ಸಿಬ್ಬಂದಿ ನಿರ್ಲಕ್ಷ್ಯ; ಮಗು ಗಂಭೀರ

7

ಸಿಬ್ಬಂದಿ ನಿರ್ಲಕ್ಷ್ಯ; ಮಗು ಗಂಭೀರ

Published:
Updated:

ವಿಜಯಪುರ: ನಗರದ ದರ್ಗಾ ಜೈಲಿನ ಬಳಿಯಿರುವ ಆರೋಗ್ಯ ಕೇಂದ್ರದಲ್ಲಿನ ಶುಶ್ರೂಷಕಿಯರ ನಿರ್ಲಕ್ಷ್ಯದಿಂದ ಒಂದೂವರೆ ವರ್ಷದ ಮಗು ಗಂಭೀರ ಅನಾರೋಗ್ಯಕ್ಕೀಡಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಬುಧವಾರ ಮಧ್ಯಾಹ್ನ ರೇಣುಕಾ ಎಂಬುವರು ತನ್ನ ಮಗುವನ್ನು ಚಿಕಿತ್ಸೆಗಾಗಿ ಕರೆ ತಂದಿದ್ದರು. ಈ ಸಂದರ್ಭ ಶೀತ–ಕೆಮ್ಮಿಗೆ ನೀಡುವ ಮಾತ್ರೆ ಬದಲು ಬೇರೆ ಮಾತ್ರೆಗಳನ್ನು ಕರ್ತವ್ಯದಲ್ಲಿದ್ದ ಶುಶ್ರೂಷಕಿಯರು ನೀಡಿದ್ದಾರೆ. ಇದರಿಂದ ಮಗು ಗಂಭೀರ ಅನಾರೋಗ್ಯಕ್ಕೀಡಾಗಿದೆ.

ತಕ್ಷಣವೇ ಆರೋಗ್ಯ ಕೇಂದ್ರದ ಬಳಿ ಬಂದರೂ ಬೀಗ ಹಾಕಿತ್ತು. ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಸಿಬ್ಬಂದಿ ನಿರ್ಲಕ್ಷವೇ ಈ ಘಟನೆಗೆ ಕಾರಣ. ಆರೋಗ್ಯ ಕೇಂದ್ರದಲ್ಲಿ ಸಲೈನ್ ಹಾಕಲು ಲಂಚ ಪಡೆಯುತ್ತಾರೆ ಎಂದು ಸ್ಥಳೀಯರು ಗುರುವಾರ ಅಸಮಾಧಾನ ವ್ಯಕ್ತಪಡಿಸಿದರು.

ಆರ್‌ಸಿಎಚ್‌ ಅಧಿಕಾರಿ ಸುರೇಶ ಚವ್ಹಾಣ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ ಬಳಿಕ ಅಸಮಾಧಾನಿತರು ಅಲ್ಲಿಂದ ತೆರಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !