ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಮತ್ತೆ 32 ಮಂದಿಗೆ ಕೊರೊನಾ, ಸಾವಿನ ಸಂಖ್ಯೆ 17ಕ್ಕೆ ಹೆಚ್ಚಳ

Last Updated 15 ಜುಲೈ 2020, 14:36 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಬುಧವಾರ ಮತ್ತೆ 32 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 597ಕ್ಕೆ ಏರಿದೆ. ಸಾವಿನ ಪ್ರಮಾಣವೂ ಹೆಚ್ಚಳವಾಗುತ್ತಿದ್ದು, 17ಕ್ಕೆ ಏರಿಕೆಯಾಗಿದೆ.

ಕೊರೊನಾ ಸೋಂಕಿಗೆ ತುತ್ತಾಗಿದ್ದ ತುಮಕೂರು ತಾಲ್ಲೂಕಿನ ಚಿಕ್ಕಸಾರಂಗಿ ಗ್ರಾಮದ 58 ವರ್ಷದ ಮಹಿಳೆ ಮಂಗಳವಾರ ಮೃತಪಟ್ಟಿದ್ದಾರೆ. ಜುಲೈ 5ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಒಂದು ವಾರದಿಂದ ನಿತ್ಯವೂ ಒಂದೊಂದು ಸಾವಿನ ಪ್ರಕರಣಗಳು ಘಟಿಸುತ್ತಿವೆ.

ಯಥಾಪ್ರಕಾರ ತುಮಕೂರು ನಗರದಲ್ಲಿಯೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಬುಧವಾರ ನಗರದ 17 ಮಂದಿಗೆ ಸೋಂಕು ದೃಢಪಟ್ಟಿದೆ. ನಗರದಲ್ಲಿ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಲಕ್ಷಣಗಳು ಸ್ಪಷ್ಟವಾಗಿವೆ.

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 49 ಮಂದಿ ಗುಣಮುಖರಾಗಿ ಬುಧವಾರ ಬಿಡುಗಡೆಯಾದರು. ಇಷ್ಟೊಂದು ಸಂಖ್ಯೆಯಲ್ಲಿ ಗುಣಮುಖರಾಗಿ ಬಿಡುಗಡೆಯಾಗಿರುವುದು ಇದೇ ಮೊದಲು. ಇಲ್ಲಿಯವರೆಗೆ ಸೋಂಕಿನಿಂದ ಗುಣಮುಖರಾಗಿ 213 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 367 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿ ಇವೆ.

ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 666 ಹಾಗೂ ದ್ವಿತೀಯ ಸಂಪರ್ಕಿತ 879 ಮಂದಿ ಕ್ವಾರಂಟೈನ್‌ನಲ್ಲಿ ಇದ್ದಾರೆ.

ತಾಲ್ಲೂಕು; ಇಂದಿನ ಸೋಂಕಿತರು (ಜು.15); ಒಟ್ಟು ಸೋಂಕಿತರು; ಮರಣ

ಚಿ.ನಾ.ಹಳ್ಳಿ; 6; 36; 0
ಗುಬ್ಬಿ; 0; 30; 1
ಕೊರಟಗೆರೆ; 1; 36; 1
ಕುಣಿಗಲ್; 0; 29; 1
ಮಧುಗಿರಿ; 8; 53; 1
ಪಾವಗಡ; 0; 61; 0
ಶಿರಾ; 0; 52; 1
ತಿಪಟೂರು; 0; 23; 0
ತುಮಕೂರು; 17; 255; 13
ತುರುವೇಕೆರೆ; 0; 22; 0
ಒಟ್ಟು; 32; 597; 17

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT