ಎಎಸ್ಐ, ಇಬ್ಬರು ಕಾನ್‌ಸ್ಟೆಬಲ್ ಅಮಾನತು

7
ಹುಲಿಯೂರುದುರ್ಗ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಗೆ ಥಳಿಸಿದ ಪ್ರಕರಣ

ಎಎಸ್ಐ, ಇಬ್ಬರು ಕಾನ್‌ಸ್ಟೆಬಲ್ ಅಮಾನತು

Published:
Updated:

ಕುಣಿಗಲ್: ಹುಲಿಯೂರುದುರ್ಗದಲ್ಲಿ ಇತ್ತೀಚೆಗೆ ಪದ್ಮನಾಭ್ ಎಂಬುವವರನ್ನು ಕ್ಷುಲ್ಲಕ ಕಾರಣಕ್ಕೆ ಅಮಾನುಷವಾಗಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಲಿಯೂರುದುರ್ಗ ಪೊಲೀಸ್ ಠಾಣೆ ಎಎಸ್ಐ ವೈ.ಟಿ.ನಾರಾಯಣ್, ಕಾನ್‌ಸ್ಟೆಬಲ್‌ ದಿನೇಶ್ ಮತ್ತು ರಂಗಪ್ಪ ಕುಂಬಾರ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್ ಅಮಾನತುಗೊಳಿಸಿದ್ದಾರೆ.

ಕಳೆದ ಶುಕ್ರವಾರ (ಆ.3) ರಾತ್ರಿ ಹಳೇಪೇಟೆ ರಸ್ತೆಯಲ್ಲಿ ಬ್ಯಾಡ್ಮಿಂಟನ್‌ ಆಡುತ್ತಿದ್ದ ಪದ್ಮನಾಭ್ ಅವರನ್ನು ರಾತ್ರಿಗಸ್ತಿನಲ್ಲಿದ್ದ ವೈ.ಟಿ.ನಾರಾಯಣ್ ಮನೆಗೆ ಹೋಗುವಂತೆ ಸೂಚಿಸಿದರು. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಪದ್ಮನಾಭ್ ಕರ್ತವ್ಯಕ್ಕೆ ಅಡ್ಡಿ ಪಡಿಸಿದರು ಎಂದು ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿದರು. ತೀವ್ರವಾಗಿ ಥಳಿಸಿದರು. ಶನಿವಾರ ಪಟ್ಟಣದ ನ್ಯಾಯಾಲಯಕ್ಕೆ ಕರೆತಂದಾಗ ಪದ್ಮನಾಭ್ ಗಾಯಗಳನ್ನು ಆವರಣದಲ್ಲಿದ್ದವರಿಗೆ ತೋರಿಸಿದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಸಿಪಿಐ ಅವರ ಅಶೋಕ್ ಕುಮಾರ್ ವರದಿಯ ಮೇರೆಗೆ ದಿವ್ಯಾ ಗೋಪಿನಾಥ್ ಅಮಾನತು ಆದೇಶ ಹೊರಡಿಸಿದ್ದಾರೆ

Tags: 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !