ಪೆರಂಬಾರ ತಾಲ್ಲೂಕು ಆಸ್ಪತ್ರೆಯಲ್ಲಿ ದಾದಿಯಾಗಿ ಲಿನಿ ಕೆಲಸ ಮಾಡುತ್ತಿದ್ದರು. ನಿಫಾ ಸೋಂಕಿತರಾಗಿದ್ದ ಮೂರು ರೋಗಿಗಳನ್ನು ಇಲ್ಲಿಗೆ ದಾಖಲಿಸಲಾಗಿತ್ತು. ಅವರನ್ನು ಲಿನಿ ನೋಡಿಕೊಂಡಿದ್ದರು. ಸೋಂಕು ತಗಲಿದ ಬಳಿಕ ಆರಂಭದ ದಿನಗಳಲ್ಲಿ ಇದೇ ಆಸ್ಪತ್ರೆಯಲ್ಲಿ ಲಿನಿಗೆ ಚಿಕಿತ್ಸೆ ನೀಡಲಾಗಿತ್ತು. ತಮಗೆ ತಗುಲಿದ ಸೋಂಕು ಎಷ್ಟು ಗಂಭೀರ ಎಂಬುದು ಅವರಿಗೆ ಅರಿವಾಗಿತ್ತು. ಹಾಗಾಗಿ, ಬಹರೇನ್‌ನಲ್ಲಿದ್ದ ತಮ್ಮ ಪತಿ ಸಜೀಶ್‌ಗೆ ಅತ್ಯಂತ ಭಾವನಾತ್ಮಕ ಪತ್ರವನ್ನು ಅವರು ಬರೆದಿದ್ದರು.
‘ನನ್ನ ದಿನಗಳು ಮುಗಿದವು ಅನಿಸುತ್ತದೆ. ನಿಮ್ಮನ್ನು ಭೇಟಿಯಾಗಲು ನಾನು ಉಳಿಯುವ ಸಾಧ್ಯತೆ ಇಲ್ಲ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದು ಅವರು ಬರೆದಿದ್ದರು.