ತೀರ್ಥಹಳ್ಳಿ: ತಿರಳೇಬೈಲು ಗ್ರಾಮದಲ್ಲಿ ಭಾನುವಾರ ತಂತಿ ಬೇಲಿ ಹಾರುವಾಗ ಆಯತಪ್ಪಿ ಬಿದ್ದು ಅಂದಾಜು 8 ವರ್ಷದ ಕಾಡೆಮ್ಮೆ ಮೃತಪಟ್ಟಿದೆ.

ರಾತ್ರಿ ಮೇವು ಅರಸಿ ಅಡಿಕೆ ತೋಟದ ಸಮೀಪಕ್ಕೆ ಬಂದಿದ್ದ ಕಾಡೆಮ್ಮೆ, ತೋಟದಲ್ಲಿ ಬೆಳಿಗ್ಗೆವರೆಗೆ ವಿಶ್ರಾಂತಿ ಪಡೆದಿದೆ. ಮಾಲೀಕರು ತೋಟಕ್ಕೆ ತೆರಳಿದಾಗ ಬೆಚ್ಚಿ ಬಿದ್ದ ಎಮ್ಮೆ ತಂತಿ ಬೇಲಿ ಹಾರಿದೆ. ಆಗ ಹೊಟ್ಟೆಯ ಭಾಗದ ಸ್ನಾಯುಗಳಿಗೆ ಬಲವಾದ ಹೊಡೆತ ಬಿದ್ದಿದ್ದರಿಂದ ಸಾವು ಬದುಕಿನ ನಡುವೆ ಸೆಣಸಾಡಿದೆ. ಅರಣ್ಯ ಇಲಾಖೆ ಸಿಬ್ಬಂದಿ ಎಮ್ಮೆಗೆ ಹುಲ್ಲು, ನೀರು, ಆಹಾರ ನೀಡಿ ಆರೈಕೆ ಮಾಡಿದ್ದರು.

‘ಸಂಜೆ ಕಾಡೆಮ್ಮೆ ಮೃತಪಟ್ಟಿದೆ. ಸೋಮವಾರ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ. ನಂತರ ಅವಕಾಶ ಇದ್ದರೆ ಎಮ್ಮೆಯನ್ನು ಸುಡಲಾಗುತ್ತದೆ ಅಥವಾ ಕೋಡುಗಳನ್ನು ನಾಶಪಡಿಸಿ 10 ಅಡಿ ಆಳದ ಗುಂಡಿಯಲ್ಲಿ ಉಪ ವಲಯ ಸಂರಕ್ಷಣಾಧಿಕಾರಿ ಸಮ್ಮುಖದಲ್ಲಿ ಮುಚ್ಚುತ್ತೇವೆ’ ಎಂದು ಆರ್ಎಫ್ಒ ಸಂಜಯ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-42-543440088

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.