ಶಿಕ್ಷಕರ ಆಳವಾದ ಅಧ್ಯಯನಕ್ಕೆ ಕ್ರೀಡಾ ಚಟುವಟಿಕೆ ಸಹಾಯಕ

7

ಶಿಕ್ಷಕರ ಆಳವಾದ ಅಧ್ಯಯನಕ್ಕೆ ಕ್ರೀಡಾ ಚಟುವಟಿಕೆ ಸಹಾಯಕ

Published:
Updated:
Deccan Herald

ಮಾಗಡಿ: ಶಿಕ್ಷಕರು ಆಳವಾದ ಅಧ್ಯಯನ ಮಾಡಲು ಕ್ರೀಡಾ ಚಟುವಟಿಕೆಗಳು ಸಹಾಯಕವಾಗಲಿವೆ ಎಂದು ಶಾಸಕ ಎ.ಮಂಜುನಾಥ ತಿಳಿಸಿದರು.

ಶಿಕ್ಷಕರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಶಿಕ್ಷಕರು ದೇಶದ ಭವಿಷ್ಯದ ಪ್ರಜೆಗಳನ್ನು ತಯಾರು ಮಾಡಲು ಶಿಲ್ಪಿಗಳಿದ್ದಂತೆ. ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ಕಾಪಾಡಿಕೊಂಡಾಗ ಮಾತ್ರ ಶಿಕ್ಷಕರ ಬದುಕು ಹಸನಾಗಲು ಸಾಧ್ಯವಿದೆ. ಕ್ರೀಡಾಕೂಟ ನಿಮ್ಮಲ್ಲಿ ಸಮರಸದ ಬದುಕು ಮೂಡಿಸಲಿ’ ಎಂದರು.

ಬಿಇಒ ಸಿದ್ದೇಶ್ವರ.ಎಸ್‌.ಮಾತನಾಡಿ, ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿದೆ. ಕ್ರೀಡಾಕೂಟದಲ್ಲಿ ಎಲ್ಲರೂ ಭಾಗವಹಿಸಿ, ಸೋಲು, ಗೆಲುವು ಶಾಶ್ವತವಲ್ಲ. ಎಲ್ಲರೂ ಗೆಲ್ಲಲೇ ಬೇಕೆಂಬ ಛಲದಿಂದ ಆಟಗಳಲ್ಲಿ ಭಾಗವಹಿಸಿ ಎಂದರು.

ತಹಶೀಲ್ದಾರ್‌ ಎನ್‌.ಶಿವಕುಮಾರ್‌, ತಾಲ್ಲೂಕು ಪಂಚಾಯಿತಿ ನಿರ್ವಹಣಾಧಿಕಾರಿ ಚಂದ್ರು ಹಾಗೂ ಶಿಕ್ಷಕರ ಸಂಘದ ಪದಾಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !