ಗುರುವಾರ , ಜನವರಿ 21, 2021
18 °C
ಶಿವಮೊಗ್ಗದ 3, ಸೊರಬ, ಭದ್ರಾವತಿ, ತೀರ್ಥಹಳ್ಳಿ, ಸಾಗರದ ಆಸ್ಪತ್ರೆಗಳಲ್ಲಿ ಡ್ರೈರನ್

9 ಆಸ್ಪತ್ರೆಗಳಲ್ಲಿ ಲಸಿಕೆ ಅಣಕು ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಜಿಲ್ಲೆಯ 9 ಆಸ್ಪತ್ರೆಯಲ್ಲಿ ಶುಕ್ರವಾರ ಕೋವಿಡ್ ಲಸಿಕೆ ನೀಡುವ ಅಣಕು ಪ್ರದರ್ಶನ (ಡ್ರೈರನ್) ನಡೆಯಿತು.

ನಗರದ ಸರ್ಜಿ ಆಸ್ಪತ್ರೆ, ಸುಬ್ಬಯ್ಯ ಮೆಡಿಕಲ್ ಕಾಲೇಜು ಹಾಗೂ ತುಂಗಾ ನಗರದ ಪ್ರಸೂತಿ ಕೇಂದ್ರ ಹಾಗೂ ಸೊರಬ, ಭದ್ರಾವತಿ, ತೀರ್ಥಹಳ್ಳಿ ಹಾಗೂ ಸಾಗರ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಅಣಕು ಪ್ರದರ್ಶನ ನಡೆಯಿತು. ಹೊಳಲೂರಿನ ಸಮುದಾಯ ಕೇಂದ್ರ, ಆಗುಂಬೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಕೊರೊನಾ ಲಸಿಕಾ ಡ್ರೈರನ್ ನಡೆಸಲಾಗುತ್ತಿದೆ.

ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಜಿಲ್ಲಾ ಆರೋಗ್ಯಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ ನಗರದ ಡ್ರೈರನ್ ಕೇಂದ್ರಗಳಿಗೆ ಭೇಟಿ ಪರಿಶೀಲಿಸಿದರು.

25 ಜನರನ್ನು ಒಂದೊಂದು ಲಸಿಕಾ ಕೇಂದ್ರಗಳಿಗೆ ಸೂಚಿಸಲಾಗಿದೆ. ಗುರುತಿನ ಚೀಟಿ ಹಿಡಿದು ಬರುವ ಫಲಾನುಭವಿಗಳನ್ನು ಮೊದಲು ನಿರೀಕ್ಷಣಾ ಕೊಠಡಿಯಲ್ಲಿ ಕೂರಿಸಲಾಯಿತು. ವ್ಯಾಕ್ಸಿನೇಷನ್ ಆಫಿಸರ್-1 ಅವರು ಫಲಾನುಭವಿಗಳ ಆಧಾರ ಕಾರ್ಡ್, ಐಡಿ ಕಾರ್ಡ್‌  ಮಾಹಿತಿ ಪಡೆದು ನಿರೀಕ್ಷಣಾ ಕೊಠಡಿಗೆ ಕಳುಹಿಸಿಕೊಟ್ಟರು. ವ್ಯಾಕ್ಸಿನೇಷನ್-2 ಅಧಿಕಾರಿಗಳು ಅವರ ಐಡಿಗಳನ್ನು ಪರಿಶೀಲಿಸಿ ಒಪ್ಪಿಗೆ ನೀಡಿದರು.

ನಂತರ ಫಲಾನುಭವಿಯನ್ನು ಲಸಿಕಾ ಕೇಂದ್ರಕ್ಕೆ ಕಳುಹಿಸಿದರು. ಲಸಿಕಾ ಅಧಿಕಾರಿಗಳು ಫಲಾನುಭವಿಗಳಿಗೆ ಲಸಿಕೆ ನೀಡಿ, ನಂತರ ಲಸಿಕೆ ಪಡೆದ ಫಲಾನುಭವಿಗಳನ್ನು ಪರಿವೀಕ್ಷಣಾ ಕೊಠಡಿಯಲ್ಲಿ ವಿಶ್ರಾಂತಿಗೆ ಅನುವು ಮಾಡಿಕೊಟ್ಟರು. ಇವೆಲ್ಲವೂ ಅಣಕು ಪ್ರದರ್ಶನದಲ್ಲಿ ನಡೆದ ಹಂತಗಳು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು