ಶುಕ್ರವಾರದಿಂದ ರಾಮನವಮಿ ದಿಂಡಿ ಉತ್ಸವ

ಶನಿವಾರ, ಏಪ್ರಿಲ್ 20, 2019
29 °C

ಶುಕ್ರವಾರದಿಂದ ರಾಮನವಮಿ ದಿಂಡಿ ಉತ್ಸವ

Published:
Updated:

ಶಿವಮೊಗ್ಗ: ಭಾವಸಾರ ಕ್ಷತ್ರಿಯ ಮಹಾಜನ ಸಮಾಜದಿಂದ 100ನೇ ವರ್ಷದ ರಾಮನವಮಿ ದಿಂಡಿ ಉತ್ಸವ ಕಾರ್ಯಕ್ರಮವನ್ನು ಇದೇ 12, 13 ಮತ್ತು 14ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಓಂಪ್ರಕಾಶ್ ತೇಲ್ಕರ್ ತಿಳಿಸಿದರು.

ನಗರದ ತುಳಜಾ ಭವಾನಿ ಅಮ್ಮನವರ ದೇವಸ್ಥಾನದಲ್ಲಿ ಶ್ರೀ ರಾಮನವಮಿ, ಶ್ರೀ ವಿಠೋಭ ರಖುಮಾಯಿಯವರ 100ನೇ ವರ್ಷದ ದಿಂಡಿ ಮಹೋತ್ಸವವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

12ರಂದು ಬೆಳಿಗ್ಗೆ 9.30ಕ್ಕೆ ಪೋತಿ ಸ್ಥಾಪನೆ, ಕೀರ್ತನೆ ಕಾರ್ಯಕ್ರಮ ನಡೆಯಲಿದೆ. ಅಂದು ಸಂಜೆ 5ರಿಂದ 7ರವರೆಗೆ ರಾಮಜಪ ಪ್ರವಚನ ನಡೆಯಲಿದೆ. ನಂತರ ಸಂಗೀತ ಭಜನೆ ಕಾರ್ಯಕ್ರಮ ನಡೆಯಲಿದೆ. 13ರಂದು ಬೆಳಿಗ್ಗೆ 6ಕ್ಕೆ ಕಾಕಡಾರತಿ, ನಂತರ ಶ್ರೀರಾಮ ಜನ್ಮದ ನಿಮಿತ್ತ ಭಜನೆ ಮತ್ತು ಮಹಾಮಂಗಳಾರತಿ, ಸಂಜೆ 5ಕ್ಕೆ ನಾಮಜಪ ಹಾಗೂ ಪ್ರವಚನ ನಡೆಯಲಿದೆ. ಅಂದು ಸಂಜೆ ಪುಂಡಲಿಕರಾವ್ ಗಡ್ಡಾಳೆ ಹಾಗೂ ಕೆ.ವಿ.ರಾಮಚಂದ್ರರಾವ್ ಅವರಿಂದ ಪ್ರವಚನ  ನಡೆಯಲಿದೆ. 14ರಂದು ಬೆಳಿಗ್ಗೆ 5.30ರಿಂದ ಕಾಕಡಾರತಿ ನಡೆಯಲಿದ್ದು, 8.30ರಿಂದ 11.30ರವರೆಗೆ ರಾಜಬೀದಿ ಉತ್ಸವ ಮತ್ತು ಕಲಾಕೀರ್ತನೆ, ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ.ಪುರುಷೋತ್ತಮ್, ಸಂತೋಷ್, ಶಿವಾಜಿರಾವ್, ಶ್ರೀಧರಮೂರ್ತಿ ಇದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !