ತೀರ್ಥಹಳ್ಳಿ: ಆದಾಯ, ಜಾತಿ, ಭೂಮಿ ಮತ್ತು ಕೃಷಿ ಸಂಬಂಧಿತ ಪ್ರಮಾಣಪತ್ರ, ಆಧಾರ್ ಕಾರ್ಡ್ ತಿದ್ದುಪಡಿಯಂತಹ ಕೆಲಸ ಮಾಡಿಸಿಕೊಳ್ಳಲು ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಸಾಧ್ಯವೇ ಆಗುತ್ತಿಲ್ಲ. ಮೊಬೈಲ್ಗಳಿಗೆ ಇದಕ್ಕೆ ಅಗತ್ಯವಿರುವ ಒಟಿಪಿ ಬರದ್ದರಿಂದ ಸಾರ್ವಜನಿಕರು ಕಾಯುವ ಅನಿವಾರ್ಯತೆ ನಿರ್ಮಾಣವಾಗಿದೆ.

ಅಟಲ್ಜೀ ಜನಸ್ನೇಹಿ ಕೇಂದ್ರ (ನಾಡಕಚೇರಿ) ಗಳಲ್ಲಿ ಸುಮಾರು ಅಂದಾಜು 42 ಆನ್ಲೈನ್ ಸೇವೆಗಳನ್ನು ಒದಗಿಸಲಾಗುತ್ತದೆ. ವಂಶವೃಕ್ಷ, ನಿವಾಸ, ಜಾತಿ, ಆದಾಯ, ಭೂ ಹಿಡುವಳಿ, ಭೂರಹಿತರು, ಬಾಡಿಗೆದಾರರು, ಸಾಲ್ವೆನ್ಸಿ, ನಿರುದ್ಯೋಗ, ವಿಧವೆ, ರೈತ ವಿಧವೆ, ಅಲ್ಪಸಂಖ್ಯಾತ, ಬೆಳೆ, ಅಂಗವಿಕಲ, ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ಪಿಂಚಣಿ, ಮನಸ್ವಿನಿ, ಅಂತ್ಯಸಂಸ್ಕಾರ ಸೇರಿದಂತೆ ಹಲವು ಸೇವೆಗಳಿಗೆ ಅರ್ಜಿ ಹಾಕಲು ಒಟಿಪಿ ಬರದೇ ಜನರು ಪರದಾಡುವಂತಾಗಿದೆ.

ಶಾಲೆ– ಕಾಲೇಜು ಆರಂಭದ ಕಾರಣ ಮೇಗರವಳ್ಳಿ, ದೇವಂಗಿ, ಬೆಜ್ಜವಳ್ಳಿ, ಕೊಣಂದೂರು ನಾಡಕಚೇರಿಗೆ ನಿತ್ಯ ನೂರಾರು ಜನರು ಬರುತ್ತಿದ್ದಾರೆ. ವಿದ್ಯಾರ್ಥಿಗಳು, ಪೋಷಕರು ಅಲ್ಲಿ ದಿನವಿಡೀ ಕಾದರೂ ಸೌಲಭ್ಯಗಳು ಸಿಗುತ್ತಿಲ್ಲ. ‘ಸರ್ವರ್ ಸರಿಯಿಲ್ಲ’ ಎಂಬ ಉತ್ತರ ಕೇಳಿ ಹಿಂದಿರುಗುವಂತಾಗಿದೆ ಎಂದು ದೂರದಿಂದ ಬಂದ ಗ್ರಾಮಸ್ಥರು ಹೇಳುತ್ತಿದ್ದಾರೆ.

ಭೂ ದಾಖಲೆ, ನೋಂದಣಿ ಮತ್ತು ಮುದ್ರಾಂಕ, ಉಪ ನೋಂದಣಾಧಿಕಾರಿ, ನಾಡಕಚೇರಿ, ಆಹಾರ ಇಲಾಖೆ ಸೇರಿ ಬಹುತೇಕ ಎಲ್ಲ ವಿಭಾಗದಲ್ಲಿಯೂ ಸರ್ವರ್, ಒಟಿಪಿ ಸಮಸ್ಯೆ ಎದುರಾಗಿದೆ. ಮೂರು ತಿಂಗಳಿನಿಂದ ತಂತ್ರಾಂಶ ಆಧುನೀಕರಣಗೊಳ್ಳದ ಕಾರಣ ಜನರು ಪೇಚಿಗೆ ಸಿಲುಕಿದ್ದಾರೆ.

ಭೂಮಾಪಕರ ಪ್ರತಿಭಟನೆಯಿಂದ ಭೂಮಿಯ ಅಳತೆ, ದಾಖಲೆ ಪರಿಶೀಲನೆ, ಭೂ ಮಾರಾಟ, ವರ್ಗಾವಣೆ ಪ್ರಕ್ರಿಯೆ, ಹದ್ದುಬಸ್ತು, ಪೋಡಿ, 11– ಇ ಮುಂತಾದ ಸೇವೆಗಳು ಸ್ಥಗಿತಗೊಂಡಿವೆ. ಭೂ ನೋಂದಣಿ, ಭೂ ದಾಖಲೆ ವಿಭಾಗದಲ್ಲಿ ಒಟಿಪಿ ಸಿಗದೆ ನೋಂದಣಿ ಪ್ರಕ್ರಿಯೆಗೆ ದಿನಗಟ್ಟಲೇ ಕಾಯಬೇಕಾಗಿದೆ.

ಬಾಪೂಜಿ ಕೇಂದ್ರ ಸ್ತಬ್ಧ: 100ಕ್ಕೂ ಹೆಚ್ಚು ದಾಖಲೆಗಳನ್ನು ವಿತರಿಸುವ ಅಧಿಕಾರ ಹೊಂದಿದ್ದರೂ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅವಶ್ಯಕ ದಾಖಲೆಗಳು ದೊರೆಯುತ್ತಿಲ್ಲ. ಗ್ರಾಮೀಣಾಭಿವೃದ್ಧಿ ಇಲಾಖೆಯ 43, ಕಂದಾಯ ಇಲಾಖೆಯ 40, ಇತರೆ 17 ಸೇವೆಗಳನ್ನು ಈ ಕೇಂದ್ರ ಒದಗಿಸುತ್ತದೆ. 10 ವರ್ಷಗಳ ಹಿಂದೆ ಆರಂಭಿಸಿರುವ ಕೇಂದ್ರದಲ್ಲಿ ಇಂದಿಗೂ ದಾಖಲೆಗಳು ಸಲೀಸಾಗಿ ಲಭಿಸುತ್ತಿಲ್ಲ. ದಾಖಲೆಗಾಗಿ ತಾಲ್ಲೂಕು ಕಚೇರಿಗೆ ಜನರ ಅಲೆದಾಟ ತಪ್ಪಿಲ್ಲ.

ಕೆವೈಸಿ ತಾಪತ್ರಯ: ಎಲ್ಲ ಇಲಾಖೆಯ ಸೇವೆಗಳನ್ನು ಪಡೆಯಲು ಆಧಾರ್ ಕೆವೈಸಿ ಕಡ್ಡಾಯ. ಆಧಾರ್ ಕಾರ್ಡ್ ಒನ್ ಟೈಮ್ ಪಾಸ್ ವರ್ಡ್ (ಒಟಿಪಿ) ಪಡೆಯದಿದ್ದರೆ ಯಾವ ಸೇವೆಯನ್ನೂ ಆರಂಭಿಸಲು ಸಾಧ್ಯವಾಗುವುದಿಲ್ಲ. ಎಸ್ಎಂಎಸ್ ಸಿಗದ ಕಾರಣ ಸರ್ಕಾರಿ ಸೇವೆಗಳನ್ನು ಪಡೆಯಲು ವಾರಗಟ್ಟಲೆ ಅಲೆದಾಡುವ ಸ್ಥಿತಿ ಇದೆ. ಗ್ರಾಮೀಣ ಭಾಗದಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಸಿಬ್ಬಂದಿ ಮತ್ತು ಫಲಾನುಭವಿಗಳು ಇಬ್ಬರಿಗೂ ಒಟಿಪಿ ತಲೆನೋವಾಗಿ ಪರಿಣಮಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-44-1115451401

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.