ಹಂದಿ ಸಾಕಿ ಯಶಸ್ಸು ಕಂಡ ಸೋಮು..!

7
ಫಾರಂಹೌಸ್‌ಗೆ ಭೇಟಿ ನೀಡಿ ಹಂದಿ ಖರೀದಿಸುವ ವ್ಯಾಪಾರಿಗಳು; ಕೇರಳ–ಗೋವಾಗೆ ಮಾಂಸ ರಫ್ತು

ಹಂದಿ ಸಾಕಿ ಯಶಸ್ಸು ಕಂಡ ಸೋಮು..!

Published:
Updated:
Deccan Herald

ಆಲಮೇಲ: ಹೊಸ ಉದ್ಯೋಗದ ಹುಡುಕಾಟದಲ್ಲಿದ್ದ ಸೋಮು ಅವರಿಗೆ ಹೊಳೆದಿದ್ದೇ ಹಂದಿ ಸಾಕಣೆ ಉದ್ಯಮ. ಹಂದಿಗಳನ್ನು ವೈಜ್ಞಾನಿಕ ಪದ್ಧತಿಯಡಿ ಚೆನ್ನಾಗಿ ಸಾಕಿ; ಉತ್ತಮ ಧಾರಣೆಗೆ ಮಾರಾಟ ಮಾಡಿ, ಲಾಭ ಗಳಿಸಬೇಕು ಎಂಬ ಕನಸು ನನಸಾಗಿಸಿಕೊಂಡಿದ್ದಾರೆ ಭಾಸಗಿಯವರು.

ಜಿಲ್ಲೆಯಲ್ಲಿ ಈ ಪ್ರಯೋಗ ಮಾಡಿದ ಯುವಕರು ಬೆರಳೆಣಿಕೆ. ಏಕೆಂದರೇ ಹಂದಿ ಎಂದಾಕ್ಷಣ ಮೂಗು ಮುರಿಯುವವರೇ ಹೆಚ್ಚು, ಹಂದಿ ಸಾಕಣೆ ತುಂಬಾ ಕಷ್ಟ. ಹೊಲಸು ಕಾಯಕ ಎನ್ನುವವರೇ ಅಧಿಕ. ಅಂತಹುದರಲ್ಲಿ ಇದನ್ನೇ ಸವಾಲಾಗಿ ಸ್ವೀಕರಿಸಿ ಲಾಭದಾಯಕ ಉದ್ಯಮವನ್ನಾಗಿಸಿಕೊಂಡಿದ್ದಾರೆ ಸೋಮು ಭಾಸಗಿ.

ಆಲಮೇಲ ಪಟ್ಟಣದಲ್ಲಿ ಮೂರು ವರ್ಷದ ಹಿಂದೆ ಹಂದಿ ಸಾಕಣೆ ಮಾಡಲು ಮುಂದಾದ ಸೋಮು ಭಾಸಗಿ, ಅದನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಸಾಕಷ್ಟು ಲಾಭ ಗಳಿಸುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.

ಸಾಕಣೆಗೂ ಮುನ್ನಾ ಸೋಮು ಬೆಂಗಳೂರಿನ ಹೆಸರಘಟ್ಟದಲ್ಲಿರುವ ಹಂದಿ ಸಾಕಣೆ ಸಂವರ್ಧನಾ ಕೇಂದ್ರದಲ್ಲಿ ತರಬೇತಿ ಪಡೆದುಕೊಂಡರು. ನಂತರ ₹ 2 ಲಕ್ಷ ವೆಚ್ಚದಲ್ಲಿ, 2015ರಲ್ಲಿ ತಮ್ಮ ಹೊಲದಲ್ಲಿ ಹಂದಿ ಫಾರಂ ಹೌಸ್ ಆರಂಭಿಸಿದರು.

ಸುಸಜ್ಜಿತವಾದ ಕೊಟ್ಟಿಗೆ ನಿರ್ಮಿಸಿದರು. ಅದರೊಳಗೆ ಚಿಕ್ಕ ಚಿಕ್ಕ ಭಾಗಗಳನ್ನು ಮಾಡಿ ಹಂದಿಗಳನ್ನು ಪ್ರತ್ಯೇಕವಾಗಿ ಕೂಡಿದರು. ಕೃಷಿಯ ಜತೆಗೆ ಉಪ ಕಸುಬಾಗಿ ಕೈಗೆತ್ತಿಕೊಂಡು, ಡ್ಯುರಾಕ್, ಯಾರ್ಕಶೈರ್ ಎಂಬ ಎರಡು ತಳಿಗಳನ್ನು ಸಾಕಲು ಶುರು ಮಾಡಿದರು. ಇದೀಗ 150ಕ್ಕೂ ಹೆಚ್ಚು ಹಂದಿಗಳು ಈ ಫಾರಂ ಹೌಸ್‌ನಲ್ಲಿವೆ.

ಆಹಾರ:  ಫಾರಂಹೌಸ್‌ನಲ್ಲೇ ಹಿಟ್ಟು ಮಾಡುವ ನುಚ್ಚಿನ ಗಿರಣಿಯನ್ನೂ ಹಾಕಿಕೊಂಡಿದ್ದಾರೆ ಸೋಮು. ನಿತ್ಯವೂ ವಯಸ್ಕ ಹಂದಿಗೆ 5ರಿಂದ 8 ಕೆಜಿಯಷ್ಟು ಆಹಾರವನ್ನೂ ನೀಡುತ್ತಾರೆ. ಮೆಕ್ಕೆಜೋಳ, ಸೊಯಾಬೀನ್ ಜತೆಗೆ ಖನಿಜಾಂಶ ಮಿಶ್ರಣ ಬೆರೆಸಿ ಆಹಾರ ನೀಡುತ್ತಾರೆ. ಇದರ ಜತೆಗೆ ಹೋಟೆಲ್‌ಗಳ ಆಹಾರ ತ್ಯಾಜ್ಯವನ್ನು ಸಂಗ್ರಹಿಸಿ ತರುತ್ತಾರೆ. ನುಗ್ಗೆ ತಪ್ಪಲು ಮತ್ತು ಹುಲ್ಲನ್ನು ಸಹ ನೀಡುತ್ತಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !