ಶಿಕಾರಿಪುರ: ‘ರಾಜ್ಯ ಸರ್ಕಾರ ತುಮಕೂರಿನಲ್ಲಿ ನಡೆಸುತ್ತಿರುವ ‘ಪ್ರಗತಿಯತ್ತ ಕರ್ನಾಟಕ’ ಎನ್ನುವ ಸಂಭ್ರಮಾಚರಣೆ ಹಾಸ್ಯಾಸ್ಪದ. ಪ್ರಗತಿ ಎಲ್ಲಿದೆ ಎಂದು ಸರ್ಕಾರ ಜನರಿಗೆ ತೋರಿಸಬೇಕು’ ಎಂದು ಸಂಸದ ಬಿ.ವೈ.ರಾಘವೇಂದ್ರ ಒತ್ತಾಯಿಸಿದರು.

‘ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿದೆ. ಸರ್ಕಾರವೇ ಘೋಷಿಸಿರುವ ಗೃಹಲಕ್ಷ್ಮಿ ಹಣ ಜನರಿಗೆ ಎಷ್ಟು ತಿಂಗಳು ತಲುಪಿದೆ ಎನ್ನುವುದನ್ನು ಜನರಿಗೆ ತಿಳಿಸಬೇಕು. ಶಕ್ತಿ ಯೋಜನೆಯಡಿ ₹ 4,000 ಕೋಟಿ ಸಾರಿಗೆ ನಿಗಮಗಳಿಗೆ ಬಾಕಿ ನೀಡ ಬೇಕಿದೆ. ವೇತನ ಪಾವತಿಸಿಲ್ಲ ಎಂದು ಆರೋಪಿಸಿ ಸಾರಿಗೆ ನೌಕರರು ಮೂರನೇ ಬಾರಿಗೆ ಮುಷ್ಕರ ಆರಂಭಿಸಿದ್ದಾರೆ. ಯುವನಿಧಿ ಯೋಜನೆ ಶೇ 20 ವಿದ್ಯಾರ್ಥಿಗಳಿಗೆ ಮಾತ್ರ ತಲುಪಿದೆ. ವಿದ್ಯುತ್ ಕಂಪೆನಿಗಳಿಗೂ ಬಾಕಿ ಹಣ ನೀಡುವು ದಕ್ಕೆ ಸಾಧ್ಯವಾಗುತ್ತಿಲ್ಲ’ ಎಂದರು.

‘ಕೇಂದ್ರದ ಅಕ್ಕಿಗೆ ಸಿದ್ದರಾಮಯ್ಯ ತಮ್ಮ ಲೇಬಲ್ ಹಚ್ಚಿ ವಿತರಿಸುತ್ತಿದ್ದಾರೆ. ರಾಜ್ಯದ ಸಾಲ ಮೂರು ವರ್ಷದಲ್ಲಿ ₹ 2.46 ಲಕ್ಷ ಕೋಟಿ ಹೆಚ್ಚಾಗಿದೆ. ಬಜೆಟ್ ಘೋಷಣೆಗೆ ಅಭಿವೃದ್ಧಿ ಸೀಮಿತವಾಗಿದ್ದು, ತುಮಕೂರು ಸಮಾವೇಶ ಸರ್ಕಾರದ ಸಾಧನೆಗಾಗಿ ಮಾಡುತ್ತಿರುವ ಸಮಾವೇಶ ಅಲ್ಲ. ಬದಲಿಗೆ ಕಾಂಗ್ರೆಸ್ ಪಕ್ಷದೊಳಗಿನ ಖುರ್ಚಿ ಕದನಕ್ಕೆ ವೇದಿಕೆ ಒದಗಿಸುವುದಕ್ಕೆ’ ಎಂದು ಆರೋಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-42-758282335

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.