ಸೋಮವಾರ, ಜನವರಿ 20, 2020
18 °C

ಟ್ಯಾಂಕರ್ ಸ್ಫೋಟ; ಇಬ್ಬರು ಕಾರ್ಮಿಕರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಇಲ್ಲಿನ ರೈಲು ನಿಲ್ದಾಣದ ಬಳಿಯ ಗ್ಯಾರೇಜ್‌ವೊಂದರಲ್ಲಿ ಶನಿವಾರ ವೆಲ್ಡಿಂಗ್ ಮಾಡುತ್ತಿದ್ದ ವೇಳೆ ಟ್ಯಾಂಕರ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಉತ್ತರ ಪ್ರದೇಶದ ವೀರೇಂದ್ರಕುಮಾರ್ ಪ್ರಜಾಪತಿ (28), ನಗರ ನಿವಾಸಿ ರಾಜು ಗಿಡ್ಡೆ (30) ಮೃತಪಟ್ಟವರು. ವಿಶ್ವನಾಥ ಬಡಿಗೇರ, ಪ್ರಕಾಶ ಶಿರಕೋಳ ಹಾಗೂ ಬಸವರಾಜ ಡೋಣೂರ ಅವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಇಥೆನಾಲ್ ಸಾಗಿಸುವ ಟ್ಯಾಂಕರ್ ಇದಾಗಿದ್ದು, ಇಥೆನಾಲ್ ಖಾಲಿ ಮಾಡಿದ ಬಳಿಕ ದುರಸ್ತಿಗಾಗಿ ತರಲಾಗಿತ್ತು. ವೆಲ್ಡಿಂಗ್ ಮಾಡುತ್ತಿದ್ದಾಗ ಏಕಾಏಕಿ ಟ್ಯಾಂಕರ್ ಸ್ಫೋಟಗೊಂಡಿದೆ’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ, ‘ಘಟನೆಯ ಬಗ್ಗೆ ಈಗಲೇ ಏನೂ ಹೇಳಲಾಗದು. ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಸಿಗಲಿದೆ’ ಎಂದರು.

ಪ್ರತಿಕ್ರಿಯಿಸಿ (+)