ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಣ್ಣ ಒಡ್ಡು ನಿರ್ಮಿಸಿ, ಅಂತರ್ಜಲ ಹೆಚ್ಚಿಸಿ’

ಬೂದುಗುಪ್ಪೆಯಿಂದ ಬರಡನಹಳ್ಳಿ ಗ್ರಾಮಕ್ಕೆ ಹೋಗುವ ಚಿಕ್ಕಹೊಳೆಗೆ ಅಡ್ಡಲಾಗಿ ಮುಳುಗು ಸೇತುವೆ
Last Updated 3 ಜುಲೈ 2018, 16:17 IST
ಅಕ್ಷರ ಗಾತ್ರ

ಕನಕಪುರ: ವಾಡಿಕೆಯಷ್ಟು ಮಳೆಯಾಗಿಲ್ಲ ಎನ್ನುವ ಬದಲು, ಬಿದ್ದ ಮಳೆ ನೀರು ವ್ಯರ್ಥವಾಗಿ ಹರಿದು ಸಮುದ್ರಕ್ಕೆ ಹೋಗದಂತೆ ಅಲ್ಲಲ್ಲಿ ತಡೆಗಟ್ಟಿ ನಿಲ್ಲಿಸುವ ಮೂಲಕ ಅಂತರ್ಜಲ ಹೆಚ್ಚಿಸಬೇಕು ಎಂದು ಸಂಸದ ಡಿ.ಕೆ.ಸುರೇಶ್‌ ತಿಳಿಸಿದರು.

ಕಸಬಾ ಹೋಬಳಿ ಬೂದುಗುಪ್ಪೆ ಗ್ರಾಮದಿಂದ ಬರಡನಹಳ್ಳಿ ಗ್ರಾಮಕ್ಕೆ ಹೋಗುವ ಚಿಕ್ಕಹೊಳೆಗೆ ಅಡ್ಡಲಾಗಿ ನಿರ್ಮಾಣ ಮಾಡಿರುವ ಮುಳುಗು ಸೇತುವೆ ಉದ್ಘಾಟಿಸಿ ಅವರು ಮಾತನಾಡಿದರು. ಹಿಂದೆ ಗ್ರಾಮದ ಸುತ್ತಮುತ್ತಲೂ ನೀರು ಸಂಗ್ರಹಕ್ಕಾಗಿ ಕೆರೆ ಕಟ್ಟೆ ಕಟ್ಟಲಾಗುತ್ತಿತ್ತು. ಬಿದ್ದಮಳೆ ನೀರು ಸಂಗ್ರಹವಾಗಿ ವರ್ಷ ಪೂರ್ತಿ ಬಳಕೆ ಮಾಡಲಾಗುತ್ತಿತ್ತು. ಯಾವುದೇ ಕೊಳವೆ ಬಾವಿಗಳ ಆಶ್ರಯ ಇಲ್ಲದೆ ಕೆರೆ ಕಟ್ಟೆಗಳ ನೀರನ್ನೇ ರೈತರು ಅವಲಂಬಿಸಿದ್ದರು. ಕಾಲ ಬದಲಾದಂತೆ ತಾಂತ್ರಿಕತೆ ಮುಂದುವರಿದು, ನೀರಿಗಾಗಿ 100 ಅಡಿಯಿಂದ 2000 ಅಡಿವರೆಗೆ ಕೊಳವೆ ಬಾವಿಗಳನ್ನು ಕೊರೆಸಿದ ಪರಿಣಾಮ ಅಂತರ್ಜಲ ಕುಸಿಯುತ್ತಾ ಹೋಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬರಡನಹಳ್ಳಿ ಗ್ರಾಮಕ್ಕೆ ನಗರದಿಂದ ಹೋಗಲು ಮೂರು ಕಡೆ ಚಿಕ್ಕಹೊಳೆ ಹರಿಯುತ್ತಿದ್ದರಿಂದ ಸಮಸ್ಯೆಯಾಗುತ್ತಿತ್ತು. ಬಹು ದಿನಗಳಿಂದ ಬೂದುಗುಪ್ಪೆ ಗ್ರಾಮಕ್ಕೆ ಸಂಪರ್ಕ ಸೇತುವೆ ನಿರ್ಮಾಣ ಮಾಡಲು ಗ್ರಾಮಸ್ಥರ ಬೇಡಿಕೆಯಾಗಿತ್ತು. ಸಣ್ಣ ನೀರಾವರಿ ಇಲಾಖೆಯಿಂದ ₹1.30 ಕೋಟಿ ವೆಚ್ಚದಲ್ಲಿ ಮುಳುಗು ಸೇತುವೆ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.

ಗುತ್ತಿಗೆದಾರರು ಅವಧಿಗೂ ಮುಂಚಿತವಾಗಿ ಸೇತುವೆ ಕಾಮಗಾರಿ ಗುಣಮಟ್ಟದಲ್ಲಿ ನಿರ್ಮಾಣ ಮಾಡಿರುವುದರಿಂದ 1 ಕಿಲೋ ಮೀಟರ್‌ನಷ್ಟು ನೀರು ಹೊಳೆಯಲ್ಲಿ ನಿಂತಿದೆ. ಇದರಿಂದ ಬೂದುಗುಪ್ಪೆ, ಆಡನಕುಪ್ಪೆ, ಬರಡನಹಳ್ಳಿ, ಕನಕಪುರ, ರೈಸ್‌ಮಿಲ್‌, ಆನಮಾನಹಳ್ಳಿ, ಕಲ್ಲಹಳ್ಳಿ ಭಾಗದ ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜಶೇಖರ್‌, ನಗರಸಭಾ ಅಧ್ಯಕ್ಷ ಕೆ.ಎನ್‌.ದಿಲೀಪ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಆರ್‌.ಕೃಷ್ಣಮೂರ್ತಿ, ಎಂ.ಡಿ.ವಿಜಯದೇವು, ಬೂದುಗುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಾಯಸಂದ್ರ ರವಿ, ಮುಖಂಡರಾದ ಬೂದುಗುಪ್ಪೆ ರವಿಕುಮಾರ್‌, ನಂದಕುಮಾರ್‌, ಮರಿಯಪ್ಪ, ರಮೇಶ್‌, ಬರಡನಹಳ್ಳಿ ಚಂದ್ರಶೇಖರ್‌, ಪಿ.ಡಿ.ಒ. ಶಿವಣ್ಣ, ಕಾರ್ಯದರ್ಶಿ ಸಂಜಯ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT