ಭದ್ರಾವತಿ: ‘ಮಹಿಳೆಯರು ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಹಾಗೂ ಆರ್ಥಿಕವಾಗಿ ಸದೃಢರಾಗಲು ಸಂಘಟಿತರಾಗುವುದು ಅನಿವಾರ್ಯ’ ಎಂದು ವೆಲಂಕಣಿ ಅರೋಗ್ಯಮಾತೆ ಚರ್ಚ್ನ ಧರ್ಮಗುರು ಸ್ಟೀವನ್ ಡೆಸಾ ಹೇಳಿದರು.

ಭದ್ರಾವತಿ ನಗರದ ಅಮಲೋದ್ಬವಿ ಮಾತೆ ಚರ್ಚ್ ಆವರಣದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಮಹಿಳಾ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಸ್ತ್ರೀ ಸಂಘಟನೆಗಳು ಮಹಿಳೆಯರಿಗೆ ಮುಖ್ಯ ವಾಹಿನಿಯಲ್ಲಿ ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಲು ಬೇಕಾದ ಅವಕಾಶಗಳನ್ನು ಸೃಷ್ಟಿಸಿವೆ ಎಂದರು. ಆಧುನಿಕ ಮಾರುಕಟ್ಟೆಯ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಮಹಿಳೆಯರಿಗೆ ಕೌಶಲ ಆಧರಿತ ತರಬೇತಿ ನೀಡುವುದು ಅಗತ್ಯ ಎಂದರು.

ಕಾಗದನಗರದ ಕಾರ್ಮಿಕರ ಸಂತ ಜೋಸೆಫರ ದೇವಾಲಯದ ಧರ್ಮಗುರು ಫಾದರ್ ಕ್ರಿಸ್ತರಾಜ್, ಸೇಂಟ್ ಚಾರ್ಲ್ಸ್ ವಿದ್ಯಾಸಂಸ್ಥೆ ಸುಪೀರಿಯರ್ ಎಲಿಜಬೆತ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ. ಶಿವಕುಮಾರ್, ಉದ್ಯಮಿ ಬಿ.ಕೆ ಜಗನ್ನಾಥ್, ನಗರಸಭಾ ಸದಸ್ಯೆ ಲತಾ ಚಂದ್ರಶೇಖರ್, ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಅಧ್ಯಕ್ಷ ಸೆಲ್ವರಾಜ್, ಮಹಿಳಾ ಘಟಕದ ಗೌರವಾಧ್ಯಕ್ಷೆ ಎಲ್ಸಿ ಡಿಸೋಜಾ, ಅಧ್ಯಕ್ಷೆ ಜೆಸ್ಸಿ ಬೆನೆಟ್ ಗೋನ್ಸಾಲ್ವಿಸ್, ಉಪಾಧ್ಯಕ್ಷೆ ಎಸ್ತರ್, ಕಾರ್ಯದರ್ಶಿ ನಿರ್ಮಲಾ ಪೀಟರ್, ಸಹ ಕಾರ್ಯದರ್ಶಿ ಕ್ಲೇರಿಟ್ ಡಿಸೋಜಾ, ಖಜಾಂಚಿ ಮೋಕ್ಷಾ ರಾಣಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.