ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ಕೇಂದ್ರದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ 24 ವರ್ಷದ ವೈದ್ಯ ವಿದ್ಯಾರ್ಥಿನಿಯೊಬ್ಬರಿಗೂ (ಪಿ–6411) ವೈರಸ್ ತಗುಲಿದೆ. ಮಹಾರಾಷ್ಟ್ರದಿಂದ ಬಂದ 34 ವರ್ಷದ ಪುರುಷ (ಪಿ–6414), 38 ವರ್ಷದ ಮತ್ತೊಬ್ಬ ಪುರುಷ (ಪಿ–6415) ಸೇರಿ ಶುಕ್ರವಾರ ಜಿಲ್ಲೆಯಲ್ಲಿ 6 ಪ್ರಕರಣ ಪತ್ತೆಯಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 89ಕ್ಕೇರಿದೆ.