ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಮುಖಂಡನ ಮನೆ ಮೇಲೆ ದಾಳಿ:₹ 1.60 ಲಕ್ಷ ವಶ

ಕಾಂಗ್ರೆಸ್‌ ಮುಖಂಡ ಹೂಲಗೇರಿ ಮನೆ ಮೇಲೆ ದಾಳಿ
Last Updated 2 ಏಪ್ರಿಲ್ 2018, 13:55 IST
ಅಕ್ಷರ ಗಾತ್ರ

ಲಿಂಗಸುಗೂರು: ಕಾಂಗ್ರೆಸ್‌ನ ಹಿರಿಯ ಮುಖಂಡ ಡಿ.ಎಸ್‌. ಹೂಲಗೇರಿ ಮನೆ ಮೇಲೆ ದಾಳಿ ನಡೆಸಿದ ಜಾಗೃತ ದಳದ ಮುಖ್ಯಸ್ಥ ಮಲ್ಲೇಶ ಅಕ್ಕರಕಿ ನೇತೃತ್ವದ ತಂಡ ₹ 1.60 ಲಕ್ಷ ನಗದು, ಪಕ್ಷದ ಕರಪತ್ರ ಹಾಗೂ ಕಿರುಹೊತ್ತಿಗೆ ಜಪ್ತಿ ಮಾಡಿಕೊಂಡಿದೆ. ಭಾನುವಾರ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ದಾಳಿ ನಡೆಸಿದಾಗ ಮಾಲೀಕರು ಮನೆಯಲ್ಲಿ ಇರಲಿಲ್ಲ. ‘ಮಾಲೀಕರು ತಮಗೆ ದುಡಿದ ವೇತನ ಹಣ ನೀಡಲು ತಂದಿದ್ದಾರೆ. ಊರಿನಿಂದ ಬಂದು ವೇತನ ನೀಡುವುದಾಗಿ ಹೇಳಿದರು. ಹಾಗಾಗಿ ಈ ಹಣ ತಮಗೆ ಸೇರಿದ್ದು’ ಎಂದು ಮನೆಯ ಕೆಲಸಗಾರರಾದ ಕುಪ್ಪಮ್ಮ, ಮಾನಯ್ಯ, ವಿರೇಶ, ಜಾಫರ್‌ ಮಾಹಿತಿ ನೀಡಿದರು.

‘ಹಿರಿಯ ಅಧಿಕಾರಿಗಳ ಮಾಹಿತಿ ಮೇರೆಗೆ ದಾಳಿ ನಡೆದಿದ್ದು ₹ 1.60 ಲಕ್ಷ ಹಣ ಸಿಕ್ಕಿದೆ. ಮಾಲೀಕರು ದೂರವಾಣಿ ಮೂಲಕ ಈ ಹಣಕ್ಕೆ ಅಗತ್ಯ ದಾಖಲೆ ನೀಡುವುದಾಗಿ ತಿಳಿಸಿದ್ದಾರೆ. ದಾಖಲೆ ಪರಿಶೀಲನೆ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಜಾಗೃತ ದಳದ ಮುಖ್ಯಸ್ಥ ಮಲ್ಲೇಶ ಅಕ್ಕರಕಿ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT