ಗುರುವಾರ , ಅಕ್ಟೋಬರ್ 17, 2019
22 °C
ಬರಪೀಡಿತ ಪಾವಗಡ ತಾಲ್ಲೂಕಿನಲ್ಲಿ ಗರಿಷ್ಠ ಮಳೆ ದಾಖಲು, ಜೀವ ಕಳೆ ಪಡೆದ ಕೆರೆಗಳು

ತುಮಕೂರು| ಒಂದೇ ದಿನ ಜಿಲ್ಲೆಯಲ್ಲಿ 126.53 ಮಿ.ಮೀ ಮಳೆ

Published:
Updated:
Prajavani

ತುಮಕೂರು: ಜಿಲ್ಲೆಯಲ್ಲಿ ಕಳೆದ ವಾರದಿಂದ ಮಳೆ ಆರ್ಭಟ ಮುಂದುವರಿದಿದ್ದು, ಭಾನುವಾರ ಒಂದೇ ದಿನ ಜಿಲ್ಲೆಯಲ್ಲಿ 126.53 ಮಿ.ಮೀ ಮಳೆಯಾಗಿದೆ.

ಅದರಲ್ಲೂ ಬರಪೀಡಿತ ಪಾವಗಡ ತಾಲ್ಲೂಕಿನಲ್ಲಿ ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗಿನ ಜಾವದವರೆಗೆ 221.4 ಮಿ.ಮೀ ಯಷ್ಟು ಮಳೆಯಾಗಿದೆ.

ಇದು ಈಚೆಗೆ ಸುರಿದ ಮಳೆಗಳಲ್ಲಿ ದಾಖಲೆ ಮಳೆ ಎಂದು ಹೇಳಲಾಗುತ್ತಿದೆ. ಸೋಮವಾರ ಸ್ವಲ್ಪ ಬಿಡುವು ಕೊಟ್ಟಿದ್ದ ಮಳೆ ಮಂಗಳವಾರ ಮತ್ತೆ ಸುರಿದಿದೆ.

ಗುಬ್ಬಿಯಲ್ಲಿ 112.4 ಮಿ.ಮೀ, ಶಿರಾ–50.8 ಮಿ.ಮೀ, ಚಿಕ್ಕನಾಯಕನಹಳ್ಳಿ –40.2,ತುಮಕೂರು–46.6,ತುರುವೇಕೆರೆ–42.2, ಕೊರಟಗೆರೆ–29.5, ತಿಪಟೂರು–14.5, ಮಧುಗಿರಿ–3.2, ಕುಣಿಗಲ್ 3.2 ಮಿ.ಮೀ ಮಳೆಯಾಗಿದೆ.

ಕೊರಟಗೆರೆ, ಶಿರಾ, ತುರುವೇಕೆರೆ, ಚಿಕ್ಕಾನಾಯಕನಹಳ್ಳಿಯಲ್ಲಿ ಉತ್ತಮ ಮಳೆಯಾಗಿದ್ದು ಬತ್ತಿ ಬರಡಾಗಿದ್ದ ಕೆರೆಗಳಿಗೆ ಮತ್ತೆ ಜೀವ ಕಳೆ ಬಂದಿದೆ, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

––––––––––––––

ತಾಲ್ಲೂಕು ಮಳೆ ಪ್ರಮಾಣ (ಮಿ.ಮೀಗಳಲ್ಲಿ)

ಗುಬ್ಬಿ 112.4
ಶಿರಾ 50.8
ತುಮಕೂರು 46.6
ತುರುವೇಕೆರೆ 42.2
ಚಿಕ್ಕನಾಯಕನಹಳ್ಳಿ 40.2
ಕೊರಟಗೆರೆ 29.5
ತಿಪಟೂರು 14.5
ಮಧುಗಿರಿ 3.2
ಕುಣಿಗಲ್ 3.2

Post Comments (+)