ಟೊಮೆಟೊ ಬೆಳೆ ಕ್ಷೇತ್ರೋತ್ಸವ

7

ಟೊಮೆಟೊ ಬೆಳೆ ಕ್ಷೇತ್ರೋತ್ಸವ

Published:
Updated:
Prajavani

ತುಮಕೂರು: ತಾಲ್ಲೂಕಿನ ಹೆಬ್ಬೂರು ಹೋಬಳಿ ಎನ್‌.ಕೆ.ಗೊಲ್ಲರಹಟ್ಟಿಯಲ್ಲಿ ಐಡಿಎಫ್‌ ಸಂಸ್ಥೆ, ಸುಪ್ರಜಾ ಫೌಂಡೇಷನ್‌ ಮತ್ತು ಕೊಲ್ಲಾಪುರದಮ್ಮ ರೈತ ಉತ್ಪಾದಕರ ಕಂಪನಿ ಸಂಯುಕ್ತಾಶ್ರಯದಲ್ಲಿ ರೈತ ಗಂಗಣ್ಣ ಅವರ ಜಮೀನಿನಲ್ಲಿ ‘ಟೊಮೆಟೊ ಬೆಳೆ ಕ್ಷೇತ್ರೋತ್ಸವ’ ನಡೆಯಿತು.

ಈ ವೇಳೆ ಕೊಲ್ಲಾಪುರದಮ್ಮ ರೈತ ಉತ್ಪಾದಕರ ಕಂಪನಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುರೇಶ್ ಮಾತನಾಡಿ, ರೈತರು ರಾಸಾಯನಿಕ ಬಳಕೆ ಕಡಿಮೆ ಮಾಡಿ ಹೆಚ್ಚು ಸಾವಯವ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ವ್ಯವಸಾಯದಲ್ಲಿ ಖರ್ಚು ಕಡಿಮೆ ಮಾಡಿದಾಗ ಆದಾಯ ಹೆಚ್ಚು ವೃದ್ಧಿಸಬಹುದು ಎಂದರು.

ಭೂಮಿಗೆ ಕಾಂಪೋಸ್ಟ್ ಗೊಬ್ಬರವನ್ನು ಮಣ್ಣಿಗೆ ಬೆರೆಸಿ ಭೂಮಿಯನ್ನು ಹದಮಾಡಿ ಸಸಿಗಳನ್ನು ನಾಟಿ ಮಾಡಿದಾಗ ಉತ್ತಮ ಇಳುವರಿ ಪಡೆಯಬಹುದು ಎಂದು ತಿಳಿಸಿದರು.

ಐಡಿಎಫ್ ಸಂಸ್ಥೆಯ ಜೀವನ ಉತ್ತೇಜನಾಧಿಕಾರಿ ಗುರುದತ್ ಮಾತನಾಡಿ, ರೈತರು ಹಿಂದಿನ ಕಾಲದಲ್ಲಿ ಮಾಡುತಿದ್ದ ವ್ಯವಸಾಯವನ್ನು ಇಂದು ಮಾಡಿದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಪಡೆಯಬಹುದು ಎಂದುರು.

ಜೀವನ ಉತ್ತೇಜನಾಧಿಕಾರಿ ಹರ್ಷಿತ, ಕಂಪನಿಯ ವ್ಯವಸ್ಥಾಪಕ ಡಿ.ಲೋಕೇಶ್, ರೈತ ಗಂಗಣ್ಣ, ಕೆ.ಮಧುಸೂಧನ್, ಸಿ.ಮೋಹನ್‍ಕುಮಾರ್, ನರಸಿಂಹಮೂರ್ತಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !