ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾ ಭದ್ರತೆ ನೀಡದಿದ್ದಕ್ಕೆ ಬೇಸರ: ಅತಿಥಿ ಉಪನ್ಯಾಸಕ ಆತ್ಮಹತ್ಯೆ

ಸೇವಾ ಭದ್ರತೆ ನೀಡದಿದ್ದಕ್ಕೆ ಬೇಸರ
Last Updated 24 ಡಿಸೆಂಬರ್ 2021, 2:30 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಪಟ್ಟಣದ ಬಾಳೇಬೈಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗಣಕ ವಿಜ್ಞಾನ ವಿಭಾಗದ
ಅತಿಥಿ ಉಪನ್ಯಾಸಕ ಶ್ರೀಹರ್ಷ ಶಾನುಭೋಗ್ (40) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೊಸನಗರ ತಾಲ್ಲೂಕು ಯಡೂರು ಸಮೀಪದ ಹೆಬ್ಬಳಬೈಲು ಗ್ರಾಮದವರು. ಉಡುಪಿ ಜಿಲ್ಲೆಯ ಕುಂಜಿಬೆಟ್ಟುವಿ ನಲ್ಲಿ ವಾಸವಾಗಿದ್ದ ಅವರ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಮೃತರಿಗೆ ತಂದೆ, ತಾಯಿ, ಪತ್ನಿ, ಇಬ್ಬರು ಪುತ್ರರು ಇದ್ದಾರೆ.

ಅತಿಥಿ ಉಪನ್ಯಾಸಕರಿಗೆ ನೀಡುವ ₹ 11 ಸಾವಿರ ಸಂಬಳದಲ್ಲಿ ಜೀವನ ನಿರ್ವಹಣೆ ಸಾಧ್ಯವಾಗದೆ ತೀರ್ವ ಖಿನ್ನತೆಗೀಡಾಗಿದ್ದರು. ಪ್ರತಿನಿತ್ಯ ಉಡುಪಿಯಿಂದ ತೀರ್ಥಹಳ್ಳಿಗೆ ಬಂದು ಉಪನ್ಯಾಸ
ನೀಡುತ್ತಿದ್ದರು. ಪತ್ನಿಯೂ ಮಂಗಳೂರಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಉಡುಪಿಯಲ್ಲಿ ದಂಪತಿ ವಾಸವವಾಗಿದ್ದರು. ಸಂಬಳದ ವಿಚಾರವಾಗಿ ಕೌಟುಂಬಿಕ
ಕಲಹ ಎಂದು ಸಹೋದ್ಯೋಗಿಗಳು, ಸ್ನೇಹಿತರೊಂದಿಗೆ ಕಷ್ಟ ಹೇಳಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT