ಭೀಮನ ಅಮಾವಾಸ್ಯೆ ವಿಶೇಷ ಪೂಜೆ

7

ಭೀಮನ ಅಮಾವಾಸ್ಯೆ ವಿಶೇಷ ಪೂಜೆ

Published:
Updated:
Deccan Herald

ಮಾಗಡಿ: ಭೀಮನ ಅಮಾವಾಸ್ಯೆಯ ಅಂಗವಾಗಿ ತಾಲ್ಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಉತ್ಸವಗಳು ಶ್ರದ್ದಾಭಕ್ತಿಯಿಂದ ನಡೆದವು.

ನೇತೇನಹಳ್ಳಿ ಚಾಮುಂಡೇಶ್ವರಿ ಅಮ್ಮನವರ ದೇವಾಲಯದಲ್ಲಿ ಪ್ರಾಕಾರೋತ್ಸವ ನಡೆಯಿತು. ದೇವಾಲಯದ ಸ್ಥಾಪಕಿ ಕಮಲಮ್ಮ, ದೀಪಾ ಹೇಮಂತ್‌, ಮಧುರವಿ ದಂಪತಿ ಭಕ್ತರೊಡಗೂಡಿ ವಿಶೇಷ ಪೂಜೆ ಸಲ್ಲಿಸಿದರು. ಅರ್ಚಕ ರವಿ ತಂಡದವರು ಪೂಜಾದಿಗಳನ್ನು ನೆರವೇರಿಸಿದರು.

ತಟವಾಳ್‌ ದಾಖಲೆ ಕಾಡುಗೊಲ್ಲರ ಹಟ್ಟಿಯ ಅಜ್ಜಪ್ಪ ಸ್ವಾಮಿ, ದೇವರ ಹಟ್ಟಿ ಲಕ್ಷ್ಮಿನರಸಿಂಹ ಸ್ವಾಮಿ, ತಿರುಮಲೆ ತಿರುವೆಂಗಳನಾಥ, ರಂಗನಾಥ ಸ್ವಾಮಿ, ಸೋಮೇಶ್ವರ ಸ್ವಾಮಿ, ಸಾವನದುರ್ಗದ ಲಕ್ಷ್ಮೀನರಸಿಂಹಸ್ವಾಮಿ ಮತ್ತು ಸಾವಂದಿ ವೀರಭದ್ರ ಸ್ವಾಮಿ, ಸುಗ್ಗನಹಳ್ಳಿ ಲಕ್ಷ್ಮೀನರಸಿಂಹ ಸ್ವಾಮಿ, ಕುದೂರಿನ ಲಕ್ಷ್ಮೀದೇವಿ ಅಮ್ಮನವರ ದೇವಾಲಯಗಳಿಗೆ ಮಳೆಯ ನಡುವೆಯೂ ಭಕ್ತರ ದಂಡೇ ಹರಿದು ಬಂದಿತ್ತು.

ವಿಶೇಷ ಉತ್ಸವಗಳು ನಡೆದವು. ಉಡುವೆಗೆರೆ, ಹೊಸಪೇಟೆ ರಸ್ತೆ, ಬೈಚಾಪುರದ ಶನೇಶ್ವರ ಸ್ವಾಮಿ ದೇವಾಲಯಗಳಲ್ಲಿ ಉತ್ಸವಗಳು ನಡೆದವು. ಪಟ್ಟಣದ ಕಾಳಿಕಾಂಬ ದೇವಿಗೆ ವಿಶೇಷ ಪೂಜೆ ನಡೆಸಲಾಯಿತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !