ರೈತರಿಗೆ ನೋಟಿಸ್‌ ನೀಡಿದರೆ ಮೊಕದ್ದಮೆ: ಬ್ಯಾಂಕ್‌ಗಳಿಗೆ ಸಿಎಂ ಎಚ್ಚರಿಕೆ

ಶನಿವಾರ, ಏಪ್ರಿಲ್ 20, 2019
31 °C

ರೈತರಿಗೆ ನೋಟಿಸ್‌ ನೀಡಿದರೆ ಮೊಕದ್ದಮೆ: ಬ್ಯಾಂಕ್‌ಗಳಿಗೆ ಸಿಎಂ ಎಚ್ಚರಿಕೆ

Published:
Updated:

ಹೊಳೆಹೊನ್ನೂರು: ರೈತರಿಗೆ ರಾಷ್ಟ್ರೀಯ ಬ್ಯಾಂಕ್‍ಗಳು ನೋಟಿಸ್‍ ನೀಡಿದರೆ ರಾಜ್ಯ ಸರ್ಕಾರದಿಂದ ಆ ಬ್ಯಾಂಕ್‍ಗಳ ವಿರುದ್ಧ ಮೊಕದ್ದಮೆ ದಾಖಲಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಎಚ್ಚರಿಸಿದರು.

ಸಮೀಪದ ಮಲ್ಲಾಪುರ ಗ್ರಾಮದಲ್ಲಿ ಬುಧವಾರ ನಡೆದ ಕಾಂಗ್ರೆಸ್‍, ಜೆಡಿಎಸ್‍ನ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಈಗಾಗಲೇ ರಾಜ್ಯ ಸರ್ಕಾರದಿಂದ ರೈತರ ಸಾಲ ಮನ್ನಾ ಘೋಷಣೆ ಮಾಡಲಾಗಿದೆ. ಇದರ ಹೊರತಾಗಿಯೂ ರಾಷ್ಟ್ರೀಕೃತ ಬ್ಯಾಂಕ್‍ಗಳು ರೈತರಿಗೆ ನೋಟಿಸ್‍ ನೀಡುತ್ತಿರುವುದು ವಿಪರ್ಯಾಸ. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ  ಬ್ಯಾಂಕ್‍ಗಳ ವಿರುದ್ಧ ಸರ್ಕಾರದಿಂದ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !