ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ವರು ತಹಶೀಲ್ದಾರ್‌ಗಳ ವರ್ಗಾವಣೆ

Last Updated 4 ಏಪ್ರಿಲ್ 2020, 13:59 IST
ಅಕ್ಷರ ಗಾತ್ರ

ಶಿವಮೊಗ್ಗ: ಕೊರೊನಾ ನಿರ್ಬಂಧಗಳ ಸಮಯದಲ್ಲೇ ಶಿವಮೊಗ್ಗದ ಬಿ.ಎನ್.ಗಿರೀಶ್ ಸೇರಿದಂತೆ ನಾಲ್ವರು ತಹಶೀಲ್ದಾರ್‌ಗಳನ್ನುವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಗಿರೀಶ್ ಅವರನ್ನು ಶಿವಮೊಗ್ಗದಿಂದ ದಾವಣಗೆರೆ ತಾಲ್ಲೂಕಿಗೆ, ಎನ್‌.ಜೆ.ನಾಗರಾಜ್‌ ಅವರನ್ನು ಚನ್ನಗಿರಿಯಿಂದ ಶಿವಮೊಗ್ಗ ತಾಲ್ಲೂಕಿಗೆ ವರ್ಗಾವಣೆ ಮಾಡಲಾಗಿದೆ. ಬಿ.ಎಸ್.ಕಡಕಭಾವಿ ಅವರನ್ನು ಮೈಸೂರಿನಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಸಹಾಯಕರ ಹುದ್ದೆಗೆ, ಆ ಹುದ್ದೆಯಲ್ಲಿದ್ದ ನಫೀಜಾ ಬೇಗಂ ಅವರನ್ನು ಅದೇ ಕಚೇರಿಯ ನಗರಾಭಿವೃದ್ಧಿ ಕೋಶಕ್ಕೆ ವರ್ಗಾವಣೆ ಮಾಡಲಾಗಿದೆ.

ಗಿರೀಶ್ ಅವರು ಕೊರೊನಾ ಹರಡದಂತೆ ತಡೆಯಲು ಸಾಕಷ್ಟು ಶ್ರಮವಹಿಸಿದ್ದರು. ಸ್ವತಃ ಬೀದಿಗಿಳಿದು ಜನರನ್ನು ನಿಯಂತ್ರಿಸಿದ್ದರು. ಜಾಗೃತಿ ಮೂಡಿಸಿದ್ದರು.2019 ಫೆಬ್ರುವರಿಯಲ್ಲಿ ಶಿವಮೊಗ್ಗದ ತಹಶೀಲ್ದಾರ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಕಚೇರಿಗೆ ಸಿಸಿಟಿವಿ ಅಳವಡಿಕೊಳ್ಳುವಮೂಲಕ ಪಾರದರ್ಶಕ ಆಡಳಿತಕ್ಕೆ ಮುನ್ನುಡಿ ಬರೆದಿದ್ದರು. ಅಕ್ರಮ ಕಲ್ಲುಕೋರೆ ತಡೆಯುವಲ್ಲಿ ಯಶಸ್ವಿಯಾಗಿದ್ದರು.ನೆರೆ ಸಮಯದಲ್ಲಿ ಸಾಕಷ್ಟು ಮಾನವೀಯತೆ ಮರೆದಿದ್ದರು. ಕೊರೊನಾ ಸಂಕಷ್ಟದ ಸಮಯದಲ್ಲಿ ಅವರ ವರ್ಗಾವಣೆಗೆ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿವೆ.

ಕೆಲವು ದಿನಗಳ ಹಿಂದೆ ಆಡಳಿತ ವಿಷಯಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ್‌ ನಾಯ್ಕ ಅವರ ಜತೆ ಮನಃಸ್ತಾಪ ಮಾಡಿಕೊಂಡಿದ್ದರು. ಅವರನ್ನು ವರ್ಗಾವಣೆ ಮಾಡುವಂತೆ ಸರ್ಕಾರಕ್ಕೆ ಶಾಸಕರು ಶಿಫಾರಸು ಪತ್ರ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT