ಗುರುವಾರ , ಆಗಸ್ಟ್ 11, 2022
21 °C

49 ಮಳಿಗೆಗೆ ಬೀಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಧುಗಿರಿ: ಪುರಸಭೆಗೆ ಸೇರಿದ ವಾಣಿಜ್ಯ ಮಳಿಗೆಗಳನ್ನು ಭೋಗ್ಯ ಪಡೆದವರು ಖಾಲಿ ಮಾಡಲು ಹಿಂದೇಟು ಹಾಕಿದ್ದರಿಂದ ಪೊಲೀ
ಸರ ಸಮ್ಮುಖದಲ್ಲಿ ಬುಧವಾರ 49 ಅಂಗಡಿಗಳಿಗೆ ಅಧಿಕಾರಿಗಳು ಬೀಗ ಹಾಕಿದರು.

ಪುರಸಭೆಗೆ ಸೇರಿದ 87 ವಾಣಿಜ್ಯ ಮಳಿಗೆಗಳ ಒಪ್ಪಂದ ವನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶ ನೀಡಿತ್ತು. ಈಗಾಗಲೇ ಬಾಡಿಗೆದಾರರಿಗೆ ಮಳಿಗೆ ಖಾಲಿಮಾಡುವಂತೆ ನೋಟಿಸ್ ನೀಡ ಲಾಗಿತ್ತು. ಆದರೆ ಬಾಡಿಗೆದಾರರು ನೋಟಿಸ್‌ಗೆ ಉತ್ತರ ನೀಡದೇ ವ್ಯಾಪಾರ ಮುಂದುವರೆಸಿದ್ದರು.

ಬುಧವಾರ ಬೆಳಿಗ್ಗೆ ಪುರಸಭೆ ಅಧಿಕಾರಿಗಳು ಹಾಗೂ ಪೊಲೀಸರ ತೆರಳಿ ಸಾಮಗ್ರಿಗಳ ಸಮೇತ ಮಳಿಗೆಗಳಿಗೆ ಬೀಗ ಹಾಕಿದ್ದಾರೆ.

ಪುರಸಭೆ ಮುಖ್ಯಾಧಿಕಾರಿ ಅಮರನಾರಾಯಣ ಮಾತನಾಡಿ, ಈಗಾಗಲೇ 7 ಅಂಗಡಿಗಳು ಖಾಲಿಯಾಗಿದ್ದು, 49 ಅಂಗಡಿಗಳಿಗೆ ಬೀಗ ಹಾಕಲಾಗಿದೆ. 7 ದಿನಗಳಲ್ಲಿ ಅಂಗಡಿಯೊಳಗಿರುವ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲು ಕಾಲಾವಕಾಶ ನೀಡಲಾಗಿದೆ ಎಂದರು.

ಸಿಪಿಐ ಎಂ.ಎಸ್.ಸರ್ದಾರ್, ಸಿಪಿಐ ಮಂಗಳಗೌರಮ್ಮ , ಹನುಮಂತರಾಯಪ್ಪ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.