ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ ತಾಲ್ಲೂಕಿನ ಗ್ರಾಮಗಳಲ್ಲಿ ಮೌನ

ಶ್ರೀಮಠಕ್ಕೆ ತೆರಳಲು ಸಾರ್ವಜನಿಕರಿಗೆ ಬಸ್‌ ವ್ಯವಸ್ಥೆ
Last Updated 22 ಜನವರಿ 2019, 14:33 IST
ಅಕ್ಷರ ಗಾತ್ರ

ಮಾಗಡಿ: ಶಿವಕುಮಾರ ಸ್ವಾಮೀಜಿ ತವರೂರು ವೀರಾಪುರ ಸೇರಿದಂತೆ ತಾಲ್ಲೂಕಿನಾದ್ಯಂತ ಮಂಗಳವಾರ ಮೌನ ಆಚರಿಸಿತ್ತು. ಮಠಕ್ಕೆ ತೆರಳಲು ಸಾರ್ವಜನಿಕರಿಗೆ ಬಸ್‌ ವ್ಯವಸ್ಥೆ ಮಾಡಲಾಗಿತ್ತು.

ಮೋಟಗೊಂಡನಹಳ್ಳಿ, ಕುದೂರು, ತಿಪ್ಪಸಂದ್ರ, ಸೋಲೂರು, ಗುಡೇಮಾರನಹಳ್ಳಿ, ಮಾಡಬಾಳ್‌, ಹುಲಿಕಲ್‌, ಸುಗ್ಗನಹಳ್ಳಿ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ವರ್ತಕರು ಸ್ವಯಂಪ್ರೇರಣೆಯಿಂದ ಅಂಗಡಿಗಳನ್ನು ಮುಚ್ಚಿ ಶ್ರೀಗಳ ನಿಧನಕ್ಕೆ ಗೌರವ ಸೂಚಿಸಿದರು. ಅಘೋಷಿತ ಬಂದ್‌ ಆಚರಿಸಲಾಯಿತು.

ಪಟ್ಟಣದ ಡೂಮ್‌ಲೈಟ್‌ ಸರ್ಕಲ್‌ನಲ್ಲಿ ವೀರಶೈವ ಮಂಡಳಿ ವತಿಯಿಂದ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ‌ಮೆರವಣಿಗೆ ನಡೆಸಲಾಯಿತು.

ರಾಜ್ಯ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ, ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಪಿ.ವಿ.ಸೀತಾರಾಮು, ವೀರಶೈವ ಮಂಡಳಿ ಅಧ್ಯಕ್ಷ ರುದ್ರಮೂರ್ತಿ, ಬಿಜೆಪಿ ಒಬಿಸಿ ಮುಖಂಡ ಮಾರಪ್ಪ ದೊಂಬಿದಾಸ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಿಯಾಜ್‌, ಸದಸ್ಯರಾದ ರಘು, ಮಹೇಶ್‌, ನಯಾಜ್‌ ಅಹಮದ್‌, ಕನ್ನಡ ಸಹೃದಯ ಬಳಕಗದ ಅಧ್ಯಕ್ಷ ಡಾ.ಮುನಿರಾಜಪ್ಪ, ತಾಲ್ಲೂಕು ಕ.ಸಾ.ಪ.ಅಧ್ಯಕ್ಷೆ ಕಲ್ಪನಾ ಶಿವಣ್ಣ, ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್‌, ಕಟ್ಟಡ ಕಾರ್ಮಿಕರ ಸಂಘದ ಹೊಸಪೇಟೆ ವೆಂಕಟೇಶ್‌ ಇತರರು ಶ್ರದ್ಧಾಂಜಲಿ ಅರ್ಪಿಸಿದರು.

ರಾಮರಾಜ ಅರಸ್‌ ರಸ್ತೆಯಲ್ಲಿ ಮೆರವಣಿಗೆ ನಡೆಯಿತು. ಕುದೂರು ಮತ್ತು ಮೋಟಗೊಂಡನಹಳ್ಳಿಯಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಶ್ರದ್ಧಾಂಜಲಿ: ಕನ್ನಡ ಸಹೃದಯ ಬಳಗ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌, ತಾಲ್ಲೂಕು ಕುರುಬರ ಸಂಘ, ವಿನಾಯಕ ಗೆಳೆಯರ ಬಳಗ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವಿಚಾರ ವೇದಿಕೆ, ಕರ್ನಾಟಕ ಪ್ರತಿಭಾ ಕೇಂದ್ರ, ತಾಲ್ಲೂಕು ದಲಿತ ಸಂಘರ್ಷ ಸಮಿತಿ, ತಾಲ್ಲೂಕು ಆರ್ಯ ಈಡಿಗರ ಸಂಘ, ತಿಗಳರ ಕ್ಷೇಮಾಭಿವೃದ್ಧಿ ಸಂಘ, ಒಕ್ಕಲಿಗರ ಸಂಘ, ವಿಶ್ವಕರ್ಮ ಸಮಾಜ, ಕುರುಹಿನಶೆಟ್ಟಿ ಸಂಘ, ಗಾಣಿಗರ ಸಂಘ, ಕುಂಬಾರರ ಸಂಘ, ತಾಲ್ಲೂಕು ಶಿಕ್ಷಕರ ಸಂಘ, ಆರ್ಯವೈಶ್ಯ ಮಂಡಳಿ, ತಾಲ್ಲೂಕು ಮಾಚಿದೇವ ಮಡಿವಾಳರ ಸಂಘ, ತಾಲ್ಲೂಕು ರೈತಸಂಘ ಹಾಗೂ ಹಸಿರು ಸೇನೆ, ತಾಲ್ಲೂಕು ಸವಿತಾ ಸಮಾಜ, ವೀರಶೈವ ವಿನಾಯಕ ಗೆಳೆಯರ ಬಳಗ ಸೇರಿದಂತೆ ಇತರ ಸಂಘ ಸಂಸ್ಥೆಗಳ ವತಿಯಿಂದ ಶ್ರದ್ಧಾಂಜಲಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT