ತರಂಗ ಶಾಲೆ ವಾರ್ಷಿಕೋತ್ಸವ

7

ತರಂಗ ಶಾಲೆ ವಾರ್ಷಿಕೋತ್ಸವ

Published:
Updated:

ಶಿವಮೊಗ್ಗ: ಬಸವೇಶ್ವರ ನಗರದ ತರಂಗ ಕಿವುಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ 32ನೇ ವಾರ್ಷಿಕೋತ್ಸವ ಸಮಾರಂಭ ಜ.12ರಂದು ಸಂಜೆ 5.30ಕ್ಕೆ ಶಾಲಾ ಆವರಣದಲ್ಲಿ ನಡೆಯಲಿದೆ.

ಶಿವಭದ್ರ ಟ್ರಸ್ಟ್ ವತಿಯಿಂದ ನಡೆಸುತ್ತಿರುವ ಇಲ್ಲಿನ ಎಂದು ಟ್ರಸ್ಟ್ ಅಧ್ಯಕ್ಷ ಡಾ.ಸುರೇಶ್ ಇಸ್ಲೂರ್ ತಿಳಿಸಿದರು.

ಶಿವಭದ್ರ ಟ್ರಸ್ಟ್ 32 ವರ್ಷಗಳಿಂದ ಕಿವುಡು ಮಕ್ಕಳಿಗಾಗಿ ಶಾಲೆ ನಡೆಸುತ್ತಾ ಬಂದಿದೆ. ಸುಮಾರು 60ಕ್ಕೂ ಹೆಚ್ಚು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಜಿಲ್ಲಾ ಪಂಚಾಯಿತಿ ಸಿಇಒ ಕೆ. ಶಿವರಾಮೇಗೌಡ, ಸಿಟಿ ಆಸ್ಪತ್ರೆಯ ಡಾ.ಮಲ್ಲೇಶ್ ಹುಲ್ಲುಮನಿ, ವಿಕಲಚೇತನ ಕಲ್ಯಾಣಾಧಿಕಾರಿ ಶಿಲ್ಪ ಎಂ. ದೊಡ್ಡಮನಿ, ಪೊದಾರ್ ಶಾಲೆಯ ಪ್ರಾಂಶುಪಾಲ ಬಿ.ಎಸ್. ಸುಖೇಶ್ ಭಾಗವಹಿಸುವರು ಎಂದು ವಿವರ ನೀಡಿದರು.

1984ರಲ್ಲಿ ಟ್ರಸ್ಟ್ ರಚನೆಯಾಯಿತು. ಇದುವರೆಗೂ ಈ ಶಾಲೆಯಲ್ಲಿ ನೂರಾರು ಮಕ್ಕಳು ಕಲಿತು ಉನ್ನತ ಉದ್ಯೋಗದಲ್ಲಿದ್ದಾರೆ. ಈಗ ವಸತಿ ಸಹಿತ ಶಾಲೆ ಆರಂಭವಾಗಿದೆ. ಮಗುವಿನ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಅಕ್ಷರ ಜ್ಞಾನದ ಜತೆಗೆ ಇತರೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡುವುದು. ಭಾಷೆ, ಮಾತಿನ ಬೆಳವಣಿಗೆಗೆ ಒತ್ತು ನೀಡುವುದು. ವಾಕ್ ತರಬೇತಿ ಮತ್ತು ಓದುವ ಕೌಶಲ್ಯ ಬೆಳೆಸುವುದು, ಶ್ರವಣ ದೋಷ ಗುರುತಿಸುವ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳಿಗೆ ಉಚಿತ ಊಟ, ಉಪಹಾರ, ವಸತಿ,ಸಮವಸ್ತ್ರ, ಶ್ರವಣ ಸಾಮಾಗ್ರಿ ನೀಡಲಾಗುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್‌ ಉಪಾಧ್ಯಕ್ಷ ಬಾಸ್ಕರ್ ಜಿ. ಕಾಮತ್, ಸಹ ಕಾರ್ಯದರ್ಶಿ ಎನ್. ಮಂಜುಳಾದೇವಿ, ಸದಸ್ಯರಾದ ಮದನ್ ಲಾಲ್, ರಮೇಶ್ ಶೆಣೈ, ಚಕ್ರಪಾಣಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !