ವೃತ್ತಿ ಮಾರ್ಗದರ್ಶನದ ತರಬೇತಿ ಕಾರ್ಯಾಗಾರ

7

ವೃತ್ತಿ ಮಾರ್ಗದರ್ಶನದ ತರಬೇತಿ ಕಾರ್ಯಾಗಾರ

Published:
Updated:
Prajavani

ತುಮಕೂರು: ಯಾವುದೇ ವಿಷಯ ಓದಿ ತಿಳಿದುಕೊಂಡು ಅದನ್ನು ಇತರರಿಗೆ ತಿಳಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಹಾಗೆಯೇ ಬರೆಯುವ ಅಭ್ಯಾಸ ಕರಗತ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ರಾಕೇಶ್‌ ಕುಮಾರ್‌ ತಿಳಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಗರದ ಕುಂಚಿಟಿಗರ ಭವನದಲ್ಲಿ ಐಎಎಸ್‌, ಐಪಿಎಸ್‌, ಕೆಎಎಸ್‌, ಬ್ಯಾಂಕಿಂಗ್‌ ಇತ್ಯಾದಿ ಪರೀಕ್ಷೆಗಳ ಪೂರ್ವ ತಯಾರಿ ಬಗ್ಗೆ ಏರ್ಪಡಿಸಿದ್ದ ‘ವೃತ್ತಿ ಮಾರ್ಗದರ್ಶನದ ತರಬೇತಿ ಕಾರ್ಯಕ್ರಮ’ದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಮಿತವಾಗಿ ಮೊಬೈಲ್ ಬಳಕೆ ಮಾಡಬೇಕು. ಸರ್ಕಾರ ಆಯೋಜಿಸುವ ತರಬೇತಿ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಭಾಗವಹಿಸಿ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಮಾತನಾಡಿ, ಪ್ರತಿಯೊಂದು ಅಭ್ಯಾಸದಲ್ಲಿಯೂ ಆಸಕ್ತಿ ಹೊಂದಿರಬೇಕು. ಆಗಲೇ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲು ಸಾಧ್ಯ ಎಂದರು.

ಜಿಲ್ಲಾ ಅಧಿಕಾರಿ ಸುಬ್ರಾನಾಯಕ, ತಾಲ್ಲೂಕು ವಿಸ್ತರಣಾಧಿಕಾರಿ ಆರ್.ರಂಗಸ್ವಾಮಿ, ಪಾರ್ವತವ್ವ ಹಡಗಿನಾಳ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !