇತರೆ ವ್ಯಾಜ್ಯಗಳನ್ನು ಆದ್ಯತೆ ಮೇರೆಗೆ ಪರಿಹರಿಸಲು ಕ್ರಮ ವಹಿಸಲಾಗುತ್ತದೆ. ಸಾಮಾನ್ಯ ಜನರಿಗೆ ಕಾನೂನು ಮಾಹಿತಿ ಪೂರ್ಣ ಇರುವುದಿಲ್ಲ. ಕಾನೂನಿನ ಅರಿವು ನೀಡುವುದು ನಮ್ಮ ಉದ್ದೇಶ. ವ್ಯಾಜ್ಯ ಶೀಘ್ರ ಬಗೆಹರಿದಾಗ ಉಭಯದ್ವಯರಿಗೆ ಅನೇಕ ಪ್ರಯೋಜನ ದೊರೆಯುತ್ತದೆ’ ಎಂದರು.

‘ಆ. 21ರಿಂದ 23ರವರೆಗೆ ಲೋಕ ಅದಾಲತ್ ರಾಜ್ಯದಾದ್ಯಂತ ನಡೆಯಲಿದೆ. ತೀರ್ಥಹಳ್ಳಿಯಲ್ಲಿ ಸೆಪ್ಟೆಂಬರ್ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಕಕ್ಷಿದಾರರು ಕಾನೂನು ಸೇವಾ ಸಮಿತಿಯ ಕಚೇರಿಯನ್ನು ಸಂಪರ್ಕಿಸಬಹುದು’ ಎಂದು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-42-2040087167

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.