ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ಹಾಕಿದವರ ವಿರುದ್ಧ 445 ಪ್ರಕರಣ, ₹ 9.17 ಲಕ್ಷ ದಂಡ

ನಗರ ಸೌಂದರ್ಯೀಕರಣಕ್ಕೆ ಒತ್ತು; ಪಾಲಿಕೆ ಆಯುಕ್ತ ಟಿ.ಭೂಬಾಲನ್
Last Updated 7 ಆಗಸ್ಟ್ 2019, 19:48 IST
ಅಕ್ಷರ ಗಾತ್ರ

ತುಮಕೂರು: ಮಹಾನಗರ ಪಾಲಿಕೆಯು ನಗರ ಸೌಂದರ್ಯೀಕರಣಕ್ಕೆ ಒತ್ತು ಕೊಟ್ಟಿದೆ. ಪ್ರತಿ ಮನೆ, ವಾಣಿಜ್ಯ ಕಟ್ಟಡಗಳಿಂದ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸಿ ಕೊಡಲು ಸೂಚನೆ ನೀಡಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್ ತಿಳಿಸಿದ್ದಾರೆ.

ಕಸ ವಿಂಗಡಣೆ ಮಾಡದೆ, ಬೀದಿಯಲ್ಲಿ ಕಸ ಹಾಕಿದವರ ವಿರುದ್ಧ ಈವರೆಗೆ 445 ಪ್ರಕರಣ ದಾಖಲಿಸಿ ₹ 9.17 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

240 ಪ್ಲಾಸ್ಟಿಕ್ ನಿಷೇಧ ಪ್ರಕರಣಗಳಲ್ಲಿ ₹ 7.86 ಲಕ್ಷ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವ 126 ಪ್ರಕರಣಗಳಲ್ಲಿ ₹ 56 ಸಾವಿರ, ಕಟ್ಟಡ ನಿರ್ಮಾಣ ಮತ್ತು ಉರುಳಿಸುವ ತ್ಯಾಜ್ಯ ಸುರಿಯುವ 25 ಪ್ರಕರಣಗಳಲ್ಲಿ ₹ 30,200, ತ್ಯಾಜ್ಯ ಸಮರ್ಪಕವಾಗಿ ವಿಂಡಣೆಯಾಗದ 22 ಪ್ರಕರಣಗಳಲ್ಲಿ ₹ 16 ಸಾವಿರ, ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡುವ 21 ಪ್ರಕರಣಗಳಲ್ಲಿ ₹ 2,300, ಸಾರ್ವಜನಿಕ ಸ್ಥಳಗಳನ್ನು ವಿರೂಪಗೊಳಿಸುವ 11 ಪ್ರಕರಣಗಳಲ್ಲಿ ₹ 26 ಸಾವಿರ ದಂಡ ಸಂಗ್ರಹಿಸಿದೆ ಎಂದು ತಿಳಿಸಿದ್ದಾರೆ.

ಕಂಡಲ್ಲೆಲ್ಲ ಕಸ ಹಾಕುವವರ ವಿರುದ್ಧ ಕ್ರಮ ಜರುಗಿಸಲು ನಗರದ ವಾಣಿಜ್ಯ ಮತ್ತು ವಸತಿ ಪ್ರದೇಶದಲ್ಲಿ ಪಾಲಿಕೆ ಸಿಬ್ಬಂದಿ ರಾತ್ರಿ ಹಗಲು ಪಾಳಿಯಲ್ಲಿ ಕಾರ್ಯನಿರ್ವಹಿಸಿ ಕಸ ಹಾಕುವವರನ್ನು ಹಿಡಿದು ಕೆಲವರಿಗೆ ತಿಳಿವಳಿಕೆ ನೀಡಿದ್ದಾರೆ. ಕೆಲವರಿಗೆ ದಂಡ ವಿಧಿಸಲಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT