ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಜಿಲ್ಲೆಯ ಎಲ್ಲೆಡೆ ಸಂಭ್ರಮದ ಮಹಾ ಶಿವರಾತ್ರಿ

Last Updated 21 ಫೆಬ್ರುವರಿ 2020, 20:15 IST
ಅಕ್ಷರ ಗಾತ್ರ

ಶಿವಮೊಗ್ಗ:ಜಿಲ್ಲೆಯ ಎಲ್ಲೆಡೆ ಶುಕ್ರವಾರ ಮಹಾ ಶಿವರಾತ್ರಿಹಬ್ಬ, ಜಾಗರಣೆ ಅತ್ಯಂತ ಸಂಭ್ರಮದಿಂದಜರುಗಿತು.

ಗಮನ ಸೆಳೆದ ಹರಕೆರೆ:ತೀರ್ಥಹಳ್ಳಿ ರಸ್ತೆಯ ಪುರಾತನ ಹರಕೆರೆ ರಾಮೇಶ್ವರ ದೇವಾಲಯದಲ್ಲಿ ಮುಂಜಾನೆಯಿಂದ ಭಕ್ತರು ಸರತಿ ಸಾಲಿನಲ್ಲಿ ನಿಂತು ಈಶ್ವರನ ದರ್ಶನ ಪಡೆದರು. ಮುಂಜಾನೆ ಸನಿಹದ ತುಂಗಾ ನದಿಯಲ್ಲಿ ಸ್ನಾನ ಮಾಡಿದ ಭಕ್ತರು ಕಿಲೋಮೀಟರ್ ದೂರದವರೆಗೂ ಬಿಸಿಲು ಲೆಕ್ಕಿಸದೆಸಾಗುತ್ತಾಪೂಜೆ ಸಮರ್ಪಿಸಿದರು.

ಹರಕೆರೆ ಶಿವನ ಸನ್ನಿಧಿಯಲ್ಲಿ ಸ್ವಾಮಿಗೆ ಹಬ್ಬದ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು. ರುದ್ರಾಭಿಷೇಕ, ಬಿಲ್ವಾರ್ಚನೆ, ಮಂಗಳಾರತಿ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು. ಭಕ್ತರು ಶಿವನಿಗೆ ಬಿಲ್ವಪತ್ರೆ ಹಾಗೂ ತುಂಬೆ ಹೂವಿನ ಹಾರಗಳನ್ನು ಅರ್ಪಿಸಿದರು.

ಜನರ ದಟ್ಟಣೆ ನಿಯಂತ್ರಿಸಲು ದೇವಾಲಯ ಆಡಳಿತ ಮಂಡಳಿ ಹಾಗೂ ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು. ಬಿಸಿಲ ಬೇಗೆಗೆ ಬಸವಳಿದ ಭಕ್ತರಿಗೆ ಅಲ್ಲಲ್ಲಿ ಕೋಸಬಂರಿ, ಪಾನಕ, ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ವಿವಿಧೆಡೆ ವಿಶೇಷ ಅಲಂಕಾರ:ವೀರಶೈವ ಕಲ್ಯಾಣ ಮಂದಿರದ ಪಕ್ಕದ ಕಾಶಿ ವಿಶ್ವನಾಥನಿಗೆ ವಿಶೇಷಅಲಂಕಾರ ಮಾಡಲಾಗಿತ್ತು. ವಿನೋಬನಗರ ವೀರಶೈವ ಸೇವಾ ಸಮಿತಿ ಶಿವಾಲಯದಲ್ಲಿ ಪ್ರಾತಃಕಾಲದಿಂದ ಅಷ್ಟೋತ್ತರ ಬಿಲ್ವಾರ್ಚನೆ, ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು. ಆದಿಚುಂಚನಗಿರಿ ಶಾಖಾ ಮಠ, ಭಜನಾ ಪರಿಷತ್ ಸಹಯೋಗದಲ್ಲಿ ಶರಾವತಿ ನಗರದ ಕಾಲಭೈರವೇಶ್ವರ ದೇವಸ್ಥಾನದಲ್ಲಿ ಅಖಂಡ ಭಜನೆ ಜರುಗಿತು. ಅಲಂಕಾರ ಸೇವೆ, ಪ್ರಸಾದ ಸೇವೆ, ರುದ್ರಾಭಿಷೇಕ, ಪಂಚಮೃತಾಭಿಷೇಕ, ಕ್ಷೀರಾಭಿಷೇಕ, ಭಸ್ಮಾರ್ಚನೆ, ಬಿಲ್ವಾರ್ಚನೆ ಪೂಜೆ ನಡೆದವು. ಪ್ರಸನ್ನನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗುರುಪುರದ ಬಿಜಿಎಸ್ ಶಾಲಾ ಆವರಣದಲ್ಲಿನ ಸೋಮೇಶ್ವರ ಸ್ವಾಮಿ ಸನ್ನಿಧಾನದಲ್ಲಿ ರುದ್ರಾಭಿಷೇಕ, ಪಂಚಾಮೃತಾಭಿಷೇಕ ಜರುಗಿದವು.

ಶಾಂತಿನಗರದ ಶನೈಶ್ಚರ ದೇವಸ್ಥಾನ ಅಭಿವೃದ್ಧಿ ಸಮಿತಿ ಶಿವರಾತ್ರಿ ಜಾತ್ರಾ ಮಹೋತ್ಸವ ಮತ್ತು ಶನೈಶ್ಚರಸ್ವಾಮಿಯ ಕೆಂಡಾರ್ಚನೆ ನಡೆಯಿತು. ರಾಜಬೀದಿ ಉತ್ಸವದೊಂದಿಗೆ ಮಹಿಳೆಯರಿಂದ 108 ಗಂಗೆ ಕಲಶಪೂಜೆ ನಂತರ ಗಣಪತಿ ಪೂಜೆ, ಮಹಾಗಣಪತಿಗೆ ಪಂಚಾಮೃತಾಭಿಷೇಕ, ಸ್ವಾಮಿಗೆ ತೈಲಾಭಿಷೇಕ, ರುದ್ರಾಭಿಷೇಕ ಜರುಗಿತು. ನಂತರ ರಾಜವಿಕ್ರಮ ಶನಿಪ್ರಭಾವ ನಾಟಕ ಪ್ರದರ್ಶನ ನಡೆಯಿತು.

ದ್ವಾದಶ ಜ್ಯೋತಿರ್ಲಿಂಗ ದರ್ಶನ:ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯವಿಶ್ವವಿದ್ಯಾಲಯ ಸವಳಂಗ ರಸ್ತೆಯ ಬಸವೇಶ್ವರನಗರ ಶಿವಾಲಯದಲ್ಲಿ 40 ಅಡಿ ಎತ್ತರದ ಶಿವಲಿಂಗದೊಳಗಡೆ ಝಗಮಗಿಸುವ ಭಾರತ, ಭಾರತದ ಒಳಗಡೆ ದ್ವಾದಶ ಜ್ಯೋತಿರ್ಲಿಂಗ ದರ್ಶನ ಕಾರ್ಯಕ್ರಮ ಆಯೋಜಿಸಿತ್ತು.ಕುವೆಂಪು ರಸ್ತೆಯ ವೀರಶೈವ ಯುವ ಸಂಗಮದಿಂದ ಶಿವರಾತ್ರಿ ಅಂಗವಾಗಿ ಹೊನಲು ಬೆಳಕಿನ ಷಟಲ್ ಬ್ಯಾಟ್ಮಿಟನ್ ಪಂದ್ಯಾವಳಿ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು.

ಭೀಮೇಶ್ವರ ದೇವಸ್ಥಾನ, ಬಸವನ ಗುಡಿಯ ಶ್ರೀಶೈಲಮಲ್ಲಿಕಾರ್ಜುನಸ್ವಾಮಿಗೆ ರುದ್ರಾಭಿಷೇಕ, ಬಿ.ಬಿ. ರಸ್ತೆಯ ಭವಾನಿ ಶಂಕರ ದೇವಾಲಯ, ಹೊಳೆಹೊನ್ನೂರು ರಸ್ತೆಯ ಅರಕೇಶ್ವರ ಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು. ದೇವಾಲಯದ ಆವರಣವನ್ನು ತೋರಣ, ಬಾಳೆಕಂಬ ಮತ್ತು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಅಲ್ಲಲ್ಲಿ ಭಜನೆ, ಮನರಂಜನಾ ಕಾರ್ಯಕ್ರಮ ನಡೆಯಿತು.

ಮಂಜುನಾಥೇಶ್ವರನ ಸನ್ನಿಧಿ:ಗಾಡಿಕೊಪ್ಪಲಗನ ಮಂದಿರದ ಮಂಜುನಾಥೇಶ್ವರ ಹಾಗೂ ಪರಿವಾರ ದೇವತೆಗಳ ದೇವಾಲಯದಲ್ಲಿಶಿವರಾತ್ರಿ ಅಂಗವಾಗಿ ರುದ್ರಾಭಿಷೇಕ, ಶತರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜಾ ಕಾರ್ಯಗಳು ಆರಂಭಗೊಂಡವು. ದೇವಾಲಯದ ಆಡಳಿತ ಮಂಡಳಿಅಧ್ಯಕ್ಷ ಎಲ್.ಸತ್ಯನಾರಾಯಣ ರಾವ್ ನೇತೃತ್ವದಲ್ಲಿ ಸಕಲ ವ್ಯವಸ್ಥೆ ಕಲ್ಪಿಸಲಾಗಿತ್ತು.

ರಾಷ್ಟ್ರೀಯ ಬಸವದಳ ಟ್ರಸ್ಟ್ ಆಶ್ರಯದಲ್ಲಿ ಕಲ್ಲಳ್ಳಿಯ ಬಸವ ಮಂಟಪದಲ್ಲಿ ಗಣಮೇಳ, ಸಾಮೂಹಿಕ ಇಷ್ಟಲಿಂಗ ಪೂಜೆ, ಪ್ರಾರ್ಥನೆ ನಡೆಯಿತು. ಕೃಷಿ ನಗರದ ಶಕ್ತಿ ಗಣಪತಿ ದೇವಸ್ಥಾನದಲ್ಲಿ ರುದ್ರಹೋಮ, ಭೂ ಕೈಲಾಸ ಯಕ್ಷಗಾನ ಪ್ರಸಂಗ ಆಯೋಜಿಸಲಾಗಿತ್ತು.ಬಸವನಗುರಿಯ ಶ್ರೀ ಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಭಕ್ತರಿಗೆ ತುಳಸಿ ಹಾಗೂ ಬಿಲ್ವ ಪತ್ರೆ ಗಿಡಗಳನ್ನು ವಿತರಿಸಲಾಯಿತು. ಗಾಂಧಿ ಪಾರ್ಕ್ನಲ್ಲಿನ ಶಿವಮೂರ್ತಿಗೆ ಪಾಲಿಕೆಯ ಗುತ್ತಿಗೆದಾರರಿಂದ ಪೂಜೆ ಹಾಗೂ ಭಕ್ತರಿಗೆ ಕೋಸಂಬರಿ, ಪಾನಕ ವಿತರಿಸಲಾಯಿತು. ಭಗತ್ ಸೇನೆಯಿಂದ ವಾಸವಿ ಶಾಲಾ ಆವರಣದಲ್ಲಿ ಮಹಾರುದ್ರಾಭಿಷೇಕ, ಕಾಲಭೈರವ ಪೂಜೆ, ಮಹಾ ಮೃತ್ಯುಂಜಯ ಹೋಮ ನಡೆಯಿತು.

ದರ ಏರಿಕೆ ಮಧ್ಯೆಯೂ ಖರೀದಿ ಭರಾಟೆ:ಮಾರುಕಟ್ಟೆಯಲ್ಲಿ ಬೆಲೆ ಏರಿಕೆಇದ್ದರೂ ಭಕ್ತರು ಹೂವು, ಹಣ್ಣು, ಕಾಯಿಗಳನ್ನು ಖರೀದಿಸಿದರು. ಉಪವಾಸದ ಹಬ್ಬವಾದ ಕಾರಣ ಪಾನಕ,ಕಲ್ಲಂಗಡಿ, ಬನಾಸ್ಪತ್ರೆ, ಖರಬೂಜ,ಬಾಳೆಹಣ್ಣು, ಕಿತ್ತಳೆ, ಸೇಬು, ದ್ರಾಕ್ಷಿ ಇತ್ಯಾದಿ ಹಣ್ಣುಗಳನ್ನುಖರೀದಿಸಿದರು. ಭಕ್ತರುಸಂಜೆ ಲಘು ಉಪಹಾರ ಸೇವಿಸಿ, ಶಿವರಾತ್ರಿ ಜಾಗರಣೆಮಾಡಿದರು.

ನಗರದ ವಿವಿಧ ಸಂಘ, ಸಂಸ್ಥೆಗಳು ಶಿವರಾತ್ರಿ ಪ್ರಯುಕ್ತ ಜಾಗರಣೆ ಮಾಡುವ ಸಲುವಾಗಿ ಭಜನೆ, ಸಂಗೀತ, ಶಿವನ ಸ್ಮರಣೆ, ಶಿವ ಕಥೆ, ಪ್ರವಚನ ಹಮ್ಮಿಕೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT