ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಚನಾಲ ಉರುಸ್‌: ಹಿಂದೂ ಮುಸ್ಲಿಂ ಭಾವೈಕ್ಯದ ಸಂಕೇತ

Last Updated 2 ಜೂನ್ 2022, 7:45 IST
ಅಕ್ಷರ ಗಾತ್ರ

ರಿಪ್ಪನ್‌ಪೇಟೆ: ಸಮೀಪದ ಕೆಂಚನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಹಜರತ್ ಸೈಯದ್ ಚಮನ್ ಷಾ ವಲಿಯೂಲ್ಲಾ ದರ್ಗಾದ ಉರುಸ್ ಕಾರ್ಯಕ್ರಮ ಭಾನುವಾರ ಸಂಭ್ರಮದಿಂದ ನಡೆಯಿತು.

ಕೆಂಚನಾಲ ಸುನ್ನಿ ಜಾಮಿಯಾ ಮಸೀದಿಯ ಖತೀಬ್ ಮೊಹಮ್ಮದ್ ಝುಲ್ಪಿಕರ್ ದುವಾ ಮಾಡುವ ಮೂಲಕ ಸಂದಲ್ ಮೆರವಣಿಗೆಗೆ ಚಾಲನೆ ನೀಡಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂದಲ್ ಮೆರವಣಿಗೆ ಸಾಗಿತು.

ಶಿವಮೊಗ್ಗದ ಮುರ್ಷದ್ ಅವರು ಸಂದಲ್ ಮೆರವಣಿಗೆಯಲ್ಲಿ ದಫ಼್ ಬಾರಿಸುವ ಮೂಲಕ ಹಜರತ್ ಸೈಯದ್ ಚಮನ್ ಷಾ ಅವರ ಸಂದಲ್ ಮೆರವಣಿಗೆಗೆ ರಂಗು ತಂದರು.

ಜಾತಿ, ಧರ್ಮ ಭೇದವಿಲ್ಲದೆ ಹಿಂದೂ, ಮುಸ್ಲಿಂ ಸಮುದಾಯದ ನೂರಾರು ಭಕ್ತರು ಸಂದಲ್ ಮೆರವಣಿಗೆಗೆ ಸಾಕ್ಷಿಯಾಗಿದ್ದರು. ನಂತರದಲ್ಲಿ ದರ್ಗಾ ಕಮಿಟಿ ವತಿಯಿಂದ ರಾತ್ರಿ ಎಲ್ಲ ಭಕ್ತರಿಗೆ ಸಾಮೂಹಿಕ ಸಸ್ಯಹಾರ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ಕೆಂಚನಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಬೇದುಲ್ಲಾ ಷರೀಫ್, ದರ್ಗಾ ಕಮಿಟಿ ಅಧ್ಯಕ್ಷ ದೂದ್ ಪೀರ್, ಕೆಂಚನಾಲ ಜಾಮಿಯ ಮಸೀದಿ ಅಧ್ಯಕ್ಷ ಅಬ್ದುಲ್ ಘನಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯರಾದ ಮೊಹಮ್ಮದ್ ಷರೀಫ್, ಪರಮೇಶಿ, ಪುಟ್ಟಣ್ಣ, ಲಕ್ಷಮ್ಮ, ಹೂವಮ್ಮ, ರಾಮಪ್ಪ ಹಾಗೂ ಯುವ ಮುಖಂಡರಾದ ಖಲೀಲ್ ಷರೀಫ್, ಅಸ್ಲಂ, ಅಕ್ಬರ್, ಸಲೀಮ್, ತಬ್ರೇಜ್, ಜಮೀಲ್, ಸೋನು, ರಾಹಿಲ್, ಇಬ್ರಾಹಿಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT