ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಪಮಾನದ ಮೇಲೆ ಕಾಂಕ್ರಿಟ್‌ ದುಷ್ಪರಿಣಾಮ

ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಸದಸ್ಯರ ಕಳವಳ
Last Updated 22 ಫೆಬ್ರುವರಿ 2020, 13:07 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರ ಪಾಲಿಕೆ ವ್ಯಾಪ್ತಿಯ ಎಲ್ಲೆಡೆ ಸಿಮೆಂಟ್ ಕಾಮಗಾರಿಗಳು ನಡೆಯುತ್ತಿರುವ ಪರಿಣಾಮ ತಾಪಮಾನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಅಧ್ಯಕ್ಷಕೆ.ವಿ. ವಸಂತ್‌ಕುಮಾರ್ ಕಳವಳ ವ್ಯಕ್ತಪಡಿಸಿದರು.

ರಸ್ತೆಗಳು, ಚರಂಡಿ,ಕನ್ಸರ್‌ವೆನ್ಸಿಸಂಪೂರ್ಣ ಕಾಂಕ್ರಿಟ್ ಮಯವಾಗಿದೆ. ಇದು ತಾಪಮಾನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ವೈಜ್ಞಾನಿಕ ವಿಶ್ಲೇಷಣೆ ಪ್ರಕಾರ ಸೂರ್ಯನಿಂದ ಬಿಡುಗಡೆ ಆಗುವ ಶಾಖದಲ್ಲಿ ಶೇ 90ರಷ್ಟನ್ನು ಭೂಮಿಹೀರಿಕೊಂಡು ನಂತರ ಪರಿಸರಕ್ಕೆಬಿಡುಗಡೆಯಾಗುತ್ತದೆ. ಸಿಮೆಂಟ್ ರಸ್ತೆಗಳು ತುಂಬ ದಪ್ಪಇರುವ ಕಾರಣ ಹೆಚ್ಚಿನ ಶಾಖ ಹಿಡಿದಿಟ್ಟುಕೊಳ್ಳುತ್ತದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ತಾಪಮಾನ ಹೆಚ್ಚಳದದುಷ್ಪರಿಣಾಮಗಳಿಗೆ ಪರಿಹಾರ ನೀಡುವ ಯಾವುದೇ ಪ್ರಯತ್ನ ‘ಸ್ಮಾರ್ಟ್‌ಸಿಟಿ’ ನಡೆಸಿಲ್ಲ.ಪಾಲಿಕೆಯ ಖಾಲಿ ಜಾಗಗಳಲ್ಲಿಮರಗಳನ್ನು ಬೆಳೆಸುವುದು. ತುಂಗಾನದಿಯ ತಟದಲ್ಲಿ 100 ಅಡಿಯವರೆಗೆ ದಟ್ಟ ಕಾಡು ಬೆಳೆಸಬೇಕು. ಹಳೇ ಕಾರಾಗೃಹದ ದೊಡ್ಡ ಭಾಗದಲ್ಲಿ, ರೈಲು ಮಾರ್ಗ ಮತ್ತು ತುಂಗಾ ನಾಲೆಪ್ರದೆಶದ ಖಾಲಿ ಜಾಗ, ಎಪಿಎಂಸಿ ಎದುರಿಗೆ ಇರುವ ನಗರಸಭೆಯ ಜಾಗ ಸೇರಿದಂತೆ ಹಲವೆಡೆ ಮರಗಳನ್ನು ನೆಡಬೇಕು. ಗುಂಡಪ್ಪಶೆಡ್‌ನಲ್ಲಿಹಿಂದೆ ಯುಜಿಡಿ ಶುದ್ದೀಕರಣ ಘಟಕಕ್ಕೆ ಮೀಸಲಿಟ್ಟ ಜಾಗದಲ್ಲಿ ಕಾಡುಅಭಿವೃದ್ಧಿಪಡಿಸಬೇಕು. ಬಿ.ಎಚ್. ರಸ್ತೆಯ ಮಧ್ಯದಲ್ಲಿ ಗಿಡಗಳನ್ನು ಬೆಳೆಸಬೇಕು ಎಂದುಆಗ್ರಹಿಸಿದರು.

ಸರ್ಕಾರದಕಟ್ಟಡಗಳಿಗೆ, ಮಾಲ್‌ಗಳಲ್ಲಿ,ವಾಣಿಜ್ಯ ಕಟ್ಟಡ, ಮನೆಗಳಿಗೆ ವೈಟ್‌ಟ್ಯಾಪಿಂಗ್ಮಾಡುವಂತೆ ಸೂಚಿಸಬೇಕು. ಪಾರ್ಕಿಂಗ್ ಜಾಗಗಳಿಗೆ ಪರಿಸರ ಸ್ನೇಹಿ ಶೀಟ್‌ಗಳ ಮೂಲಕ ಮೇಲ್ಚಾವಣಿ ನಿರ್ಮಿಸಬೇಕು. ರಸ್ತೆಗಳ ಎತ್ತರ ಹೆಚ್ಚಾಗದಂತೆ ಕ್ರಮ ಕೈಗೊಳ್ಳಬೇಕು ಎಂದುಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಮುಖಂಡರಾದಎಸ್.ಬಿ.ಅಶೋಕ್ ಕುಮಾರ್, ನಿರ್ದೇಶಕರಾದ ಸೀತಾರಾಮ್, ಸುಬ್ರಹ್ಮಣ್ಯ, ರಘುಪತಿಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT