ಮಂಗಳವಾರ, ನವೆಂಬರ್ 12, 2019
24 °C

ಎಟಿಎಂ ಕಾರ್ಡ್ ವಿವರ ಪಡೆದು ₹ 40 ಸಾವಿರ ದೋಚಿದ ವಂಚಕ

Published:
Updated:

ತಿಪಟೂರು: ನಗರದ ಎಸ್‌ಬಿಐ ಬ್ಯಾಂಕ್ ಗ್ರಾಹಕ ಡಾ.ಬಿ.ಎಂ. ಪರಮಶಿವಯ್ಯ ಅವರ ಎಟಿಎಂ ವಿವರ, ಒಟಿಪಿ ವಿವರ ಪಡೆದು ₹ 40 ಸಾವಿರ ಹಣವನ್ನು ಆನ್‌ಲೈನ್‌ನಲ್ಲಿ ಡ್ರಾ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಪರಮಶಿವಯ್ಯ ಅವರು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರು. ಗುಬ್ಬಿ ತಾಲ್ಲೂಕಿನ ಬೊಮ್ಮರನಸಹಳ್ಳಿ ಗ್ರಾಮದವರಾಗಿದ್ದಾರೆ. ತಿಪಟೂರಿನ ಎಸ್‌ಬಿಐ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದಾರೆ. ಆಗಸ್ಟ್ 14ರಂದು  ಅವರ ಮೊಬೈಲ್‌ಗೆ 62899389421 ನಿಂದ ವಂಚಕ ಕರೆ ಮಾಡಿ ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾನು ಬೆಂಗಳೂರಿನ ಶಾಂತಿನಗರದ ಎಸ್‌ಬಿಐ ಕೇಂದ್ರ ಕಚೇರಿಯ ರವಿಕುಮಾರ ಶರ್ಮಾ ಎಂದು ತಿಳಿಸಿದ್ದಾನೆ. ಮೊದಲು ಎಟಿಎಂ ಡೆಬಿಟ್‌ ಕಾರ್ಡಿನ ವ್ಯಾಲಿಡಿಟಿ ನಂಬರ್, ಸಿವಿವಿ ನಂಬರ್ ಪಡೆದಿದ್ದಾನೆ. ಬಳಿಕ ಒಟಿಪಿ ನಂಬರ್ ಪಡೆದು ಆನ್‌ ಲೈನ್‌ನಲ್ಲಿಯೇ ₹ 40 ಸಾವಿರ ದೋಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆ.14ರಂದೇ ಹಣ ದೋಚಿದ್ದು, ಆ.30ರಂದು ದೂರು ನೀಡಿದ್ದಾರೆ.

 

ಪ್ರತಿಕ್ರಿಯಿಸಿ (+)