ಬುಧವಾರ, ಸೆಪ್ಟೆಂಬರ್ 18, 2019
26 °C
32 ದಿನ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ

ಸಿದ್ಧಿ ವಿನಾಯಕ ಸೇವಾ ಮಂಡಳಿಯ 43ನೇ ವರ್ಷದ ಅದ್ಧೂರಿ ಗಣೇಶೋತ್ಸವ

Published:
Updated:
Prajavani

ತುಮಕೂರು: ಸಿದ್ಧಿ ವಿನಾಯಕ ಸೇವಾ ಮಂಡಳಿಯು 43ನೇ ವರ್ಷದ ವೈಭವಪೂರ್ಣ ಸಿದ್ಧಿವಿನಾಯಕ ಮಹೋತ್ಸವವನ್ನು ಹಮ್ಮಿಕೊಂಡಿದ್ದು, ಕೃಷ್ಣಗೋಕುಲಗಮನ ಮತ್ತು ಕಂಸವಧೆ( ಸಿದ್ಧಿವಿನಾಯಕ ವೈಭವವನ್ನು ಆಯೋಜಿಸಿದೆ ಎಂದು ಮಂಡಳಿಯ ಅಧ್ಯಕ್ಷ ಜಿ.ಎಚ್.ಪರಮಶಿವಯ್ಯ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,‘ ಸೆಪ್ಟೆಂಬರ್ 2ರಿಂದ ಅಕ್ಟೋಬರ್ 2ರವರೆಗೆ 32 ದಿನಗಳ ಕಾಲ ವೈವಿಧ್ಯಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪೂಜಾ ಮಹೋತ್ಸವ ನಡೆಯಲಿದೆ. ಪ್ರತಿ ದಿನ ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಸೆ.2ರಂದು 32 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸೆ.2ರಂದು ಸಂಜೆ 6ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಉದ್ಘಾಟಿಸಲಿದ್ದು, ಸಾನ್ನಿಧ್ಯವನ್ನು ಸಿದ್ಧಗಂಗಾಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ವಹಿಸಲಿದ್ದಾರೆ. ಸಂಸದ ಜಿ.ಎಸ್. ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್, ಮೇಯರ್ ಲಲಿತಾ ರವೀಶ್ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳು: ಸೆ.2ರಂದು ಸಂಜೆ 7ಕ್ಕೆ ನಾದಸ್ವರ ವಿದ್ವಾನ್ ಎಚ್.ಜಿ.ಬಸವರಾಜು, ಎಸ್.ನಾಗರಾಜು ಕಾರ್ಯಕ್ರಮ ಪ್ರಸ್ತುತಪಡಿಸುವ ಮೂಲಕ ಕಾರ್ಯಕ್ರಮ ಆರಂಭವಾಗಲಿದೆ ಎಂದು ಹೇಳಿದರು.

ಕಥಾ ಕಲಾಕ್ಷೇಪ, ಶಾಲಾ ಮಕ್ಕಳಿಂದ ನೃತ್ಯ, ವಿಶೇಷ ಮನರಂಜನೆ, ನಿಮ್ಮ ಆಟ – ನಮ್ಮ ಬಹುಮಾನ, ಶಾಲಾ ಮಕ್ಕಳಿಗೆ ಚಿತ್ರ ಬರೆಯುವ ಸ್ಪರ್ಧೆ, ಹಾಸ್ಯಲಾಸ್ಯ, ಯಕ್ಷಗಾನ, ನಾಟ್ಯ ವೈವಿಧ್ಯ– ನೃತ್ಯರೂಪಕ, ಸುಗಮ ಸಂಗೀತ, ಜಾನಪದ, ಕನ್ನಡ ಹಳೆಯ ಚಲನಚಿತ್ರ ಗೀತೆ ಭರತ ನಾಟ್ಯ ನೃತ್ಯ ರೂಪಕ, ನೃತ್ಯ ವೈವಿಧ್ಯ, ಸುಮಧುರ ಗೀತಾಂಜಲಿ, ಮಾತಾಡುವ ಗೊಂಬೆ, ಮ್ಯಾಜಿಕ್ ಷೋ, ಸ್ಯಾಕ್ಸೋಫೋನ್ ಸುಮಧುರ ಗೀತೆಗಳು, ಹಾಸ್ಯ, ರಸಮಂಜರಿ, ಸಂಗೀತ ಸ್ವರಾಂಜಲಿ ಸೇರಿದಂತೆ 32 ದಿನಗಳ ಕಾಲ ಭಿನ್ನ ವಿಭಿನ್ನ ಕಾರ್ಯಕ್ರಮಗಳನ್ನು ಕಲಾವಿದರು, ಮಕ್ಕಳು, ನಟರು ನಡೆಸಿಕೊಡಲಿದ್ದಾರೆ ಎಂದು ವಿವರಿಸಿದರು.

ಕಾರ್ಯದರ್ಶಿ ಕೆ.ಎಸ್. ರಾಘವೇಂದ್ರರಾವ್, ಉಪಾಧ್ಯಕ್ಷ ಎಚ್.ಆರ್. ನಾಗೇಶ್, ಸಹ ಕಾರ್ಯದರ್ಶಿ ಜಗಜ್ಯೋತಿ ಸಿದ್ದರಾಮಯ್ಯ, ಖಜಾಂಚಿ ಎಸ್.ಬಿ.ಪ್ರಭು, ನಿರ್ದೇಶಕರು ಗೋಷ್ಠಿಯಲ್ಲಿದ್ದರು.

Post Comments (+)