ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ಪೂರಕವಾಗಿ ಅನುದಾನ ಬಳಕೆ

ಜೋಗ–ಕಾರ್ಗಲ್ ಪಟ್ಟಣ ಪಂಚಾಯಿತಿ ಸಭೆಯಲ್ಲಿ ನಿರ್ಧಾರ
Last Updated 3 ಜುಲೈ 2022, 2:09 IST
ಅಕ್ಷರ ಗಾತ್ರ

ಕಾರ್ಗಲ್: ಜೋಗ ಕಾರ್ಗಲ್ ಮತ್ತು ಯಡ್ಡಳ್ಳಿ ಗ್ರಾಮಗಳಲ್ಲಿ ಸರ್ಕಾರದಿಂದ ಮಂಜೂರು ಆಗಿರುವ ಆಶ್ರಯ ಬಡಾವಣೆಗಳಿಗೆ ಪೂರಕವಾಗಿ ಕೈಗೊಳ್ಳಬೇಕಾದ ರಸ್ತೆ, ಕುಡಿಯುವ ನೀರು, ಚರಂಡಿ, ವಿದ್ಯುತ್ ವ್ಯವಸ್ಥೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ 15ನೇ ಹಣಕಾಸಿನ ಯೋಜನೆಯಡಿಯಲ್ಲಿ ಉಳಿಕೆಯಾದ ಹಣವನ್ನು ಬಳಸಿಕೊಳ್ಳಲು
ತೀರ್ಮಾನಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಾಸಂತಿ ರಮೇಶ್ ತಿಳಿಸಿದರು.

ಇಲ್ಲಿನ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ನಡೆದ ಮಾಸಿಕ ಸಭೆಯಲ್ಲಿ ಮಾತನಾಡಿದರು.

ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಆಡಳಿತಾತ್ಮಕ ದೃಷ್ಟಿಯಿಂದ ತುಲನೆ ಮಾಡಿದಾಗ, ಕರ್ನಾಟಕ ವಿದ್ಯುತ್ ನಿಗಮ, ಪ್ರವಾಸೋದ್ಯಮ ಇಲಾಖೆ, ಜೋಗ ನಿರ್ವಹಣಾ ಪ್ರಾಧಿಕಾರ, ಮೆಸ್ಕಾಂ ಉಪವಿಭಾಗ, ಪೊಲೀಸ್, ಜಂಗಲ್ ಲಾಡ್ಜ್ ರೆಸಾರ್ಟ್ಸ್‌, ಲೋಕೋಪಯೋಗಿ, ಕಂದಾಯ, ಅರಣ್ಯ ಇಲಾಖೆ, ವನ್ಯಜೀವಿ ಅಭಯಾರಣ್ಯ ವಲಯ ಹೀಗೆ ಅನೇಕ ಸರ್ಕಾರಿ ಸಂಸ್ಥೆಗಳ ಸಂಗಮ ಸಹಕಾರದೊಂದಿಗೆ ಆಡಳಿತ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸುವ ನಿಟ್ಟಿನಲ್ಲಿ ಶೀಘ್ರ ಸಭೆ ಕರೆದು ಚರ್ಚಿಸಲಾಗುವುದು ಎಂದರು.

ಕೆಪಿಸಿ ಒಡೆತನದ ಆಯ್ದ ಕೆಲವು ಪ್ರದೇಶಗಳಲ್ಲಿ ಖಾಸಗಿ ವಲಯದ ನಾಗರಿಕರು ವಾಸ್ತವ್ಯವನ್ನು ಹೊಂದಿರುವ ಕಾರಣ, ಅಂತಹ ಪ್ರದೇಶಗಳಲ್ಲಿ ಸ್ವಚ್ಛತೆ ಮತ್ತುನೈರ್ಮಲ್ಯವನ್ನು ಕಾಪಾಡುವ ಕೆಲಸಕ್ಕೆ ಪಟ್ಟಣ ಪಂಚಾಯಿತಿ ಮುಂದಾಗಬೇಕು ಎಂದು ಸದಸ್ಯ ಕೆ.ಸಿ. ಹರೀಶಗೌಡ ಆಗ್ರಹಿಸಿದರು.

ಲಿಂಗನಮಕ್ಕಿ ಕುಳಕಾರು ಮತ್ತು ಸುಂಕದಮನೆ ಮಜಿರೆ ಗ್ರಾಮಗಳಲ್ಲಿರುವ ಪರಿಶಿಷ್ಟ ವರ್ಗದ ಅರ್ಹ ಫಲಾನುಭವಿಗಳಿಗೆ ಅನಿಲ ಸಂಪರ್ಕ ಪಡೆಯಲು ₹ 1.20 ಲಕ್ಷವನ್ನು ಮೀಸಲಿರಿಸಲಾಗಿದೆ. ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿತ್ವರಿತಗತಿಯಲ್ಲಿ ಗುಡ್ಡಗಾಡು ಮತ್ತು ಆದಿವಾಸಿ ಜನಾಂಗದವರಿಗೆ ಅನಿಲ ಸಂಪರ್ಕವನ್ನು ನೀಡಲಾಗುವುದು ಎಂದು ಮುಖ್ಯಾಧಿಕಾರಿ ಜಗದೀಶ್ ಆರ್. ನಾಯ್ಕ ಮಾಹಿತಿ ನೀಡಿದರು.

ಪೌರಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರದ ಕಾರಣ ಸಮಸ್ಯೆಯಾಗಿದ್ದು,ಕಾಯಂ ಸಿಬ್ಬಂದಿಯನ್ನು ನಿಗದಿತ ಪಾಳಿಯಲ್ಲಿ ಕುಡಿಯುವ ನೀರು ಪೂರೈಕೆ ಮತ್ತು ಪುರ ಸ್ವಚ್ಛತೆಗೆ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ.
ಮೂಲಸೌಕರ್ಯಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳಲಾಗುವುದು ಎಂದು ಸ್ಥಾಯಿ ಸಮಿತಿ ಅಧ್ಯಕ್ಷೆ ಲಕ್ಷ್ಮೀ ರಾಜು ತಿಳಿಸಿದರು.

ಉಪಾಧ್ಯಕ್ಷ ಪಿ. ಮಂಜುನಾಥ, ಸದಸ್ಯರಾದ ನಾಗರಾಜ್ ವಾಟೇಮಕ್ಕಿ, ಎಂ. ರಾಜು, ಉಮೇಶ್, ಹರೀಶ್ ಗೌಡ, ಜಯಲಕ್ಷ್ಮೀ, ಸುಜಾತ, ಲಲಿತಾ, ದೇವರಾಜ ಜೈನ್, ಕಂದಾಯಾಧಿಕಾರಿ ಸೆಂಟಯ್ಯ, ಆರೋಗ್ಯ ನಿರೀಕ್ಷಕ ಚಂದ್ರಶೇಖರ್, ವಿಷಯ ನಿರ್ವಾಹಕ ಲೋಕೇಶ್ ಮೂರ್ತಿ, ಎಂಜಿನಿಯರ್‌ ಪವಿತ್ರಾ, ಸುಭಾಷ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT