ಖಿನ್ನತೆ ಆತ್ಮಹತ್ಯೆಗೆ ಮುಖ್ಯ ಕಾರಣ: ಎಸ್.ಪದ್ಮರೇಖಾ

7
ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗದಿಂದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ

ಖಿನ್ನತೆ ಆತ್ಮಹತ್ಯೆಗೆ ಮುಖ್ಯ ಕಾರಣ: ಎಸ್.ಪದ್ಮರೇಖಾ

Published:
Updated:
Deccan Herald

ಬಿಡದಿ (ರಾಮನಗರ): ‘ಮಾನವ ಜನ್ಮ ಅತಿ ಶ್ರೇಷ್ಠವಾದದ್ದು, ಅರಿವು ಇಲ್ಲದೇ ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ’ ಎಂದು ಮನೋಸಾಮಾಜಿಕ ಕಾರ್ಯಕರ್ತೆ ಎಸ್. ಪದ್ಮರೇಖಾ ವಿಷಾದ ವ್ಯಕ್ತಪಡಿಸಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗದ ವತಿಯಿಂದ ಶನಿವಾರ ನಡೆದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯಲ್ಲಿ ಅವರು ಉಪನ್ಯಾಸ ನೀಡಿದರು.

ಮಾನಸಿಕ ಒತ್ತಡ, ಖಿನ್ನತೆ ಇನ್ನಿತರ ಸಮಸ್ಯೆಗಳಿಂದ ಜನರು ಆತ್ಮಹತ್ಯೆ ಶರಣಾಗುತ್ತಿದ್ದಾರೆ. ಇದರಿಂದ ಜೀವನದಲ್ಲಿ ಯಾವುದೇ ಸಾಧನೆ ಮಾಡಿದಂತಾಗುವುದಿಲ್ಲ. ಜೀವನವನ್ನು ಎದುರಿಸುವ ಧೈರ್ಯ ಬೆಳೆಸಿಕೊಳ್ಳಬೇಕು ಎಂದರು.

ಪ್ರತಿ ವರ್ಷ 10 ಲಕ್ಷ ಜನರು ಜಗತ್ತಿನಲ್ಲಿ ಆತ್ಮಹತ್ಯೆಯಿಂದ ಸಾಯುತ್ತಿದ್ದಾರೆ. ಮಾನವನಿಗೆ ತಿಳಿವಳಿಕೆ ಮುಖ್ಯ. ಇದನ್ನು ನಾವು ಅರಿತು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ಆತ್ಮಹತ್ಯೆ ತಡೆಯಲು ಅನೇಕ ರೀತಿಯ ತಿಳಿವಳಿಕೆ ನೀಡಲು ಸರ್ಕಾರ ಯೋಜನೆ ರೂಪಿಸಿದೆ. ಇದನ್ನು ತಡೆಗಟ್ಟಲು ಎಲ್ಲರೂ ಶ್ರಮಿಸಬೇಕು ಎಂದರು.

ಆತ್ಮಹತ್ಯೆಗೆ ಮುಖ್ಯವಾಗಿ ಖಿನ್ನತೆ ಮುಖ್ಯ ಕಾರಣವಾಗಿದ್ದು, ಆತ್ಮಸ್ಥೈರ್ಯದಿಂದ ಆತ್ಮಹತ್ಯೆ ತಡೆಗಟ್ಟಬಹುದಾಗಿದೆ. ಪ್ರತಿ ಜಿಲ್ಲಾ ಕೇಂದ್ರದಲ್ಲಿ ಮಾನಸಿಕ ಆರೋಗ್ಯ ವಿಭಾಗದಲ್ಲಿ ಆತ್ಮಸ್ಥೈರ್ಯವನ್ನು ಕಳೆದುಕೊಂಡವರು ಸಮಾಲೋಚನೆ ಮತ್ತು ಸೂಕ್ತ ಚಿಕಿತ್ಸೆಯಿಂದ ಆತ್ಮಹತ್ಯೆಯನ್ನು ತಡೆಗಟ್ಟಬಹುದು ಎಂದರು.

ನಿಮ್ಹಾನ್ಸ್ ಮನೋರೋಗ ತಜ್ಞ ಡಾ. ನವೀನ್ ಮಾತನಾಡಿ, ಖಿನ್ನತೆ ಎಂಬ ರೋಗ ವಾಸಿಯಾಗುವ ಖಾಯಿಲೆ. ಚಿಕಿತ್ಸೆಯಿಂದಾಗಲಿ ಅಥವಾ ಮಾನಸಿಕವಾಗಿ ಧೈರ್ಯ ತುಂಬಿದಲ್ಲಿ ಈ ಖಾಯಿಲೆ ವಾಸಿಯಾಗುತ್ತದೆ. ಈ ಅರಿವು ಇಲ್ಲದ ಕಾರಣ ಆತ್ಮಹತ್ಯೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.

ಖಿನ್ನತೆಯು ಜೀವಿತಾವಧಿಯಲ್ಲಿ ಏಳರಲ್ಲಿ ಒಬ್ಬರಿಗೆ ಬರಬಹುದು, ಇದೊಂದು ದೀರ್ಘಕಾಲಿಕ ಹಾಗೂ ಮರುಕಳಿಸುವ ಕಾಯಿಲೆಯಾಗಿದೆ. ಖಿನ್ನತೆಯಿಂದ ಜರ್ಜರಿತನಾದ ವ್ಯಕ್ತಿ ಅದರಿಂದ ಹೊರಗೆ ಬಾರದೆ ಸಾವು ಒಂದೇ ಪರಿಹಾರ ಎಂದು ಆತ್ಮಹತ್ಯೆಗೆ ಶರಣಾಗುತ್ತಾನೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರಲ್ಲಿ ಆತ್ಮಹತ್ಯೆ ತಡೆಗಟ್ಟುವ ಬಗ್ಗೆ ಅರಿವು ಮೂಡಿಸುವುದು ಅತೀ ಅವಶ್ಯಕವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಸಂಪತ್‌ಕುಮಾರ್‌ (ಪ್ರಥಮ), ಎಸ್.ಡಿ. ಕುಸುಮಾ (ದ್ವಿತೀಯ), ನಿರಂಜನ (ತೃತೀಯ) ಅವರಿಗೆ ಬಹುಮಾನವನ್ನು ವಿತರಿಸಲಾಯಿತು.

ಕಾಲೇಜಿನ ಪ್ರಾಚಾರ್ಯ ಜಿ.ಆರ್. ಏಕಾಂತಪ್ಪ ಇದ್ದರು.

* ಪ್ರತಿ ತಿಂಗಳ ನಾಲ್ಕನೇ ಶುಕ್ರವಾರ ಬಿಡದಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮನೋರೋಗ ತಜ್ಞರು ಲಭ್ಯರಿರುತ್ತಾರೆ
–ಎಸ್. ಪದ್ಮರೇಖಾ, ಮನೋ ಸಾಮಾಜಿಕ ಕಾರ್ಯಕರ್ತೆ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !