ಮಧುಗಿರಿ: ಕಚೇರಿಯಲ್ಲಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ಬಂಧಿತರಾಗಿರುವ ಡಿವೈಎಸ್ಪಿ ಎ.ರಾಮಚಂದ್ರಪ್ಪ ಅವರಿಗೆ ಮಧುಗಿರಿ ಜೆಎಂಎಫ್ಸಿ ನ್ಯಾಯಾಲಯ 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಶನಿವಾರ ಆದೇಶ ನೀಡಿದೆ.

ರಾಮಚಂದ್ರಪ್ಪ ಅವರನ್ನು ಮಧುಗಿರಿ ಪೊಲೀಸರು ಜೆಎಂಎಫ್ಸಿ ನ್ಯಾಯಾಲಯ ಮುಂದೆ ಶನಿವಾರ ಹಾಜರು ಪಡಿಸಿದಾಗ ನ್ಯಾಯಾಧೀಶರು 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ. ರಾಮಚಂದ್ರಪ್ಪ ಅವರನ್ನು ಮಧುಗಿರಿ ತಾಲ್ಲೂಕು ಉಪಕಾರಾಗೃಹಕ್ಕೆ ಬಿಡಲಾಗಿದೆ.

ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಮಹಿಳೆಯನ್ನು ಮಧುಗಿರಿ ಪೊಲೀಸರು ಡಿವೈಎಸ್ಪಿ ಕಚೇರಿಗೆ ಶನಿವಾರ ಕರೆ ತಂದು ಸ್ಥಳ ಮಹಜರು ನಡೆಸಿದರು.

ಅಮಾನತುಗೊಂಡಿದ್ದ ಮಧುಗಿರಿ ಡಿವೈಎಸ್ಪಿ ಸ್ಥಳಕ್ಕೆ ಶಿರಾ ಡಿವೈಎಸ್ ಪಿ ಬಿ.ಕೆ.ಶೇಖರ್ ಅವರನ್ನು ನಿಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.