ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

26ರಿಂದ ರಾಜ್ಯಮಟ್ಟದ ಟೆನಿಸ್ ಲೀಗ್ ಪಂದ್ಯಗಳು

Last Updated 10 ಅಕ್ಟೋಬರ್ 2018, 11:04 IST
ಅಕ್ಷರ ಗಾತ್ರ

ಶಿವಮೊಗ್ಗ: ಗೋಪಾಲಗೌಡ ಬಡಾವಣೆಯ ಕ್ರೀಡಾ ಸಂಕೀರ್ಣದಲ್ಲಿ ಅ. 26ರಿಂದ 28ರವರೆಗೆ ರಾಜ್ಯಮಟ್ಟದ ಟೆನಿಸ್ ಲೀಗ್ಹಾಗೂ ಆಹ್ವಾನಿತ ಕಪ್ ಪಂದ್ಯಗಳನ್ನು ಆಯೋಜಿಸಲಾಗಿದೆ.

ವಿ ಫೋಸರ್ ಮೀಡಿಯಾ, ಶಿವಪ್ಪನಾಯಕ ಸ್ಪೋರ್ಟ್ಸ್‌ ಅಕಾಡೆಮಿ ಸಹಯೋಗದಲ್ಲಿ ನಡೆಯುವ ಈ ಪಂದ್ಯಗಳಲ್ಲಿ ರಾಜ್ಯದ 24 ಜಿಲ್ಲೆಗಳಿಂದ ಸುಮಾರು 120 ಕ್ಕೂ ಹೆಚ್ಚು ಆಟಗಾರರು ಭಾಗವಹಿಸಲಿದ್ದಾರೆ ಎಂದು ವಿ ಫೋಸರ್ ಮೀಡಿಯಾ ಸಿಇಒ ವಾಣಿ ಶರವಣ ಗೌಡ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನಾಕೌಟ್ ಮಾದರಿಯಲ್ಲಿ ಓಪನ್ ಸಿಂಗಲ್ ಹಾಗೂ ಓಪನ್ ಡಬಲ್ಸ್ ಇರುತ್ತದೆ. 35 ವರ್ಷ ಮೇಲ್ಪಟ್ಟವರಿಗೆ ಸಿಂಗಲ್ ಹಾಗೂ ಡಬಲ್ಸ್ ಮತ್ತು 45 ವರ್ಷ ಮೇಲ್ಪಟ್ಟವರಿಗೆ ಡಬಲ್ಸ್ ಪಂದ್ಯಗಳು ನಡೆಯಲಿವೆ. ಸಿಂಗಲ್ಸ್‌ಗೆ ₨ 600 ಹಾಗೂ ಡಬಲ್ಸ್‌ಗೆ ₨ 1ಸಾವಿರ ಪ್ರವೇಶ ಶುಲ್ಕವಿದೆ. ಉಪಾಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗುವುದು. ಪ್ರಥಮ ಬಹುಮಾನ ₨ 10 ಸಾವಿರ, ದ್ವಿತೀಯ ₨ 8 ಸಾವಿರದ ಜತೆಗೆ ಆಕರ್ಷಕ ಟ್ರೋಫಿ ನೀಡಲಾಗುವುದು ಎಂದರು.

3 ಅಂಕಣಗಳಲ್ಲಿ ಪಂದ್ಯ ನಡೆಯಲಿವೆ. ಬೆಂಗಳೂರಿನಿಂದ ತೀರ್ಪುಗಾರರು ಬರುತ್ತಾರೆ. ಹೆಸರು ನೋಂದಾಯಿಸಲು ಅ. 24 ಕೊನೆಯ ದಿನ. ಅ. 26ರ ಬೆಳಿಗ್ಗೆ 7ಕ್ಕೆ ಪಂದ್ಯಗಳು ಆರಂಭವಾಗಲಿವೆ.ಹೆಚ್ಚಿನ ಮಾಹಿತಿಗಾಗಿ ಮೊಬೈಲ್‌: 99002 55534, 94828 60455 ಸಂಪರ್ಕಿಸಬಹುದು ಎಂದು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ರವಿರಾಜ್ ನಾಯಕ್, ಮೋಹನ್ ಐಯರ್, ದೀಪಕ್, ಪರಮೇಶ್ವರ್, ಮುರಳೀಧರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT