ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಡಿಕೇಟ್ ಬ್ಯಾಂಕ್: ₹13 ಸಾವಿರ ಕಳವು

Last Updated 18 ನವೆಂಬರ್ 2019, 15:50 IST
ಅಕ್ಷರ ಗಾತ್ರ

ನಾಲತವಾಡ: ದುಷ್ಕರ್ಮಿಗಳ ಗುಂಪೊಂದು ಭಾನುವಾರ ತಡರಾತ್ರಿ ಇಲ್ಲಿಯ ಸಿಂಡಿಕೇಟ್‌ ಬ್ಯಾಂಕ್‌ನ ಗೋಡೆಯನ್ನು ಕೊರೆದು ₹13,460 ನಗದು ಕಳವು ಮಾಡಿದೆ.

‘ಬ್ಯಾಂಕಿನ ಎಡ ಭಾಗದ ಗೋಡೆಯನ್ನು ತಳ ಸಮೇತ ಕೊರೆದು ಒಳ ನುಗ್ಗಿದ ಕಳ್ಳರು, ಮೊದಲು ಸೇಫ್ ಲಾಕರ್ ಕೊಠಡಿ ಪ್ರವೇಶಿಸಿದ್ದಾರೆ. ಆದರೆ, ಸೈರನ್‌ ಭೀತಿಯಿಂದ ಹಿಂದೆ ಸರಿದು, ಗೋಡೆಗೆ ಕೊರೆದಿದ್ದ ಕಿಂಡಿಯಿಂದ ಪ್ರಮುಖ ದಾಖಲೆಗಳನ್ನು ಹೊರಕ್ಕೆ ಎಸೆದಿದ್ದಾರೆ’ ಎಂದು ತಿಳಿದು ಬಂದಿದೆ.

ವಿಷಯ ತಿಳಿದ ಬ್ಯಾಂಕ್ ವ್ಯವಸ್ಥಾಪಕ ಶಿವಶಂಕರ ತಾಳಿಕೋಟ ಹಾಗೂ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು.

ಸಿಪಿಐ ಭೇಟಿ: ಸ್ಥಳಕ್ಕೆ ಭೇಟಿ ನೀಡಿದ ಮುದ್ದೇಬಿಹಾಳ ಪೊಲೀಸ್ ಇನ್‌ಸ್ಪೆಕ್ಟರ್ ಆನಂದ ವಾಘ್ಮೋರೆ, ಕಳ್ಳರು ಕೊರೆದ ಕಿಂಡಿ ಹಾಗೂ ಲಾಕರ್‌ ಕೊಠಡಿಯಲ್ಲಿದ್ದ ಹಣವನ್ನು ಪರಿಶೀಲಿಸಿದರು.

ಭಾರಿ ಪ್ರಮಾಣದ ಹಣ ಕಳುವಾಗಿಲ್ಲ. ಆದರೆ, ₹13,460 ನಗದು ದೋಚಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಎಎಸ್‌ಐ ಎಸ್.ಬಿ.ನ್ಯಾಮಣ್ಣನವರ, ಪಿ.ಎಸ್.ಪಾಟೀಲ, ಎ.ವೈ.ಸಾಲಿ, ರವಿ ಜಾಧವ್ ಹಾಗೂ ಆರ್.ಎಸ್.ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT