ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಫಿಕ್ ಕಲಾವಿದರು ಇಳಿಮುಖ

Last Updated 17 ಡಿಸೆಂಬರ್ 2020, 6:53 IST
ಅಕ್ಷರ ಗಾತ್ರ

ತುಮಕೂರು: ಗ್ರಾಫಿಕ್ ಕಲೆಯಲ್ಲಿ ಕಲಾವಿದನ ಸೂಕ್ಷ್ಮತೆ, ತಂತ್ರಗಾರಿಕೆ ಹೊರಹಾಕಲು ವಿಫುಲ ಸಾಧ್ಯತೆಗಳಿವೆ. ಆದರೆ ಇಂದು ಗ್ರಾಫಿಕ್ ಕಲಾವಿದರು ಗಣನೀಯವಾಗಿ ಇಳಿಮುಖವಾಗಿದ್ದು ಅದರಲ್ಲೂ ಕರ್ನಾಟಕದಲ್ಲಿ ಬೆರಳೆಣಿಕೆಯಷ್ಟು ಕಲಾವಿದರು ಕಾರ್ಯನಿರತರಾಗಿದ್ದಾರೆ ಎಂದು ಕೇಂದ್ರ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಚಿ.ಸು.ಕೃಷ್ಣಶೆಟ್ಟಿ ತಿಳಿಸಿದರು.

ನಗರದ ರವೀಂದ್ರ ಕಲಾನಿಕೇತನದಲ್ಲಿ ಆಯೋಜಿಸಿದ್ದ ಉಡ್ಕಟ್ ಕಲಾಶಿಬಿರದ ಸಮಾರೋಪ ಉದ್ಘಾಟಿಸಿ ಮಾತನಾಡಿದರು.

ಕಲಾವಿದ ಬಿ.ಎಸ್.ದೇಸಾಯಿ ಮಾತನಾಡಿ, ‘2020 ಜಗತ್ತು ಮರೆಯಲಾಗದ ವರ್ಷ. ಜನರ ಕ್ರಿಯಾಶೀಲತೆಯನ್ನು ಸ್ತಬ್ಧಗೊಳಿಸುತ್ತಿರುವ ಈ ಸಂದರ್ಭದಲ್ಲೂ ಎಲ್ಲವನ್ನೂ ಮೀರಿ ಸಂವೇದನೆಗಳನ್ನು ಸ್ಥಾಪಿಸುವ ಪ್ರಯತ್ನ ಮಾಡಿದ್ದೀರಿ’ ಎಂದು ಪ್ರಶಂಸಿಸಿದರು.

ಶಿಬಿರದ ನಿರ್ದೇಶಕ ಕೆ.ಸಿ.ಎಸ್‌.ಪ್ರಸನ್ನ, ಪ್ರಾಂಶುಪಾಲ ಕಿಶೋರ್ ಕುಮಾರ್‌ ಮಾತನಾಡಿದರು. ಶಂಕರಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು.

ಉಪನ್ಯಾಸಕರಾದ ಪ್ರಭುಹರಸೂರ್, ಎಸ್.ಕೆ.ಅಶೋಕ್, ಟಿ.ಕೆ.ರಾಮಸಿಂಗ್, ಪುಟ್ಟರಾಜು, ಕೆ.ಸಿ.ಎಸ್ ಪ್ರಸನ್ನ, ಎ.ಜಿ.ಉಮಾಮಹೇಶ್, ಸಿದ್ದೇಶ್ ಗೌಡ, ರವಿ ಟಿ.ಎಚ್ ಬಸವರಾಜು, ಕೆ.ಎಸ್.ಹರ್ಷ, ಕೆ.ಎನ್.ಅರುಣ, ಜಿ.ಶಾಂತಕುಮಾರ್, ಟಿ.ಎಚ್.ವಿಶ್ವನಾಥ್, ಜಿ.ರಾಜಣ್ಣ, ಆರ್.ಯರಗುಂಟೇಶ್ವರ, ಆರ್.ಲೋಕೇಶ್, ಎಂ.ಆರ್.ಭರತ್ ಕಲಾಕೃತಿಗಳನ್ನು ರಚಿಸಿದ್ದರು.

ರವೀಂದ್ರ ಕಲಾನಿಕೇತನದ ಗ್ರಾಫಿಕ್ ಆರ್ಟ್ ಗ್ಯಾಲರಿಯಲ್ಲಿ ಡಿ. 19ರ ವರೆಗೆ ಕಲಾಪ್ರದರ್ಶನ ಕಣ್ತುಂಬಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT