ಶನಿವಾರ, ಜುಲೈ 2, 2022
25 °C

ತುಮಕೂರು: ಚಿಕ್ಕರಸನಹಳ್ಳಿಯಲ್ಲಿ ಎರಡು ಕರಡಿ ಪ್ರತ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕೊರಟಗೆರೆ ತಾಲ್ಲೂಕಿನ ತೋವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕರಸನಹಳ್ಳಿಯಲ್ಲಿ ಶುಕ್ರವಾರ ಎರಡು ಕರಡಿಗಳು ಪ್ರತ್ಯಕ್ಷವಾಗಿ, ಅರಣ್ಯ ಇಲಾಖೆಯ ಸಿಬ್ಬಂದಿ ಕೈಗೆ ಸಿಗದೆ ಸಂಜೆ ತಪ್ಪಿಸಿಕೊಂಡು ಓಡಿ ಹೋಗಿವೆ.

ಗ್ರಾಮದ ಕುರುಚಲ ಗಿಡಗಳ ಮಧ್ಯೆ ಶುಕ್ರವಾರ ದಿನ ಪೂರ್ತಿ ಇದ್ದವು. ವಿಶಾಲವಾದ ಜಾಗದಲ್ಲಿ ಗಿಡಗಳ ನಡುವೆ ಕರಡಿಗಳು ಕಣ್ಣಿಗೆ ಕಾಣದೆ ವಾಸ್ತವ್ಯ ಮಾಡಿದ್ದವು. 

ಅರಣ್ಯ ಇಲಾಖೆ ಸಿಬ್ಬಂದಿ ಸುತ್ತಮುತ್ತಲಿನ ಹಳ್ಳಿಗಳ ಜನರನ್ನು ಮನೆಯಿಂದ ಹೊರ ಬರದಂತೆ ಪ್ರಚಾರ ಮಾಡಿ, ಸಂಜೆ ಬೇಲಿಯಿಂದ ಕರಡಿಗಳು ಹೊರ ಬರುವಂತೆ ಮಾಡುವಲ್ಲಿ ಯಶಸ್ವಿಯಾದರು. ಕರಡಿಗಳನ್ನು  ಯುವಕರು ಅಟ್ಟಿಸಿಕೊಂಡು ಓಡಿ ಹೋಗುವುದನ್ನು ತಡೆಯಲು ಅರಣ್ಯ ಇಲಾಖೆಯ ಸಿಬ್ಬಂದಿ ಶ್ರಮ ಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು