ಭದ್ರಾವತಿ: ಸರ್ಕಾರಿ ಸ್ವಾಮ್ಯದ ಭಾರತೀಯ ಉಕ್ಕು ಪ್ರಾಧಿಕಾರದ (ಸೈಲ್) ಅಧ್ಯಕ್ಷ ಅಶೋಕಕುಮಾರ್ ಪಾಂಡ ಅವರು ಗುರುವಾರ ಇಲ್ಲಿನ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ (ವಿಐಎಸ್ಎಲ್) ಭೇಟಿ ನೀಡಿದ್ದರು.

ಉತ್ಪಾದನೆ ಹೆಚ್ಚಿಸುವ ಮೂಲಕ ಕಾರ್ಖಾನೆಯನ್ನು ಲಾಭದ ಹಾದಿಗೆ ತರುವ ಬಗ್ಗೆ ವಿಐಎಸ್ಎಲ್ ಕಾರ್ಮಿಕ ಸಂಘ ಹಾಗೂ ವಿಐಎಸ್ಎಲ್ ಅಧಿಕಾರಿಗಳ ಸಂಘದ ಪದಾಧಿಕಾರಿಗಳ ಜೊತೆ ಚರ್ಚಿಸಿದರು.

‘ವಿಐಎಸ್ಎಲ್ನಲ್ಲಿ ಉತ್ಪಾದನೆಗೆ ಬೇಕಾದ ಅಗತ್ಯ ಕಚ್ಚಾ ವಸ್ತು ಪೂರೈಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

ವಿಐಎಸ್ಎಲ್ ಕಾರ್ಮಿಕ ಸಂಘದ ವತಿಯಿಂದ ಕಾರ್ಖಾನೆಯ ಆಧುನೀಕರಣಕ್ಕಾಗಿ ಅಗತ್ಯ ಬಂಡವಾಳ ಹೂಡಲು ಮನವಿ ಸಲ್ಲಿಸಲಾಯಿತು.

‘ಪ್ರಸ್ತುತ ಕಾರ್ಖಾನೆಯಲ್ಲಿ ಬ್ಲಾಸ್ಟ್ ಫರ್ನೇಸ್ ಕಾರ್ಯನಿರ್ವಹಣೆ ಮಾಡದಿರುವುದರಿಂದ ಉತ್ಪಾದನೆಗೆ ಬೇಕಾದ ಕಚ್ಚಾ ಸಾಮಗ್ರಿಯನ್ನು ಹೊರಗಿನಿಂದ ತರಿಸಿಕೊಳ್ಳಲಾಗುತ್ತಿದೆ. ಕಚ್ಚಾ ಸಾಮಗ್ರಿ ನಮ್ಮ ಸ್ವಂತ ಮೂಲದಿಂದ ದೊರಕುವಂತಾದರೆ ಉತ್ಪಾದನಾ ವೆಚ್ಚ ಕಡಿತ ಮಾಡಿ ಲಾಭದ ಪ್ರಮಾಣ ಹೆಚ್ಚಿಸಬಹುದು. ಹಾಲಿ ಇರುವ ಬ್ಲಾಸ್ಟ್ ಫರ್ನೇಸ್ ಪುನರಾರಂಭ ಮಾಡುವುದು ಅಥವಾ ಹೊಸ ಬ್ಲಾಸ್ಟ್ ಫರ್ನೇಸ್ ಸ್ಥಾಪಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಕಾರ್ಮಿಕ ಸಂಘದ ಪದಾಧಿಕಾರಿಗಳು ಕೋರಿದರು.

‘ಸೈಲ್ ಪರಿಸರ ಸ್ನೇಹಿ ಉತ್ಪಾದನೆ ಅಳವಡಿಸಿಕೊಳ್ಳುವ ಬಗ್ಗೆ ಗಮನ ಹರಿಸುತ್ತಿದ್ದು, ವಾತಾವರಣದ ಮೇಲೆ ದುಷ್ಪರಿಣಾಮ ಬೀರುವ ಇಂಗಾಲದ ಡೈ ಆಕ್ಸೈಡ್ನ ಹೊರಸೂಸುವಿಕೆ ಕಡಿತಗೊಳಿಸಬೇಕಾಗಿದೆ. ಬ್ಲಾಸ್ಟ್ ಫರ್ನೇಸ್ನಲ್ಲಿ ಕಲ್ಲಿದ್ದಲು ಬಳಕೆ ಆಗುವುದರಿಂದ ಈ ಪ್ರಕ್ರಿಯೆಯಲ್ಲಿ ಇಂಗಾಲದ ಡೈ ಆಕ್ಸೈಡ್ ಬಿಡುಗಡೆಯಾಗುತ್ತದೆ. ಬ್ಲಾಸ್ಟ್ ಫರ್ನೇಸ್ ಬದಲಾಗಿ ಎಲೆಕ್ಟ್ರಿಕ್ ಆರ್ಕ್ ಫರ್ನೇಸ್ ಸ್ಥಾಪಿಸಿ, ಕಲ್ಲಿದ್ದಲು ಬಳಕೆ ಮಾಡದೆ ನಮ್ಮ ಉತ್ಪಾದನೆಗೆ ಬೇಕಾಗುವ ಕಚ್ಚಾ ಸಾಮಗ್ರಿ ಉತ್ಪಾದಿಸಿಕೊಳ್ಳಬಹುದು. ಆಧುನೀಕರಣದ ಭಾಗವಾಗಿ ವಿಐಎಸ್ಎಲ್ನಲ್ಲಿ ಪರಿಸರ ಸ್ನೇಹಿ ಉತ್ಪಾದನಾ ವಿಧಾನಗಳನ್ನು ಅಳವಡಿಸಿಕೊಳ್ಳಲಾಗುವುದು’ ಎಂದು ಪಾಂಡ ಪ್ರತಿಕ್ರಿಯಿಸಿದರು.

‘ವಿಐಎಸ್ಎಲ್ಗೆ ಗಣಿ ಮಂಜೂರಾಗಿ, ಅದು ಕಾರ್ಯಾರಂಭ ಮಾಡಿದರೆ ಅದಿರನ್ನು ಸ್ಪಾಂಜ್ ಐರನ್ ಆಗಿ ನಮ್ಮಲ್ಲೇ ಪರಿವರ್ತನೆ ಮಾಡಿಕೊಂಡು ಕಾರ್ಖಾನೆಗೆ ಬೇಕಾದ ಕಚ್ಚಾ ವಸ್ತು ಪೂರೈಸಿಕೊಳ್ಳಬಹುದು’ ಎಂದರು.

ವಿಐಎಸ್ಎಲ್ನ ಹಿರಿಯ ಮಹಾ ಪ್ರಬಂಧಕ ವಿಶ್ವನಾಥ್, ಮಹಾ ಪ್ರಬಂಧಕ ರವಿಚಂದ್ರನ್, ಕಾರ್ಮಿಕ ಸಂಘದ ಅಧ್ಯಕ್ಷ ಅಮೃತ್ ಕುಮಾರ್, ಉಪಾಧ್ಯಕ್ಷ ಕೆ.ಆರ್. ಮಲ್ಲಿಕಾರ್ಜುನ್, ಪ್ರಧಾನ ಕಾರ್ಯದರ್ಶಿ ಮೋಹನ್, ಕಾರ್ಯದರ್ಶಿ ಕೆ.ಆರ್. ಮನು, ಖಜಾಂಚಿ ಎಂ. ಶಿವಕುಮಾರ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-42-914080391

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.