ಶಿವಮೊಗ್ಗ: ಮನೆ ಖರೀದಿ ವಿಚಾರದ ವೈಮನಸ್ಸಿನ ಕಾರಣಕ್ಕೆ ಇಲ್ಲಿನ ಶರಾವತಿ ನಗರದ ಹಂದಿಜೋಗಿ ಬೀದಿಯಲ್ಲಿ ಮಂಗಳವಾರ ರಾತ್ರಿ ಮನೆಯ ಎದುರು ನಿಲ್ಲಿಸಿದ್ದ ಕಾರಿನ ಗಾಜುಗಳ ಒಡೆದು ಹಾಕಿದ್ದ ಆರೋಪದ ಮೇರೆಗೆ ಮೂವರನ್ನು ಇಲ್ಲಿನ ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿನೋಬನಗರದ ಚಾನೆಲ್ ಏರಿಯಾ 6ನೇ ಕ್ರಾಸ್ ನಿವಾಸಿ ಕೆ.ಶರತ್, ಮೇದಾರ ಕೇರಿ 2ನೇ ಕ್ರಾಸ್ ನಿವಾಸಿ ಎ.ಪ್ರಶಾಂತ್ ಹಾಗೂ ಶರಾವತಿ ನಗರ ಬಿ ಬ್ಲಾಕ್ 2ನೇ ಕ್ರಾಸ್ ನಿವಾಸಿ ಡಿ.ಸತೀಶ ಬಂಧಿತರು.

ಹಂದಿಜೋಗಿ ಬೀದಿಯ ನಿವಾಸಿ ಸುರೇಶ್ ಎಂಬುವವರ ಮನೆಯ ಮುಂಭಾಗ ನಿಲ್ಲಿಸಿದ್ದ ಕಾರಿನ ಗಾಜನ್ನು ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ರಾತ್ರಿ ಒಡೆದು ಹಾಕಿದ್ದರು. ಈ ಬಗ್ಗೆ ಸುರೇಶ್ ದೊಡ್ಡಪೇಟೆ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡಿದ್ದ ಪೊಲೀಸರು ಸಮೀಪದಲ್ಲಿದ್ದ ಸಿ.ಸಿ. ಟಿವಿ ದೃಶ್ಯಾವಳಿ ಆಧರಿಸಿ ಮೂವರನ್ನು ಬಂಧಿಸಿದ್ದಾರೆ. ದೂರುದಾರ ಸುರೇಶ ಖರೀದಿಸಬೇಕಿದ್ದ ಮನೆಯನ್ನು ಆರೋಪಿ ಸತೀಶ್ ಖರೀದಿಸಿದ್ದನು. ಈ ವಿಚಾರದಲ್ಲಿ ಇಬ್ಬರಿಗೂ ಜಗಳವಾಗಿತ್ತು. ಸತೀಶ್ ಈ ಸಂಗತಿಯನ್ನು ಸ್ನೇಹಿತರಾದ ಶರತ್ ಹಾಗೂ ಪ್ರಶಾಂತ್ ಎದುರು ಹೇಳಿಕೊಂಡಿದ್ದು, ಮೂವರು ಸೇರಿ ಸುರೇಶನನ್ನು ಹೆದರಿಸಲು ಕಾರಿನ ಮೇಲೆ ದಾಳಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕೃತ್ಯದ ವೇಳೆ ಆರೋಪಿಗಳು ಗಾಂಜಾ ಸೇವಿಸಿರಲಿಲ್ಲ. ಬದಲಿಗೆ ಪಾನಮತ್ತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.