ತೀರ್ಥಹಳ್ಳಿ: ‘ತಾಳ್ಮೆ ಮತ್ತು ವಿನಯ ಮನುಷ್ಯನ ಆಭರಣಗಳು. ಅದನ್ನು ಅಳವಡಿಸಿಕೊಳ್ಳುವ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬಹುದು’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.

ಮಲೆನಾಡು ಕ್ಲಬ್ ಸಭಾಂಗಣದಲ್ಲಿ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಸ್.ಎಸ್.ಕಾಶಿ ಹಾಗೂ ನಟರಾಜ್ ಎಂ.ಎ. ಅವರಿಗೆ ಈಚೆಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಕಾನೂನು ಮುರಿಯುವ ಸಂದಿಗ್ಧ ಪರಿಸ್ಥಿತಿ ಬಂದಾಗ ಗಾಂಧೀಜಿ ಅವರು ಶಾಂತಿ ಮತ್ತು ಸಂಯಮದಿಂದ ಕಾರ್ಯ ಕೈಗೊಳ್ಳುತ್ತಿದ್ದರು. ನೀವು ಜೈಲಿನಿಂದ ಹೊರಕಳಿಸಿದರೆ ನ್ಯಾಯ ದೊರಕುವವರೆಗೂ ಹೋರಾಡುತ್ತೇನೆ. ಹಾಗಾಗಿ ನನ್ನನ್ನು ಹೊರಗೆ ಬಿಡಬೇಡಿ ಎನ್ನುತ್ತಿದ್ದರು. ಅವರು ತಾಳ್ಮೆಯಿಂದಲೇ ಕೆಲಸ ಸಾಧಿಸುತ್ತಿದ್ದರು. ಅದನ್ನೇ ಅಳವಡಿಸಿಕೊಂಡ ಈ ಇಬ್ಬರು ಪೊಲೀಸ್ ಅಧಿಕಾರಿಗಳು ನೆನಪಿಡುವ ಕಾರ್ಯ ಮಾಡಿದ್ದಾರೆ’ ಎಂದು ತಿಳಿಸಿದರು.

‘ಅನ್ಯಾಯದ ಮುಂದೆ ಮೌನವೇ ದೊಡ್ಡ ದೌರ್ಬಲ್ಯ ಎಂಬ ಸತ್ಯವನ್ನರಿತು ಕೆಲಸ ನಿರ್ವಹಿಸಿದ್ದೇವೆ. ನಾನಾಗಲಿ, ಕಾಶಿಯಾಗಲಿ ವೃತ್ತಿ ಜೀವನದಲ್ಲಿ ವರ್ಗಾವಣೆಗಾಗಿ ಯಾರಿಗೂ ಹಣ ನೀಡಲಿಲ್ಲ. ಇಬ್ಬರು ಜೊತೆಗೂಡಿ ನಕ್ಸಲ್ ಮುಖಂಡ ಸಾಕೇತ್ ರಾಜ್ ಎನ್ಕೌಂಟರ್ನಲ್ಲಿ ಭಾಗವಹಿಸಿದ್ದೆವು’ ಎಂದು ಅಭಿನಂದನೆ ಸ್ವೀಕರಿಸಿದ ನಟರಾಜ್ ಎಂ.ಎ. ನೆನಪಿಸಿಕೊಂಡರು.

ರೈತ ಹೋರಾಟಗಾರ ಕಂಬಳಿಗೆರೆ ರಾಜೇಂದ್ರ ಮಾತನಾಡಿದರು. ಮಲ್ನಾಡ್ ಕ್ಲಬ್ ಅಧ್ಯಕ್ಷ ಪ್ರವೀಣ್ ಬಿಳುವೆ, ಡಿವೈಎಸ್ಪಿ ಅರವಿಂದ ಎನ್. ಕಲಗುಜ್ಜಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-42-2010074512

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.