ತುಮಕೂರು: ದಸರಾ ಸಮಿತಿಯಿಂದ ದಸರಾ ಹಬ್ಬದ ಪ್ರಯುಕ್ತ ಅ. 3ರಿಂದ 12ರ ವರೆಗೆ ನಗರದ ಕೆ.ಆರ್.ಬಡಾವಣೆಯ ರಾಮ ಮಂದಿರದ ಆವರಣದಲ್ಲಿ ಸಾಂಸ್ಕೃತಿಕ ವೈಭವ ನವರಾತ್ರಿ ಉತ್ಸವ ಏರ್ಪಡಿಸಲಾಗಿದೆ.

'ಪ್ರತಿ ಸಂಜೆ ವಂದೇಮಾತರಂ, ಸಾಮೂಹಿಕ ಲಲಿತಾ ಸಹಸ್ರನಾಮ, ಸಿಡಿಮದ್ದಿನ ಪ್ರದರ್ಶನ ಇರುತ್ತದೆ. ನಾಡ ಹಬ್ಬದ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಎಲ್ಲ ಸ್ಪರ್ಧೆಗಳ ವಿಜೇತರಿಗೆ ನಗದು ಬಹುಮಾನ, ಪಾರಿತೋಷಕ ವಿತರಿಸಲಾಗುತ್ತದೆ‘ ಎಂದು ದಸರಾ ಸಮಿತಿ ಕಾರ್ಯಾಧ್ಯಕ್ಷ ಡಾ.ಎಸ್.ಪರಮೇಶ್ ಇಲ್ಲಿ ಶನಿವಾರ ಮಾಹಿತಿ ನೀಡಿದರು.

ಅ. 3ರಂದು ಸಾಂಸ್ಕೃತಿಕ ದಸರಾಗೆ ಚಾಲನೆ ನೀಡಲಾಗುತ್ತದೆ. ಅ. 4ರಂದು ಸಂಜೆ 3 ಗಂಟೆಗೆ ಭಜನಾ ಸ್ಪರ್ಧೆ, 5ರಂದು ಸಂಜೆ 4 ಗಂಟೆಗೆ ಜಾನಪದ ಕಲಾ ಪ್ರಕಾರಗಳ ಸ್ಪರ್ಧೆ, 6ರಂದು ಬೆಳಿಗ್ಗೆ 10.30 ಗಂಟೆಗೆ ರಸಪ್ರಶ್ನೆ ಸ್ಪರ್ಧೆ, ಮಧ್ಯಾಹ್ನ 1 ಗಂಟೆಗೆ ದೇಶಭಕ್ತಿ ಗೀತೆಗಳ ನೃತ್ಯ ಸ್ಪರ್ಧೆ, 7ರಂದು ಸಂಜೆ 4 ಗಂಟೆಗೆ ಜನಪದ ಗೀತೆ ಸ್ಪರ್ಧೆ, ಸಂಜೆ 6 ಗಂಟೆಗೆ ಯೋಗ ದಸರಾ, ಮಲ್ಲಕಂಬ ಪ್ರದರ್ಶನ ಇರಲಿದೆ. 8ರಂದು ಸಂಜೆ 4 ಗಂಟೆಗೆ ವೇಷಭೂಷಣ ಸ್ಪರ್ಧೆ, ಕಾವ್ಯ ಸಂಗೀತ ಕಾರ್ಯಕ್ರಮ, 9ರಂದು ಸಂಜೆ 4 ಗಂಟೆಗೆ ರಂಗ ಗೀತೆ ಸ್ಪರ್ಧೆ, 10ರಂದು ಸಂಜೆ 3 ಗಂಟೆಗೆ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ, ಸಂಜೆ 6 ಗಂಟೆಗೆ ನೃತ್ಯ ವೈಭವ ಕಾರ್ಯಕ್ರಮ ಇರಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅ. 11ರಂದು ಸಂಜೆ 6 ಗಂಟೆಗೆ ಜಾನಪದ ವೈಭವ, 12ರಂದು ಬೆಳಿಗ್ಗೆ 11 ಗಂಟೆಗೆ ರಂಗೋಲಿ ಸ್ಪರ್ಧೆ, ಸಂಜೆ 4 ಗಂಟೆಗೆ ಶಮೀಪೂಜೆ ನೆರವೇರಲಿದೆ. ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ದಸರಾ ಸಮಿತಿ ಕೋಶಾಧ್ಯಕ್ಷ ಜಿ.ಎಸ್.ಬಸವರಾಜು, 'ನಾಡಹಬ್ಬ ದಸರಾ ಜಿಲ್ಲೆಯ ಹತ್ತಾರು ಕಡೆಯಲ್ಲಿ ನಡೆಯುತ್ತದೆ. ಸರ್ಕಾರಕ್ಕೆ ಪರ್ಯಾಯವಾಗಿ ನಾವು ಉತ್ಸವ ಮಾಡುತ್ತಿಲ್ಲ. ಜನ ಸಾಮಾನ್ಯರ ದಸರಾ, ಸಾಂಪ್ರದಾಯ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಇದುವರೆಗೆ ಪಾರದರ್ಶಕ, ಪ್ರಾಮಾಣಿಕವಾಗಿ ನಡೆದುಕೊಂಡಿದ್ದೇವೆ' ಎಂದರು.

ದಸರಾ ಉತ್ಸವದ ಲೋಗೊ ಬಿಡುಗಡೆ ಮಾಡಲಾಯಿತು. ಶಾಸಕ ಜಿ.ಬಿ.ಜ್ಯೋತಿಗಣೇಶ್, ದಸರಾ ಸಮಿತಿಯ ಕೋರಿ ಮಂಜುನಾಥ್, ನಾಗರಾಜಶೆಟ್ಟಿ, ಜೆ.ಕೆ.ಶ್ರೀನಿವಾಸ್, ಶಿವಶಂಕರ್, ಬಿ.ಎಸ್.ಮಹೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.