ಸೋಮವಾರ, ಸೆಪ್ಟೆಂಬರ್ 16, 2019
27 °C

‘ರಾಧಾಕೃಷ್ಣನ್ ಸರ್ವ ಶ್ರೇಷ್ಠ ಶಿಕ್ಷಕ’

Published:
Updated:
Prajavani

ವಿಜಯಪುರ: ‘ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಜಗತ್ತಿನ ಶ್ರೇಷ್ಠ ಶಿಕ್ಷಕರಾಗಿದ್ದರು’ ಎಂದು ಶರಣಬಸವದೇವರು ಹೇಳಿದರು.

ನಗರದ ಕಿತ್ತೂರ ರಾಣಿ ಚನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಕಾರ್ಯಾಲಯ ವತಿಯಿಂದ ಗುರುವಾರ ಏರ್ಪಡಿಸಿದ ಶಿಕ್ಷಕ ದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಾಸಕ ಎಂ.ಬಿ.ಪಾಟೀಲ ಮಾತನಾಡಿ, ‘ಬದಲಾದ ಕಾಲದಲ್ಲಿ ಜಗತ್ತು ತಂತ್ರಜ್ಞಾನದಿಂದ ಬಹಳಷ್ಟು ಮುಂದುವರೆದಿದೆ. ಆದ್ದರಿಂದ ಪಾಲಕರು, ಪೋಷಕರು ಸಹಜವಾಗಿ ಮಕ್ಕಳ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಅಪೇಕ್ಷೆ ಪಡುತ್ತಾರೆ. ಮಕ್ಕಳ ಉತ್ತಮ ಭವಿಷ್ಯ ನಿರ್ಮಾಣಕ್ಕಾಗಿ ಶಿಕ್ಷಕರು ಪರಿಶ್ರಮ ಪಡಬೇಕು’ ಎಂದು ಸಲಹೆ ನೀಡಿದರು.

‘ಎಂ.ಬಿ.ಪಾಟೀಲ ಫೌಂಡೇಷನ್‌ ವತಿಯಿಂದ ಸರ್ಕಾರಿ ಶಾಲೆಗಳಿಗೆ ಡಿಜಿಟಲ್ ವರ್ಗ ಕೋಣೆ, ಮಾತನಾಡುವ ಮರಗಳು ಹಾಗೂ ವಿದ್ಯಾರ್ಥಿಗಳಿಗೆ ಬೋಧನೋಪಕರಣಗಳನ್ನು ನೀಡಿದ್ದೇವೆ. ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಶಾಸಕ ದೇವಾನಂದ ಚವಾಣ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತಿ ಹೊಂದಿದ, ಸೇವೆಯಲ್ಲಿ ಮೃತರಾದ ಕುಟುಂಬಗಳಿಗೆ ಹಾಗೂ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ಶಡಶ್ಯಾಳ, ಪ್ರಧಾನ ಕಾರ್ಯದರ್ಶಿ ಅರ್ಜುನ ಲಮಾಣಿ, ಗ್ರಾಮೀಣ ವಲಯದ ಅಧ್ಯಕ್ಷ ಆರ್.ಎನ್.ಅಂಗಡಿ, ಕಾರ್ಯದರ್ಶಿ ಸಿ.ಕೆ.ಭಜಂತ್ರಿ, ಕಲ್ಲಪ್ಪ ಕೊಡಬಾಗಿ, ಕಾಳಪ್ಪ ಬೆಳ್ಳುಂಡಗಿ, ಉಮೇಶ ಕೋಳಕೂರ, ದಾನಮ್ಮ ಅಂಗಡಿ, ಸುಜಾತಾ ಕಳ್ಳಿಮನಿ, ಪ್ರತಿಭಾ ಪಾಟೀಲ, ರಾಜಶ್ರೀ ಚವ್ಹಾಣ, ಸಂಗಮೇಶ ಬಬಲೇಶ್ವರ, ವಿ.ಎಸ್.ಕಳಸಗೊಂಡ, ಹಣಮಂತ ಕೊಣದಿ, ಎಸ್.ಎಸ್.ವಾಲಿ, ಆರ್.ಎಸ್.ಚಿಕ್ಕಮಠ, ಎಸ್.ಎಂ ಹುಲ್ಲೋಳ್ಳಿ ಇದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎನ್.ಹುರಳಿ ಸ್ವಾಗತಿಸಿದರು. ಬಸವರಾಜ ಹೊಸಮನಿ ನಿರೂಪಿಸಿ, ಅರ್ಜುನ ಲಮಾಣಿ ವಂದಿಸಿದರು.

Post Comments (+)