ಶಿವಮೊಗ್ಗ: ಇಲ್ಲಿನ ತ್ಯಾವರೆಕೊಪ್ಪ ಹುಲಿ ಸಿಂಹ ಧಾಮದಲ್ಲಿ ಗುರುವಾರ ತಡರಾತ್ರಿ ಚಿಕಿತ್ಸೆ ನೀಡಲು ತೆರಳಿದ್ದ ಪಶುವೈದ್ಯೆ ಡಾ.ಸಮೀಕ್ಷಾ ರೆಡ್ಡಿ ಅವರ ಮೇಲೆ ನೀರಾನೆ ‘ಹಂಸಿಣಿ’ ತೀವ್ರ ದಾಳಿ ನಡೆಸಿದೆ. ಚಿಕಿತ್ಸೆಗೆ ಸ್ಪಂದಿಸದೇ ವೈದ್ಯೆ ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದಾರೆ.

ಸಮೀಕ್ಷಾ ರೆಡ್ಡಿ (27) ಮೂಲತಃ ಬೆಂಗಳೂರಿನ ಬನ್ನೇರುಘಟ್ಟ ನಿವಾಸಿ, ಫಾರ್ಮಾಸಿಸ್ಟ್ ಧ್ರುವಕುಮಾರ್ ಹಾಗೂ ಶೈಲಜಾ ದಂಪತಿಯ ಪುತ್ರಿ. ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನಲ್ಲಿ (ಜಿಕೆವಿಕೆ) ಪದವಿ ಮುಗಿಸಿದ್ದ ಅವರು ಒಂದೂವರೆ ತಿಂಗಳ ಹಿಂದಷ್ಟೇ ಇಲ್ಲಿನ ಹುಲಿ ಸಿಂಹ ಧಾಮಕ್ಕೆ ತರಬೇತಿಗೆ ನೇಮಕಗೊಂಡಿದ್ದರು.

ಪರಿಶೀಲನೆಗೆ ತೆರಳಿದ್ದರು: ಹುಲಿ-ಸಿಂಹ ಧಾಮದಲ್ಲಿ ವಿಷ್ಣು ಹಾಗೂ ಹಂಸಿಣಿ ಎಂಬ ಗಂಡು ಮತ್ತು ಹೆಣ್ಣು ನೀರಾನೆ ಇವೆ. ಹಂಸಿಣಿ ಎಂಟು ತಿಂಗಳು ತುಂಬಿದ್ದ ಗರ್ಭಿಣಿ. ನಾಲ್ಕು ದಿನಗಳಲ್ಲಿ ಹೆರಿಗೆಗೆ ದಿನ ನಿಗದಿಯಾಗಿತ್ತು. ಈ ಹೊತ್ತಿನಲ್ಲಿ ಸಾಮಾನ್ಯವಾಗಿ ನೀರಾನೆಗಳು ಆಹಾರ ಸೇವಿಸುವುದಿಲ್ಲ. ನಿತ್ಯ ಗಮನಿಸುತ್ತಿದ್ದ ಸಮೀಕ್ಷಾ ಗುರುವಾರ ರಾತ್ರಿ 11 ಗಂಟೆ ವೇಳೆಗೆ ವಾಹನ ಚಾಲಕ ಕಾರ್ತಿಕ್ ಜೊತೆ ನೀರಾನೆಗಳು ಇದ್ದ ಬಾವಿಯೊಳಗೆ ತೆರಳಿದ್ದಾರೆ.

ನೀರಿನಲ್ಲಿ ಕದಲದೇ ಕುಳಿತಿದ್ದ ಹಂಸಿಣಿಯ ದೇಹದ ಉಷ್ಣಾಂಶ ಪರಿಶೀಲಿಸಿದ್ಸಾರೆ. ಈ ವೇಳೆ ಏಕಾಏಕಿ ವ್ಯಗ್ರಗೊಂಡ ಹಂಸಿಣಿ, ಇಬ್ಬರ ಬೆನ್ನತ್ತಿದೆ. ಬಾವಿಯ ಏಣಿ ಹತ್ತಿ ಕಾರ್ತಿಕ್ ಹೊರಗೆ ಬಂದಿದ್ದಾರೆ. ಹಿಂದೆಯೇ ಏಣಿ ಹತ್ತುತ್ತಿದ್ದ ಡಾ.ಸಮೀಕ್ಷಾ ಕಾಲು ಜಾರಿ ಕೆಳಗೆ ನಿಂತಿದ್ದ ನೀರಾನೆಯ ಬಾಯಿಗೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಅದು ಬಾಯಿ ಒತ್ತಿ ಹಿಡಿದಿದ್ದು, ಮೈ ಮೂಳೆಗಳು ಮುರಿದು ತೀವ್ರ ರಕ್ತ ಸ್ರಾವದಿಂದ ಪ್ರಜ್ಞಾಹೀನರಾಗಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಬಂದ ಮೃಗಾಲಯ ಸಿಬ್ಬಂದಿ, ಹಂಸಿಣಿಯನ್ನು ಓಡಿಸಿ, ಗಾಯಗೊಂಡಿದ್ದ ಸಮೀಕ್ಷಾ ರೆಡ್ಡಿ ಅವರನ್ನು
ಕೊಂಡೊಯ್ದು ಇಲ್ಲಿನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿದ್ದರು.

‘ಡಾ.ಸಮೀಕ್ಷಾ ಅವರು ಫೆ. 1ರಂದು ತರಬೇತಿ ಟ್ರೈನಿ ವೈದ್ಯೆಯಾಗಿ ಮೃಗಾಲಯ ಸೇರಿದ್ದರು. ರಾತ್ರಿ ನೀರಾನೆ ಬಳಿ ಹೋಗಲು ಏನು ಕಾರಣ. ಅಲ್ಲಿಗೆ ತೆರಳಲು ಅವರಿಗೆ ಯಾರು ಏನು ಸೂಚನೆ ನೀಡಿದ್ದರು ಎಂದು ತಿಳಿದಿರಲಿಲ್ಲ. ಆ ಬಗ್ಗೆ ಪರಿಶೀಲಿಸುತ್ತೇವೆ’ ಎಂದು ಹುಲಿ-ಸಿಂಹ ಧಾಮದ ಕಾರ್ಯನಿರ್ವಾಹಕ
ನಿರ್ದೇಶಕ ಅಮಾರಕ್ಷರ್ ತಿಳಿಸಿದರು.

ತನಿಖೆಗೆ ಅರಣ್ಯ ಸಚಿವರ ಸೂಚನೆ

ತರಬೇತಿ ನಿರತ ವೈದ್ಯೆಯು ನೀರಾನೆಗೆ ಚಿಕಿತ್ಸೆ ನೀಡಲು ತೆರಳಿದ್ದ ವೇಳೆ ಸುರಕ್ಷತಾ ನಿಯಮಗಳ ಪಾಲನೆ ಆಗಿದೆಯೇ ಎಂಬುದರ ಬಗ್ಗೆ ತನಿಖೆ ನಡೆಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ. ತನಿಖೆ ನಡೆಸಿ 7 ದಿನಗಳೊಳಗೆ ವರದಿ ನೀಡುವಂತೆ ಶಿವಮೊಗ್ಗದ ಅರಣ್ಯ ವಿಭಾಗದ ಸಿಸಿಎಫ್ಗೆ ಸೂಚನೆ ನೀಡಿದ್ದಾರೆ.

‘ಟ್ರೈನಿ ವೈದ್ಯೆ ಕಳುಹಿಸಿದ್ದು ಸರಿಯೇ?’

‘ತರಬೇತಿ ನಿರತ ವೈದ್ಯೆಯನ್ನು ಮಾರ್ಗದರ್ಶಕರ ನೆರವಿಲ್ಲದೆ ನೀರಾನೆಯಂತಹ ದೈತ್ಯ ಪ್ರಾಣಿಯ ಆರೋಗ್ಯ ಪರಿಶೀಲಿಸಲು ಬಿಟ್ಟಿದ್ದು ಸರಿಯೇ’ ಎಂದು ಡಾ.ಸಮೀಕ್ಷಾ ರೆಡ್ಡಿ ಸೋದರ ಮಾವ ರಾಜಶೇಖರ್ ಪ್ರಶ್ನಿಸಿದರು.

‘ಸಮೀಕ್ಷಾ ಪೋಷಕರಿಗೆ ಒಬ್ಬಳೇ ಮಗಳು. ವನ್ಯಜೀವಿಗಳ ಬಗ್ಗೆ ವಿಪರೀತ ಕಾಳಜಿ ಹೊಂದಿದ್ದಳು’ ಎಂದು ನೊಂದುಕೊಂಡರು.

ಘಟನೆ ನಡೆದ ದಿನ ಹಿರಿಯ ವೈದ್ಯ ಡಾ.ಮುರಳಿ ಮನೋಹರ್ ಯುಗಾದಿ ಹಬ್ಬದ ಕಾರಣ ರಜೆಯಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.